ಸಿದ್ದರಾಮಯ್ಯಗೆ ಸಿಎಂ ಪಟ್ಟ: ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿ ನಿಜವಾಯ್ತಾ?


ಹಾವೇರಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಶ್ರೀಕ್ಷೇತ್ರ ಮೈಲಾರಲಿಂಗೇಶ್ವರನ ಈ ಬಾರಿಯ ಕಾರ್ಣಿಕ ನುಡಿ ಸಿದ್ದರಾಮಯ್ಯ ಸಿಎಂ ಆಗುವ ಮೂಲಕ ನಿಜವಾಗಿದೆ. 

2023ರ ಫೆಬ್ರುವರಿಯಲ್ಲಿ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವದಲ್ಲಿ ಗೊರವಪ್ಪ ರಾಮಣ್ಣ 'ಅಂಬಲಿ ಅಳಿಸಿತು ಕಂಬಳಿ ಬೀಸಿತಲೆ ಪರಾಕ್' ಎಂದು ಕಾರ್ಣಿಕ ನುಡಿದಿದ್ದ. ಅದರಂತೆ ಈ ವರ್ಷದ ಮಳೆ ಬೆಳೆ ಮತ್ತು ರಾಜಕೀಯ ವಿಶ್ಲೇಷಣೆ ಮಾಡಲಾಗಿತ್ತು. ಕುರುಬ ಸಂಕೇತವಾದ ಕಂಬಳಿ ಕಾರ್ಣಿಕದಲ್ಲಿ ಬಳಕೆಯಾಗಿದೆ. ಇದರಿಂದ ಈ ಕುರುಬ ಸಮಾಜಕ್ಕೆ ಉನ್ನತ ಸ್ಥಾನ ಸಿಗಲಿದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು.

ಈ ಕುರಿತಂತೆ ಮಾತನಾಡಿದ ಶ್ರೀಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ನುಡಿ ಸತ್ಯವಾಗಿದೆ ಎಂದು ವಿವರಣೆ ನೀಡಿದರು. ಅಂಬಲಿ ಹಳಸಿತು ಎಂದರೆ ರಾಜಕೀಯ ವಲಯದಲ್ಲಿ ಸಾಕಷ್ಟು ಪೈಪೋಟಿ ನಡೆಯುತ್ತದೆ. ಕಂಬಳಿ ಬೀಸಿತಲೇ ಎಂದರೇ ಕಂಬಳಿ ಕುರುಬ ಸಮಾಜಕ್ಕೆ ಪವಿತ್ರವಾದದ್ದು ಅದು ಬೀಸುವುದರಿಂದ ಎಲ್ಲವೂ ತಿಳಿಯಾಗುತ್ತದೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಮೂಲಕ ಕುರುಬ ಸಮಾಜ ಉನ್ನತ ಹುದ್ದೆ ಅಲಂಕರಿಸಲಿದೆ ಎಂದು ತಿಳಿಸಿದ್ದರು.

ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಮೂಲಕ  ಮೈಲಾರಲಿಂಗೇಶ್ವರ ಫೆಬ್ರವರಿಯಲ್ಲಿ ನುಡಿದ ನುಡಿ ಸತ್ಯವಾಗಿದೆ‌. ಮೈಲಾರಲಿಂಗೇಶ್ವರನೇ ಗೊರವಯ್ಯನ ರೂಪದಲ್ಲಿ ಬಂದು ಕಾರ್ಣಿಕ ನುಡಿಯುತ್ತಾನೆ. ಕಾರ್ಣಿಕ ನುಡಿಯುವ ಗೊರವಪ್ಪ ಹಲವು ದಿನಗಳ ಕಾಲ ಉಪವಾಸವಿರುತ್ತಾನೆ. ಕೇವಲ ಬಾಳೆಹಣ್ಣು ಮತ್ತು ಭಂಡಾರದ ನೀರು ಕುಡಿದು ಕಾರ್ಣಿಕ ದಿನದಂದು 16 ಅಡಿಯ ಬಿಲ್ಲನೇರಿ ಕಾರ್ಣಿಕ ನುಡಿಯುತ್ತಾನೆ.

BREAKING NEWS
Loading latest news...
Join our WhatsApp Channel Powered By : Online Pudu