-->
ವಿವಾಹದ ಮುನ್ನಾ ದಿನ ವರ ನಾಪತ್ತೆ: ಆದರೆ ವಧುವಿನ ಕುಟುಂಬ ತೆಗೆದುಕೊಂಡ ನಿರ್ಧಾರದಿಂದ ಹುಬ್ಬೇರಿಸಿದ ಅತಿಥಿಗಳು

ವಿವಾಹದ ಮುನ್ನಾ ದಿನ ವರ ನಾಪತ್ತೆ: ಆದರೆ ವಧುವಿನ ಕುಟುಂಬ ತೆಗೆದುಕೊಂಡ ನಿರ್ಧಾರದಿಂದ ಹುಬ್ಬೇರಿಸಿದ ಅತಿಥಿಗಳು


ಕೊಟ್ಟಾಯಂ: ಮದುವೆ ಎಂಬುವುದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ತರ ಘಟ್ಟವಾಗಿದ್ದು, ಎಲ್ಲರೂ ಈ ಬಗ್ಗೆ ನೂರಾರು ಕನಸು ಕಂಡಿರುತ್ತಾರೆ. ತಮ್ಮ ಮದುವೆ ಇದೇ ರೀತಿ ನಡೆಯಬೇಕೆಂದು ಯೋಜನೆಯನ್ನು ರೂಪಿಸಿರುತ್ತಾರೆ. ಆದರೆ, ಕೆಲವೊಂದು ಬಾರಿ ಯಾವುದೇ ವಿಚಾರವು ಕೈಯಲ್ಲಿ ಏನೂ ಇಲ್ಲ ಎನ್ನುವಂತೆ ಮಾಡಿಬಿಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕೇರಳದಲ್ಲಿ ಒಂದು ಘಟನೆ ನಡೆದಿದೆ.

ಕೇರಳದ ಕೊಟ್ಟಾಯಂ ಥಲಯೋಲಪರಂಬುವಿನಲ್ಲಿ ನಾಳೆ ಮದುವೆ ಎಂದರೆ ಮದುವೆಯ ಹಿಂದಿನ ದಿನ ವರ ನಾಪತ್ತೆಯಾದ ಸಂಗತಿ ವಧುವಿನ ಕುಟುಂಬವನ್ನು ಆಘಾತಕ್ಕೆ ದೂಡಿತ್ತು ಆದರೆ, ಆ ಬಳಿಕ ವಧುವಿನ ಕುಟುಂಬ ನಡೆದುಕೊಂಡ ರೀತಿ ಮದುವೆಗೆ ಬಂದಿದ್ದ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತು. ವರ ನಾಪತ್ತೆಯಾಗಿದ್ದ ಮರು ದಿನವೇ ಅದೇ ಮುಹೂರ್ತದಲ್ಲಿ ಮದುವೆಗೆ ಬಂದಿದ್ದ ಯುವ ಅತಿಥಿ ಹಾಗೂ ಕಾಂಗ್ರೆಸ್ ಕಾರ್ಯಕರ್ತನೊಂದಿಗೆ ವಧುವಿನ ಮದುವೆಯಾಗಿದೆ. ಈ ಮೂಲಕ ವರನ ಕುಟುಂಬಕ್ಕೆ ವಧುವಿನ ಕುಟುಂಬ ಶಾಕ್ ನೀಡಿದೆ. ಯುವ ಕಾಂಗ್ರೆಸ್ ಕಾರ್ಯಕರ್ತ ಸುಮೀರ್ ವಧು ಕೊಟ್ಟೂರಿನ ಫಾತಿಮಾ ಶಹನಾಝ್ ಅವರನ್ನು ವಿವಾಹವಾಗಿದ್ದಾರೆ. 

ವಧುವಿನ ಕುಟುಂಬ ಮದುವೆಗೆ ಎಲ್ಲ ಸಿದ್ಧತೆಗಳನ್ನು ನಡೆಸಿತ್ತು. ಆದರೆ ಮದುವೆಯ ಮುನ್ನಾ ದಿನ ಥಲಯೋಲಪರಂಬುವಿನ ವರ ನಾಪತ್ತೆಯಾಗಿದ್ದಾನೆ. ಈ ವಿಚಾರ ವಧುವಿನ ಕುಟುಂಬವನ್ನು ಆಘಾತಕ್ಕೆ ತಳ್ಳಿತ್ತು. ಆದರೆ ಅದರ ಬೆನ್ನಲ್ಲೇ ಮದುವೆಗೆ ಬಂದಿದ್ದ ಸುಮೀರ್, ವಧುವನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾನೆ. ಬಳಿಕ ಎರಡು ಮನೆಯವರು ಒಪ್ಪಿ ನದ್ವತ್ ನಗರದ ಕೆಕೆಪಿಜೆ ಸಭಾಂಗಣದಲ್ಲಿ ಮೌಲ್ವಿ ನೇತೃತ್ವದಲ್ಲಿ ವಿವಾಹ ನೆರವೇರಿಸಿದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article