ನವದೆಹಲಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹಾಗೂ ಸಮಾಜವಾದಿ ಪಕ್ಷದ ಯುವ ಮುಖಂಡ ಫಹಾದ್ ಅಹ್ಮದ್ ವಿವಾಹ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇಬ್ಬರೂ ಕಳೆದ ಜನವರಿ 6 ರಂದು ವಿಶೇಷ ವಿವಾಹ ಕಾಯ್ದೆಯಡಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು.
ಇದೀಗ ಸ್ವರಾ ಭಾಸ್ಕರ್ ಅವರ ಕುಟುಂಬದವರ ಬಯಕೆಯಂತೆ ಫಹಾದ್ ರೊಂದಿಗೆ ಸ್ವರಾ ಹಿಂದೂ ಸಂಪ್ರದಾಯದಂತೆ ಮದುವೆಯಾಗುತ್ತಿದ್ದಾರೆ. ಆದ್ದರಿಂದ ತಮ್ಮ ಪ್ರೀತಿಯನ್ನು ಹೇಳುವ ಮಾದರಿಯಲ್ಲಿ ವಿಶೇಷ ವಿನ್ಯಾಸದ ಲಗ್ನ ಪತ್ರಿಕೆಯನ್ನೂ ವಿನ್ಯಾಸಗೊಳಿಸಲಾಗಿದೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೀಗ ತಮ್ಮ ಸಂಪ್ರದಾಯಬದ್ಧ ಮದುವೆಗೂ ಮುನ್ನ ಹಳದಿ ಶಾಸ್ತ್ರದಲ್ಲಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಪಾಲ್ಗೊಂಡಿದ್ದಾರೆ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.