-->
ಲಿವಿಂಗ್ ರಿಲೇಷನ್ ಶಿಪ್ ಸಂಗಾತಿಯನ್ನು ಹತ್ಯೆ ಮಾಡಿದ ಯುವಕ: ಹಾಸಿಗೆಯಲ್ಲಿ ಮೃತದೇಹ ಮುಚ್ಚಿಟ್ಟು ಪರಾರಿಯಾದ ಹಂತಕ ಅರೆಸ್ಟ್

ಲಿವಿಂಗ್ ರಿಲೇಷನ್ ಶಿಪ್ ಸಂಗಾತಿಯನ್ನು ಹತ್ಯೆ ಮಾಡಿದ ಯುವಕ: ಹಾಸಿಗೆಯಲ್ಲಿ ಮೃತದೇಹ ಮುಚ್ಚಿಟ್ಟು ಪರಾರಿಯಾದ ಹಂತಕ ಅರೆಸ್ಟ್


ಮುಂಬೈ: ದೇಶವೇ ಬೆಚ್ಚಿ ಬೀಳಿಸುವಂತಹ ಶ್ರದ್ಧಾ ವಾಲ್ಕರ್ ಹತ್ಯೆಯ ರೀತಿಯಲ್ಲೇ ಲಿವಿಂಗ್‌ ರಿಲೇಷನ್ ಶಿಪ್ ಸಂಗಾತಿಯನ್ನು ಕೊಲೆಗೈದ ಘಟನೆಯೊಂದು ಮುಂಬಯಿ ನಗರದ ನಗರದ ನಲಸೋಪರಾದಲ್ಲಿ ನಡೆದಿದೆ.

ಮೇಘಾ ಧನ್ ಸಿಂಗ್ ಟೊರ್ವಿ(35) ಹತ್ಯೆಯಾದ ದುರ್ದೈವಿ, ಹಾರ್ದಿಕ್ ಶಾ(27) ಕೊಲೆ ಆರೋಪಿ. ಈತ ಕೊಲೆಯ ಬಳಿಕ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ರೈಲ್ವೇ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ಆರೋಪಿ ಹಾರ್ದಿಕ್ ಶಾ ನಲಸೋಪರಾದ ಸೀತಾ ಸದನ್ ಸೊಸೈಟಿಯಲ್ಲಿ ಮೇಘಾ ಧನ್ ಸಿಂಗ್ ಟೊರ್ವಿ ಅವರೊಂದಿಗೆ ವಾಸವಾಗಿದ್ದ. ಇವರಿಬ್ಬರೂ ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದರು. ಆದರೆ ರಿಯಲ್ ಎಸ್ಟೇಟ್ ಏಜೆಂಟ್, ಮನೆ ಮಾಲಿಕರು ಹಾಗೂ ಇತರ ನೆರೆಹೊರೆಯವರೊಂದಿಗೆ ತಾವು ದಂಪತಿಯೆಂದು ನಂಬಿಸಿದ್ದರು. ಆದರೆ ವರ್ಷಗಳ ತನ್ನ ಸಹ ಜೀವನನಡೆಸಿದ ಸಂಗಾತಿಯನ್ನೇ ಹಾರ್ದಿಕ್ ಶಾ ಕೊಂದು ಆಕೆಯ ಮೃತದೇಹವನ್ನು ಹಾಸಿಗೆಯಲ್ಲಿ ತುಂಬಿಸಿಟ್ಟು ಪರಾರಿಯಾಗಿದ್ದ.

ನಲಸೋಪರ ವಿಜಯ್ ನಗರ ಪ್ರದೇಶದಲ್ಲಿರುವ ಫ್ಲ್ಯಾಟ್‌ನಿಂದ ಕೆಟ್ಟ ವಾಸನೆ ಬರಲಾರಂಭಿಸುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಬಾಗಿಲು ಒಡೆದು ನೋಡಿದಾಗ ಮೇಘಾ ಅವರ ಮೃತದೇಹವು ಹಾಸಿಗೆಯಲ್ಲಿ ಮಡಿಚಿಟ್ಟು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆ ಬಳಿಕ ಪೊಲೀಸ್ ತನಿಖೆಯಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. 

ಆರೋಪಿ ಹಾರ್ದಿಕ್ ಶಾ ನಿರುದ್ಯೋಗಿಯಾಗಿದ್ದನು. ಆದ್ದರಿಂದ ಇವರಿಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಆದ್ದರಿಂದ ಶಾ, ಮೇಘಾಳನ್ನು ಹತ್ಯೆ ಮಾಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಹಾರ್ದಿಕ್ ಶಾನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಪಾಲ್ಸರ್ ಜಿಲ್ಲೆಯ ತುಲಿಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹಿರಿಯ ಇನ್ಸ್ಪೆಕ್ಟರ್ ಶೈಲೇಂದ್ರ ನಾಗರ್ಕಾರ್ ತಿಳಿಸಿದರು.

ಆರೋಪಿ ತನ್ನ ತಂಗಿಗೆ ಹತ್ಯೆಯ ಬಗ್ಗೆ ಸಂದೇಶ ಕಳುಹಿಸಿದ್ದ ಹಾಗೂ ಪರಾರಿಯಾಗುವ ಮೊದಲು ತನ್ನ ಫ್ಲಾಟ್‌ನಲ್ಲಿ ಪೀಠೋಪಕರಣಗಳನ್ನು ಮಾರಿದ್ದ. ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ನೋಂದಾಯಿಸಲಾಗಿದೆ ಹಾಗೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article