ಮಂಗಳೂರು ದಕ್ಷಿಣಕ್ಕೆ CONGRESS ಅಭ್ಯರ್ಥಿ ಯಾರು? BJP ಅಭ್ಯರ್ಥಿ ಬದಲಾಗುತ್ತಾ?
ಮಂಗಳೂರು (EMUNGARU.COM): ಚುನಾವಣೆಗೆ ಇನ್ನು ಒಂದು ತಿಂಗಳೊಳಗೆ ಅಧಿಕೃತ ಘೋಷಣೆ ಹೊರಬೀಳಲಿದೆ. ಇದರ ನಡುವೆ ಮಂಗಳೂರು ಎರಡು ರಾಜಕೀಯ ಪಕ್ಷಗಳು ಭರ್ಜರಿ ತಯಾರಿಗಳನ್ನು
ನಡೆಸುತ್ತಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧಿಸುವ ಅಭ್ಯರ್ಥಿಗಳ್ಯಾರು ಎಂಬುದು
ಕುತೂಹಲ ಮೂಡಿಸಿದೆ.
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ವೇದವ್ಯಾಸ ಕಾಮತ್ ಆಯ್ಕೆಯಾಗುವ ಸಾಧ್ಯತೆಯೆ ಹೆಚ್ಚಿದೆ. ಕ್ಷೇತ್ರದಲ್ಲಿ ಐದು ವರ್ಷಗಳ ಕಾಲ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಈಗಾಗಲೇ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಹಾಲಿ ಶಾಸಕರಾಗಿರುವ ನೆಲೆಯಲ್ಲಿ ಅವರಿಗೆ ಬಿಜೆಪಿ ಟಿಕೇಟ್ ಸಿಗುವ ಸಾಧ್ಯತೆ ಇದೆ ಎಂಬುದು ಕೇಳಿ ಬರುತ್ತಿರುವ ಮಾತುಗಳು.
ಆದರೆ ಈ ಭಾರಿ ಅವರಿಗೆ ಟಿಕೆಟ್
ಕೈ ತಪ್ಪಲಿದೆ ಎಂಬ ಮಾತುಗಳು ಚಲಾವಣೆಯಲ್ಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು
ಎರಡು ತಿಂಗಳ ಹಿಂದೆ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಧ್ಯಮಗಳ ಮುಂದೆಯೆ ಟಿಕೆಟ್ ಕೊಡುವುದಿಲ್ಲ ಎಂಬ
ಮಾತನ್ನು ಆಡಿದ್ದರು. ತಮಾ಼ಷೆಯ ರೀತಿಯಲ್ಲಿ ಇದ್ದರೂ ಅದು ಗಂಭಿರ ಸಂದೆಶ ಎಂಬುದು ಕೇಳಿಬರುತ್ತಿರುವ ಮಾತುಗಳು. ಇದರ ಆಧಾರದಲ್ಲಿ ವೇದವ್ಯಾಸ ಕಾಮತ್ ಗೆ ಟಿಕೆಟ್
ಕೈ ತಪ್ಪುತ್ತಾ ಎಂಬುದು ಪ್ರಶ್ನೆ ಮೂಡಿಸಿದೆ.
