-->
ಕೇರಳದ ಅಪ್ರಾಪ್ತ ಪ್ರೇಯಸಿಯನ್ನು ಅಪಹರಿಸಿದ ಉತ್ತರ ಪ್ರದೇಶದ ಯುವಕ: ಈತನಿಗೆ ಕಾದಿತ್ತು ಶಾಕ್

ಕೇರಳದ ಅಪ್ರಾಪ್ತ ಪ್ರೇಯಸಿಯನ್ನು ಅಪಹರಿಸಿದ ಉತ್ತರ ಪ್ರದೇಶದ ಯುವಕ: ಈತನಿಗೆ ಕಾದಿತ್ತು ಶಾಕ್



ಮಲಪ್ಪುರಂ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ 16ರ ಬಾಲಕಿಯನ್ನು ಹುಡುಕಿಕೊಂಡು ಕೇರಳಕ್ಕೆ ಬಂದಿರುವ ಉತ್ತರ ಪ್ರದೇಶದ 18 ವರ್ಷದ ಯುವಕ ಆಕೆಯನ್ನು ಅಪಹರಣ ಮಾಡಿ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ. ಈತ ಕರುವರಕ್ಕುಂದು ಮೂಲದ ಹುಡುಗಿಯೊಂದಿಗೆ ರೈಲಿನಲ್ಲಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭ ಯುವಕ ಸಿಕ್ಕಿಬಿದ್ದಿದ್ದಾನೆ.

ಉತ್ತರ ಪ್ರದೇಶದ ಅಮೆರಾ ಗ್ರಾಮದ ನಿವಾಸಿ ಮೊಹಮ್ಮದ್ ನವೀದ್ ಬಂಧಿತ ಆರೋಪಿ. ಅಪ್ರಾಪ್ತೆಯನ್ನು ಅಪಹರಿಸಲು ಯತ್ನಿಸಿರುವ ಆರೋಪದಲ್ಲಿ ಪೊಕ್ಸೊ ಕಾಯ್ದೆಯಡಿಯಲ್ಲಿ ನವೀದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಈ ಅಪ್ರಾಪ್ತೆ, ಪ್ರಿಯಕರ ನವೀದ್ ಬರುವ ಸಮಯದಲ್ಲಿ ಕಾಲೇಜಿಗೆ ಹೋಗುತ್ತಿದ್ದೇನೆಂದು ಹೇಳಿ ಮನೆ ಬಿಟ್ಟು ಹೋಗಿದ್ದಾಳೆ. ಇಬ್ಬರು ಮೊದಲು ಮಂಚೇರಿಗೆ ತೆರಳಿದ್ದಾರೆ. ಬಳಿಕ ಅಲ್ಲಿಂದ ಕೋಯಿಕ್ಕೋಡ್‌ಗೆ ತೆರಳಿ ದೆಹಲಿ ರೈಲನ್ನೇರಿದ್ದಾರೆ. ಅಪ್ರಾಪ್ತೆ ನಾಪತ್ತೆಯಾಗಿರುವುದು ಪಾಲಕರ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರಿಗೆ ಇಬ್ಬರೂ ರೈಲು ಮೂಲಕ ದೆಹಲಿಗೆ ತೆರಳುತ್ತಿರುವ ವಿಚಾರ ತಿಳಿದು, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರನ್ನು ಕಾಸರಗೋಡಿನಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಯುವತಿಯ ಸಂಬಂಧಿಕರೊಂದಿಗೆ ಕಾಸರಗೋಡಿಗೆ ಆಗಮಿಸಿ ಇಬ್ಬರನ್ನೂ ಕರೆತಂದಿದ್ದಾರೆ.

ವಿಚಾರಣೆಯ ವೇಳೆ ಇನ್‌ಸ್ಟಾಗ್ರಾಂ ಲವ್ ಸ್ಟೋರಿಯ ವಿವರಗಳು ಹೊರಬಿದ್ದಿವೆ. ಬಾಲಕಿಯನ್ನು ಮಲಪ್ಪುರಂ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯ ಪೋಷಕರೊಂದಿಗೆ ವಾಪಸ್ ಕಳುಹಿಸಲಾಗಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article