-->
ಬಂಟ್ವಾಳ (BANTWAL) ದಲ್ಲಿ ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್  ಗೆ ಟಿಕೆಟ್ ಪಕ್ಕಾ?

ಬಂಟ್ವಾಳ (BANTWAL) ದಲ್ಲಿ ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್ ಗೆ ಟಿಕೆಟ್ ಪಕ್ಕಾ?

 

 


ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಗೆ ಇನ್ನೆನು ಕೆಲವೆ ದಿನಗಳು ಬಾಕಿಯಿದೆ.  ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರದಲ್ಲಿ ಬಜೆಪಿ ಮತ್ತು ಕಾಂಗ್ರೆಸ್ ಪ್ರಬಲ ಎದುರಾಳಿ ಪಕ್ಷ. ಈ ಪಕ್ಷದಿಂದ ಈ ಬಾರಿ ಸ್ಪರ್ಧಿಸಲು ಎರಡು ಪಕ್ಷಗಳು ಅಧಿಕೃತವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದರೂ ಕಾಂಗ್ರೆಸ್ ಪಕ್ಷದಿಂದ ರಮಾನಾಥ ರೈ ಮತ್ತು ಬಿಜೆಪಿ ಪಕ್ಷದಿಂದ ರಾಜೇಶ್ ನಾಯ್ಕ್ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ.

 

 ಈ ಭಾರಿ ಕಾಂಗ್ರೆಸ್ ಪಕ್ಷವು ಟಿಕೆಟ್ ಆಕಾಂಕ್ಷಿಗಳಿಗೆ  ಎರಡು ಲಕ್ಷ ರೂ ನೀಡಿ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಬಂಟ್ವಾಳ ಕ್ಷೇತ್ರದಲ್ಲಿ ಬಿ ರಮಾನಾಥ ರೈ ಪ್ರಭಾವಿಯಾದರೂ ಕಅಂಗ್ರೆಸ್ ಟಿಕೆಟ್ ಗೆ ಅರ್ಜಿ ಯನ್ನು ಇತರರು ಸಲ್ಲಿಸಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.  ಬಂಟ್ವಾಳ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗೆ   ರಮಾನಾಥ ರೈ,ಅಶ್ವಿನ್ ರೈ , ರಾಕೇಶ್ ಮಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರ ನಡುವೆ ಜನಾರ್ದನ ಪೂಜಾರಿ ಬೆಂಬಲಿಗ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಖಜಾಂಚಿ , ಬಿಲ್ಲವ ಮುಖಂಡ ಪದ್ಮರಾಜ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ರಮಾನಾಥ ರೈ ಅವರಿಗೆ ಟಿಕೆಟ್ ಪಕ್ಕಾ ಆಗಿದೆ.

 

ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಪ್ರಚಾರವನ್ನು ಆರಂಭಿಸಿದರೂ ಕಾಂಗ್ರೆಸ್ ಮೌನವಾಗಿತ್ತು. ಟಿಕೆಟ್ ಪಕ್ಕಾ ಆಗದಿರುವುದರಿಂದ ಕಾಂಗ್ರೆಸ್ ನಲ್ಲಿ ಪ್ರಚಾರವು ಆರಂಭವಾಗಿರಲಿಲ್ಲ.ಇದೀಗ ಕಾಂಗ್ರೆಸ್ ನಿಂದ ರಮಾನಾಥ ರೈ ಗೆ ಟಿಕೆಟ್ ಪಕ್ಕಾ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆಯೆಲ್ಲಿಯೆ ಮಾರ್ಚ್ 10 ರಿಂದ ಯಾತ್ರೆ ಮೂಲಕ ರಮಾನಾಥ ರೈ ಅವರು ಪ್ರಚಾರಕ್ಕೆ ಧುಮುಕಲಿದ್ದಾರೆ.

 

ರಮಾನಾಥ ರೈ ಗೆ ಟಿಕೆಟ್ ಪಕ್ಕಾ ಆಗಿದ್ದರೂ ಟಿಕೆಟ್ ಘೋಷಣೆ ಆಗದಿರುವುದರಿಮದ ಟಿಕೆಟ್ ಆಕಾಂಕ್ಷಿಗಳಲ್ಲಿ ಇನ್ನೂ ಆಸೆ ಜೀವಂತವಿದೆ.  ಟಿಕೆಟ್ ಘೋಷಣೆಯಾಗುವಾಗ ತಮ್ಮ ಪರ ಬರಲಿದೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ.

