-->

ಈಶ್ವರಪ್ಪ ವಿರುದ್ಧ ತಿರುಗಿಬಿದ್ದ ಆಯನೂರು: ಟಿಕೆಟ್ ಆಕಾಂಕ್ಷಿ ಎಂದ ಬಿಜೆಪಿ ನಾಯಕ

ಈಶ್ವರಪ್ಪ ವಿರುದ್ಧ ತಿರುಗಿಬಿದ್ದ ಆಯನೂರು: ಟಿಕೆಟ್ ಆಕಾಂಕ್ಷಿ ಎಂದ ಬಿಜೆಪಿ ನಾಯಕ

ಈಶ್ವರಪ್ಪ ವಿರುದ್ಧ ತಿರುಗಿಬಿದ್ದ ಆಯನೂರು: ಟಿಕೆಟ್ ಆಕಾಂಕ್ಷಿ ಎಂದ ಬಿಜೆಪಿ ನಾಯಕ





ಈಶ್ವರಪ್ಪ ಅವರ ಹರಕು ಬಾಯಿಯಿಂದ ಎಗ್ಗಿಲ್ಲದೆ ಬರುತ್ತಿರುವ ಹೇಳಿಕೆಗಳು ಬಿಜೆಪಿಗೆ ಮುಜುಗರ ತರುತ್ತಿದೆ. ಬಿಜೆಪಿಗೆ ಧಕ್ಕೆ ತರುವ ಮಾತನ್ನು ಯಾರೇ ಆಡಿದರೂ ಸ್ವೀಕರಿಸಬೇಕು ಎಂಬ ಬಲವಂತ ನಮಗಿಲ್ಲ. ಸಂಘಟನೆಯ ಹಿತದೃಷ್ಟಿಯಿಂದ ಹೀಗೆಲ್ಲ ಮಾತನಾಡುವುದು ಸರಿಯಲ್ಲ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.



ಈ ಮೂಲಕ ಬಿಜೆಪಿ ನಾಯಕ ಈಶ್ವರಪ್ಪ ಅವರಿಗೆ ನೇರವಾಗಿ ಠಕ್ಕರ್ ನೀಡಿದ್ದಾರೆ. ಯಾವುದೋ ಧರ್ಮದ ದೇವರು ಕಿವುಡನೋ, ಕುರುಡನೋ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡುವುದು ಬೇಡ ಎಂದು ನೇರವಾಗಿ ಈಶ್ವರಪ್ಪ ಹೇಳಿಕೆಯನ್ನು ಆಯನೂರು ಖಂಡಿಸಿದ್ದಾರೆ.



ಈಶ್ವರಪ್ಪ ಹಿರಿಯ ಮತ್ತು ಪ್ರಬುದ್ಧ ರಾಜಕಾರಣಿ. ಅವರಿಂದ ನಾವು ಜವಾಬ್ದಾರಿಯುತ ಹೇಳಿಕೆಯನ್ನು ನಿರೀಕ್ಷಿಸುತ್ತೇವೆ ಎಂದು ಅವರು ಹೇಳಿದರು.



ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ. ಮುರಿದ ಮನಸ್ಸುಗಳ ಬೆಸುಗೆಯಾಗಲಿ. ಮುರಿದ ಮನಸ್ಸುಗಳ ಬೆಸುಗೆಯಾಲಿ. ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದ ನೆಲಸಲಿ ಎಂದು ಆಯುನೂರು ಮಂಜುನಾಥ್ ಜಿಲ್ಲೆಯಾದ್ಯಂತ ಫ್ಲೆಕ್ಸ್‌ ಮಾಡಿ ಯುಗಾದಿ ಮತ್ತು ರಮ್ಜಾನ್‌ಗೆ ಶುಭಕೋರಿದ್ದರು.



ಬಿಜೆಪಿ ಟಿಕೆಟ್ ನಿರೀಕ್ಷಿಸುತ್ತಿದ್ದೆನೆ. ನಾನು ಶಿವಮೊಗ್ಗ ನಗರ ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂದ ಅವರು, ಈಶ್ವರಪ್ಪ ತಮ್ಮ ಮಗನಿಗೆ ಟಿಕೆಟ್ ಕೇಳಿದ್ದಾರೆ. ಅವರಿನ್ನೂ ಚಿಕ್ಕವರು. ನಾವು ಸರದಿಯ ಸಾಲಿನಲ್ಲಿ ಮುಂದಿದ್ದೇವೆ. ನಮ್ಮನ್ನು ಟಿಕೆಟ್‌ಗೆ ಪರಿಗಣಿಸಿ ಎಂದು ಆಯನೂರು ಮಂಜುನಾಥ್ ಮಾಧ್ಯಮಕ್ಕೆ ಹೇಳಿದ್ದಾರೆ.


ಇದೇ ವೇಳೆ, ಈ ಬೆಳವಣಿಗೆ ಬಿಜೆಪಿಯಲ್ಲಿ ಇರಿಸು-ಮುರುಸು ತಂದಿದೆ. ಆಯನೂರು ಹಾಕಿರುವ ಫ್ಲೆಕ್ಸ್‌ಗಳನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೇಲಿನವರಿಗೂ ವರದಿ ನೀಡಲಾಗಿದೆ. ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮೇಘರಾಜ್ ಟಿ.ಡಿ. ಪ್ರತಿಕ್ರಿಯೆ ನೀಡಿದ್ದಾರೆ.

.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article