-->

ಮಂಗಳೂರು: ಏರ್ಪೋರ್ಟ್ ರನ್ ವೇನಲ್ಲಿ ವಿದ್ಯುತ್ ಸಮಸ್ಯೆ - ವಿಮಾನ ಲ್ಯಾಂಡಿಂಗ್, ಟೇಕಾಫ್ ಗೆ ಅಡಚಣೆ

ಮಂಗಳೂರು: ಏರ್ಪೋರ್ಟ್ ರನ್ ವೇನಲ್ಲಿ ವಿದ್ಯುತ್ ಸಮಸ್ಯೆ - ವಿಮಾನ ಲ್ಯಾಂಡಿಂಗ್, ಟೇಕಾಫ್ ಗೆ ಅಡಚಣೆ


ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಮುಂಬೈನಿಂದ ಬಂದಿದ್ದ ಇಂಡಿಗೋ 6E5188 ವಿಮಾನವನ್ನು ಕಣ್ಣೂರು ವಿಮಾನ ನಿಲ್ದಾಣಕ್ಕೆ ಡೈವರ್ಟ್ ಮಾಡಿರುವ ಘಟನೆ ನಡೆದಿದೆ.

ಮಂಗಳೂರು ಏರ್ಪೋರ್ಟ್ ನಲ್ಲಿ ರನ್ ವೇಯಲ್ಲಿರುವ ದೀಪಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್ ಆಫ್ ಆಗಿತ್ತು. ಪವರ್ ಫೈಲ್ಯೂರ್ ಸಮಸ್ಯೆಯಿಂದ ಮುಂಬೈನಿಂದ ಆಗಮಿಸಿದ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗದೆ ಎಟಿಸಿ ಸೂಚನೆ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರು ಏರ್ಪೋರ್ಟ್ ನಲ್ಲಿ ಲ್ಯಾಂಡ್ ಆಗಿದೆ.

ಈ ತಾಂತ್ರಿಕ ಸಮಸ್ಯೆ ಸರಿಪಡಿಸುವವರೆಗೆ ಏರ್ಪೋರ್ಟ್ ನಲ್ಲಿ ಲ್ಯಾಂಡಿಂಗ್, ಟೇಕಾಫ್ ಸ್ಥಗಿತವಾಗಿತ್ತು. ಏರ್ ಪೋರ್ಟ್ ಸಿಬ್ಬಂದಿಯಿಂದ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕೆಲಸ ಆರಂಭವಾಗಿದೆ. ಕೆಲವೇ ಹೊತ್ತಿನಲ್ಲಿ ತಾಂತ್ರಿಕ ಸಮಸ್ಯೆ ಸರಿಪಡಿಸಿ ಮತ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಈ ನಡುವೆ ಬಹರೈನ್ ಗೆ ತೆರಳಬೇಕಿದ್ದ ಏರ್ ಇಂಡಿಯಾ IX 789 ಸಂಚಾರ ವಿಳಂಬವಾಗಿತ್ತು. ಅಲ್ಲದೆ ಚೆನ್ನೈ ಹಾಗೂ ಬೆಂಗಳೂರಿನಿಂದ ಬರಬೇಕಿದ್ದ ವಿಮಾನಗಳ ಲ್ಯಾಂಡಿಂಗ್ ವಿಳಂಬವಾಯಿತು.

*ಮತ್ತೆ ಯಥಾಸ್ಥಿತಿಗೆ ಏರ್ಪೋರ್ಟ್*


ಶೀಘ್ರದಲ್ಲೇ ಮಂಗಳೂರು ವಿಮಾನ ನಿಲ್ದಾಣದ ರನ್ ವೇನಲ್ಲಿ ಲೈಟಿಂಗ್ ವ್ಯವಸ್ಥೆಯನ್ನು ಇಂಜಿನಿಯರ್ ಗಳ ತಂಡ ಸರಿಪಡಿಸಿದೆ. ಆದ್ದರಿಂದ ಮತ್ತೆ ವಿಮಾನಗಳ ಹಾರಾಟಕ್ಕೆ ಏರ್ಪೋರ್ಟ್ ರನ್ ವೇ ತೆರೆದುಕೊಂಡಿದೆ. ಇಂದು ರಾತ್ರಿ 7.30 ರಿಂದ 9.30ರವರೆಗೆ ಏರ್ಪೋರ್ಟ್ ರನ್ ವೇನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಸುಮಾರು ಎರಡು ಗಂಟೆಗಳ ಕಾಲ ವಿಮಾನಗಳ ಹಾರಾಟ ಸ್ಥಗಿತಗೊಂಡಿತ್ತು. ಸದ್ಯ ಮತ್ತೆ ವಿಮಾನಗಳ ಲ್ಯಾಂಡಿಂಗ್, ಟೇಕಾಫ್ ಗೆ ಮುಕ್ತವಾಗಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article