ಇನ್ನು ಕಾಂಗ್ರೆಸ್ ನಲ್ಲಿ ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ದಂಡೆ ಇದೆ. ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ ಆರ್ ಲೋಬೋ ಈ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಆದರೆ ಜೆ ಆರ್ ಲೋಬೋ ಜೊತೆಗೆ ಈ ಕ್ಷೇತ್ರದ ಮೇಲೆ ಹಲವು ನಾಯಕರು ಕಣ್ಣಿಟ್ಟಿದ್ದಾರೆ. ಅಭ್ಯರ್ಥಿಗಳಾಗುವವರು ಎರಡು ಲಕ್ಷ ರೂ ಕಟ್ಟಬೇಕು ಎಂಬ ಕೆಪಿಸಿಸಿ ಆದೇಶದಂತೆ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು 8 ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಜೆ ಆರ್ ಲೋಬೋ, ಐವನ್ ಡಿಸೋಜ, ಶಾಲೆಟ್ ಪಿಂಟೋ, ಎ ಸಿ ವಿನಯರಾಜ್,ಲಾರೆನ್ಸ್ ಡಿಸೋಜ, ಅಶ್ವಿತ್ ಪಿರೇರ , ಮೆರಿಲ್ ರೇಗೋ ಮತ್ತು ವಿಶ್ವಾಸ್ ಕುಮಾರ್ ದಾಸ್ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿಸಲ್ಲಿಸಿದ್ದಾರೆ. ಇದರಲ್ಲಿ ಮಾಜಿ ಶಾಸಕರ ನೆಲೆಯಲ್ಲಿ ಜೆ ಆರ್ ಲೋಬೋ ಗೆ ಅಥವಾ ಸಿದ್ದರಾಮಯ್ಯ ಆಪ್ತ ರಾಗಿರುವ ಐವನ್ ಡಿಸೋಜ ಅವರಿಗೆ ಟಿಕೆಟ್ ಸಿಗಬಹುದೆಂಬುದು ಕೇಳಿ ಬರುತ್ತಿರುವ ಮಾತುಗಳು. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಪ್ರಾಬಲ್ಯ ಇರುವುದರಿಂದ ಮತ್ತು ಇತ್ತೀಚಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಕ್ರಿಶ್ಚಿಯನ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರುವುದರಿಂದ ಈ ಬಾರಿಯು ಕ್ರಿಶ್ಚಿಯನ್ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಇದರ ನಡುವೆ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಕುದ್ರೋಳಿ ಗೋಕರ್ಣ ನಾಥೇಶ್ವರ
ಕ್ಷೇತ್ರದ ಖಜಾಂಚಿ ಪದ್ಮರಾಜ್ ಆಸಕ್ತಿ ಹೊಂದಿದ್ದಾರೆ. ಜನಾರ್ದನ ಪೂಜಾರಿ ಅವರ ಆಪ್ತರಾಗಿರುವ ಪದ್ಮರಾಜ್
ಅವರು ಮಂಗಳೂರು ದಕ್ಷಿಣ ಕ್ಷೇತ್ರ , ಮಂಗಳೂರು ಉತ್ತರ ಮತ್ತು ಬಂಟ್ವಾಳ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ
ಎಂಬುದು ಕೇಳಿ ಬರುತ್ತಿರುವ ಮಾತುಗಳು. ಈ ಬಾರಿ ಬಿಲ್ಲವರಿಗೆ ಮೂರು ಸ್ಥಾನ ನೀಡಬೇಕು ಎಂಬ ಕೂಗು ಬಿಲ್ಲವ
ಸಮಾಜದಿಂದ ಕೇಳಿ ಬಂದಿದ್ದು, ಈ ಬೇಡಿಕೆಗೆ ಮನ್ನಣೆ
ಸಿಕ್ಕಿದರೆ ಪದ್ಮರಾಜ್ ಅವರಿಗೊಂದು ಅವಕಾಶ ಸಿಗಲಿದೆ ಎಂಬ ಸುದ್ದಿಯೂ ಇದೆ.
ಒಟ್ಟಿನಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್
ಪಕ್ಷದ ಅಭ್ಯರ್ಥಿಗಳ್ಯಾರು ಎಂಬುದು ಎರಡು ಪಕ್ಷಗಳು ಘೋಷಿಸಿದ ಬಳಿಕವಷ್ಟೆ ತಿಳಿಯಬಹುದಾಗಿದೆ.
ಇದನ್ನು ಓದಿ - ಬಂಟ್ವಾಳ (BANTWAL) ದಲ್ಲಿ ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್ ಗೆ ಟಿಕೆಟ್ ಪಕ್ಕಾ?