ಮಸೀದಿಗೆ ನುಗ್ಗಿ 'ಜೈ ಶ್ರೀರಾಮ್' ಹೇಳಲು ನಿರಾಕರಿಸಿದ ಇಮಾಮ್ ಗೆ ಹಲ್ಲೆಗೈದು, ಗಡ್ಡ ಕತ್ತರಿಸಿದ ದುಷ್ಕರ್ಮಿಗಳು


ಹೊಸದಿಲ್ಲಿ: ಮಹಾರಾಷ್ಟ್ರದ ಅನ್ವ ಗ್ರಾಮದಲ್ಲಿ ಮಸೀದಿಗೆ ನುಗ್ಗಿದ ಗುಂಪೊಂದು ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಇಮಾಮ್‌ಗೆ 'ಜೈ ಶ್ರೀ ರಾಮ್‌' ಎಂದು ಹೇಳಲು ಬಲವಂತಪಡಿಸಿ ಬಳಿಕ ಹಲ್ಲೆಗೈದ ಘಟನೆ ರವಿವಾರ ಸಂಜೆ ಸುಮಾರು 7.30ಕ್ಕೆ ನಡೆದಿದೆ.

ದುಷ್ಕರ್ಮಿಗಳ ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಇಮಾಮ್ ರನ್ನು ಝಕೀರ್ ಸಯ್ಯದ್ ಖಾಜಾ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳ ದಾಳಿ ವೇಳೆ ತಾನು ಮಸೀದಿಯೊಳಗೆ ಕುಳಿತುಕೊಂಡು ಕುರ್  ಆನ್ ಓದುತ್ತಿದ್ದುದಾಗಿ ಅವರು ತಿಳಿಸಿದ್ದಾರೆ.

ಮುಖಕ್ಕೆ ಬಟ್ಟೆಗಳನ್ನು ಸುತ್ತಿದ್ದ ದುಷ್ಕರ್ಮಿಗಳ ಗುಂಪೊಂದು ಮಸೀದಿ ಪ್ರವೇಶಿಸಿ 'ಜೈ ಶ್ರೀ ರಾಮ್' ಹೇಳಲು ಒತ್ತಾಯಿಸಿದೆ. ಇಮಾಮ್ ಶ್ರೀರಾಮ ನಾಮವನ್ನು ಹೇಳಲು ಹಿಂದೇಟು ಹಾಕಿದಾಗ ದುಷ್ಕರ್ಮಿಗಳು ಅವ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಪ್ರಜ್ಞೆ ತಪ್ಪಿಸಲು ರಾಸಾಯನಿಕ ಬೆರೆಸಿದ ಬಟ್ಟೆ ಬಳಸಿದ್ದರು ಎಂದು ಇಮಾಮ್ ಹೇಳಿದ್ದಾರೆ. ತಮಗೆ ಎಚ್ಚರವಾದಾಗ ತಮ್ಮ ಗಡ್ಡ ಕತ್ತರಿಸಿರುವುದು ತಿಳಿದು ಬಂತು ಎಂದು ಅವರು ಹೇಳಿದ್ದಾರೆ.

ರಾತ್ರಿ 8ಗಂಟೆಗೆ ಮಸೀದಿಗೆ ಬಂದವರು ನೋಡಿದಾಗ ಬಂದಾಗ ಇಮಾಮ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಆದ್ದರಿಂದ ಅವರನ್ನು ಸಿಲ್ಲೊಡ್ ಎಂಬಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಅಲ್ಲಿಂದ ಅವರನ್ನು ಔರಂಗಾಬಾದ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಅಪರಿಚಿತರ ವಿರುದ್ಧ ಐಪಿಸಿ ಸೆಕ್ಷನ್ 452, 323 ಮತ್ತು 34 ಅನ್ವಯ ಬೋಕರ್ಡನ್ ಇಲ್ಲಿನ ಪರದ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಘಟನೆ ನಂತರ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಅನ್ನು ಹೆಚ್ಚಿಸಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu