ಕತ್ತು ಕುಯ್ದು ಯುವತಿಯ ಬರ್ಬರ ಹತ್ಯೆ
Wednesday, January 18, 2023
ಯಲಹಂಕ: ಇಲ್ಲಿನ ದಿಬೂರು ಗ್ರಾಮದ ಖಾಸಗಿ ಬಡಾವಣೆಯೊಂದರ ನಿರ್ಜನ ಪ್ರದೇಶದಲ್ಲಿ ಯುವತಿಯೊಬ್ಬಳ ಮೃತದೇಹ ಬುಧವಾರ ಸಂಜೆ ಪತ್ತೆಯಾಗಿದೆ. ಚಾಕುವಿನಿಂದ ಈಕೆಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಭವಿಷ್ಯ ಕಟ್ಟಿಕೊಳ್ಳಬೇಕಾದ ಯುವತಿ ಕೊಲೆಯಾಗಿ ಹೋಗಿದ್ದಾಳೆ.
ರಾಶಿ (19) ಎಂಬ ಯುವತಿ ಕೊಲೆಯಾದ ವಿದ್ಯಾರ್ಥಿನಿ.
ನಿರ್ಜನ ಪ್ರದೇಶದಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ ರಾಶಿಯ ಮೃತದೇಹವನ್ನು ನೋಡಿ ಬೆಚ್ಚಿಬಿದ್ದ ಸ್ಥಳಿಯರು ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ನಿನ್ನೆ ಮಧ್ಯಾಹ್ನವೇ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಬಗ್ಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿ, 'ಕೊಲೆಯಾದ ವಿದ್ಯಾರ್ಥಿನಿ ರಾಶಿ ಯಲಹಂಕದ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನೆನ್ನೆ ಸಂಜೆ ಹಸು ಹೊಡೆದುಕೊಂಡು ಹೋಗಿದ್ದಾಳೆ. ಈ ವೇಳೆ ನಿರ್ಜನ ಪ್ರದೇಶದಲ್ಲಿ ಆಕೆಯ ಕತ್ತು ಕೊಯ್ದು ಕೊಲೆಮಾಡಲಾಗಿದೆ. ಈ ಹಿಂದೆಯೂ ರಾಶಿ ಮನೆಯ ಬಳಿ ಬಂದು ಯುವಕನೊಬ್ಬ ಪ್ರೀತಿ ವಿಚಾರದಲ್ಲಿ ಗಲಾಟೆ ಮಾಡಿದ್ದನಂತೆ. ಈ ಬಗ್ಗೆ ಪೊಲೀಸರಿಂದ ಸಂಪೂರ್ಣ ತನಿಖೆ ನಡೆಸಲಾಗುತ್ತೆ' ಎಂದಿದ್ದಾರೆ.