 

ಇನ್ನು ಬಿಜೆಪಿಯಲ್ಲಿ ರಾಜೇಶ್ ನಾಯ್ಕ್ ಅವರಿಗೆ ಟಿಕೆಟ್ ಸಿಗುವುದು ಪಕ್ಕಾ ಆಗಿದೆ.  ಹಾಲಿ ಶಾಸಕರಾಗಿರುವ ರಾಜೇಶ್ ನಾಯ್ಕ್ ಅವರಿಗೆ ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆಯೆ ಹೆಚ್ಚು.  ಬಂಟ್ವಾಳ ಕ್ಷೇತ್ರದಲ್ಲಿ ಹರಿಕೃಷ್ಣ ಬಂಟ್ವಾಳ ಅವರು ಬಿಜೆಪಿ ಟಿಕೆಟ್ ಗಾಗಿ ಕಣ್ಣಿಟ್ಟಿದ್ದರೂ ಅವರಿಗೂ ಸಿಗುವ ಸಾಧ್ಯತೆ ತೀರಾ ಕಡಿಮೆ. ಈಗಾಗಲೆ ರಾಜೇಶ್ ನಾಯ್ಕ್ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.

 

ಇನ್ನು ಎಸ್ ಡಿ ಪಿ ಐ ಸ್ಪರ್ಧಿಸಿದರೂ ಗೆಲ್ಲುವ ಪಕ್ಷವಾಗಿ ಬೆಳೆದಿಲ್ಲ. ಆದರೆ ಎಸ್ ಡಿ ಪಿ ಐ ಸ್ಪರ್ಧೆ ಕಾಂಗ್ರೆಸ್ ಮತಗಳನ್ನು ಕಸಿಯಬಹುದು ಎಂಬ ಆತಂಕ ಕಾಂಗ್ರೆಸ್ ನಲ್ಲಿ ಇದೆ.

 

ಕ್ಷೇತ್ರ ಪ್ರತಿನಿಧಿಸಿದ ಶಾಸಕರು

1952 -  ಬಿ.ವೈಕುಂಠ ಬಾಳಿಗಾ (ಕಾಂಗ್ರೆಸ್) (ಪಾಣೆಮಂಗಳೂರು ಕ್ಷೇತ್ರ)

1957 ಡಾ. ಕೆ. ನಾಗಪ್ಪ ಆಳ್ವ (ಕಾಂಗ್ರೆಸ್) (ಪಾಣೆಮಂಗಳೂರು ಕ್ಷೇತ್ರ)

1962   ಡಾ. ಕೆ.ನಾಗಪ್ಪ ಆಳ್ವ (ಕಾಂಗ್ರೆಸ್) (ಪಾಣೆಮಂಗಳೂರು ಕ್ಷೇತ್ರ)

1967  ಕೆ. ಲೀಲಾವತಿ ರೈ (ಕಾಂಗ್ರೆಸ್)

1972  ಬಿ.ವಿ.ಕಕ್ಕಿಲ್ಲಾಯ (ಸಿಪಿಐ)

1978 -  ಬಿ.ಎ.ಮೊಯಿದ್ದೀನ್ (ಕಾಂಗ್ರೆಸ್ ಐ)

1983  ಎನ್.ಶಿವರಾವ್ (ಬಿಜೆಪಿ)

1985  ಬಿ.ರಮಾನಾಥ ರೈ (ಕಾಂಗ್ರೆಸ್)

1989- ಬಿ.ರಮಾನಾಥ  ರೈ (ಕಾಂಗ್ರೆಸ್)

1994  ಬಿ.ರಮಾನಾಥ ರೈ (ಕಾಂಗ್ರೆಸ್)

1999  ಬಿ.ರಮಾನಾಥ ರೈ (ಕಾಂಗ್ರೆಸ್)

2004  ಬಿ.ನಾಗರಾಜ ಶೆಟ್ಟಿ (ಬಿಜೆಪಿ)

2008  ಬಿ.ರಮಾನಾಥ ರೈ (ಕಾಂಗ್ರೆಸ್)

2013  ಬಿ.ರಮಾನಾಥ ರೈ (ಕಾಂಗ್ರೆಸ್)

2018- ಯು.ರಾಜೇಶ್ ನಾಯ್ಕ್ (ಬಿಜೆಪಿ)


ಇದನ್ನು ಓದಿ - ಮಂಗಳೂರು ದಕ್ಷಿಣಕ್ಕೆ CONGRESS ಅಭ್ಯರ್ಥಿ ಯಾರು? BJP ಅಭ್ಯರ್ಥಿ ಬದಲಾಗುತ್ತಾ?

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article