-->
ಜಾಕ್ವೆಲಿನ್ ಗೆ kiss ಮಾಡಿದ ಬಳಿಕ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

ಜಾಕ್ವೆಲಿನ್ ಗೆ kiss ಮಾಡಿದ ಬಳಿಕ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

 

 


ಸಲ್ಮಾನ್ ಖಾನ್ ಅವರು ಬಾಲಿವುಡ್ನಲ್ಲಿ ಬೇಡಿಕೆಯ ನಟ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಅನೇಕ ಹೀರೋಯಿನ್ ಗಳ  ಜೊತೆಗೆ  ಒಳ್ಳೆಯ ಒಡನಾಟ ಇದೆ. ಹಲವರನ್ನು  ಸಿನಿಮಾರಂಗಕ್ಕೆ ಪರಿಚಯಿಸಿದ ಖ್ಯಾತಿಯು ಅವರಿಗೆ ಇದೆ. ಸಲ್ಮಾನ್ ಖಾನ್  ಅನೇಕರ ಜೊತೆ ರಿಲೇಶನ್ಶಿಪ್ ನಲ್ಲಿದ್ದರು. ಆದರೆ, ಯಾರನ್ನೂ ವಿವಾಹ ಆಗಿಲ್ಲ. ಹೀಗೇಕೆ ಎನ್ನುವ ಪ್ರಶ್ನೆಗೆ ಅವರ ಬಳಿಯೂ ಉತ್ತರ ಇಲ್ಲ. ಈಗ ಸಲ್ಮಾನ್ ಖಾನ್ ಅವರ ಹೊಸ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಫ್ಯಾನ್ಸ್ ಕೂಡ ಅಚ್ಚರಿಗೊಂಡಿದ್ದಾರೆ.

2014ರಲ್ಲಿ ರಿಲೀಸ್ ಆದ ಸಲ್ಮಾನ್ ಖಾನ್ ನಟನೆಯಕಿಕ್ಚಿತ್ರದಲ್ಲಿ ಜಾಕ್ವೆಲಿನ್ ನಟನೆ ಮಾಡಿದ್ದರು. ಈ ಚಿತ್ರದಿಂದ ಅವರ ಬೇಡಿಕೆಯು ಹೆಚ್ಚಿತು. ಅಲ್ಲಿಂದ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಸಲ್ಲು ನಟನೆಯರೇಸ್ 3’ ಚಿತ್ರದಲ್ಲಿ ಅವರು ನಟಿಸಿದರೆ, ‘ರಾಧೆಚಿತ್ರದ ವಿಶೇಷ ಹಾಡಿಗೆ ಹೆಜ್ಜೆಯನ್ನು ಹಾಕಿದರು. ಕೊವಿಡ್ ಸಂದರ್ಭದಲ್ಲಿ ಉಂಟಾದ ಲಾಕ್ಡೌನ್ ವೇಳೆ ಸಲ್ಲು ಫಾರ್ಮ್ಹೌಸ್ನಲ್ಲಿ ಜಾಕ್ವೆಲಿನ್ ಉಳಿದುಕೊಂಡಿದ್ದರು.

ಈಗ ಸಲ್ಲು ಅವರ ಹೊಸ ವಿಡಿಯೋ ವೈರಲ್ ಆಗಿದೆ. ಜಾಕ್ವೆಲಿನ್ ಅವರು ನಿಂತುಕೊಂಡಿದ್ದರು. ಅಲ್ಲಿಗೆ ಬಂದು ಸಲ್ಲು ಅವರು ಜಾಕ್ವೆಲಿನ್ ಕೆನ್ನೆಗೆ ಕಿಸ್ ಮಾಡುತ್ತಾರೆ. ಮೂಲೆಗೆ ಹೋಗಿ ಟಿ-ಶರ್ಟ್ನಲ್ಲಿ ಬಾಯಿಯನ್ನು ಒರೆಸಿಕೊಂಡಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಸದ್ಯ ವೈರಲ್ ಆಗುತ್ತಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ‘ಜಾಕ್ವೆಲಿನ್ ಮೇಕಪ್ ಸಲ್ಲು ಬಾಯಿಗೆ ಅಂಟಿದೆಎಂದು ಹಲವರು ಹೇಳಿದ್ದಾರೆ

ಜಾಕ್ವೆಲಿನ್ ಫರ್ನಾಂಡಿಸ್ ಅವರು ಸದ್ಯ ವಿವಾದದ ಮೂಲಕ ಸುದ್ದಿ ಆಗುತ್ತಿರುವ ನಟಿ. ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರೂ  ಕೂಡ ಇದೆ. ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್  ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಸುಕೇಶ್ನಿಂದ ಹಲವು ಐಷಾರಾಮಿ ಗಿಫ್ಟ್ಗಳನ್ನು ಜಾಕ್ವೆಲಿನ್  ಪಡೆದಿದ್ದರು.

 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article