ಪಿಜಿಯಲ್ಲಿದ್ದ ಯುವತಿಯರ ಸ್ನಾನದ ವೀಡಿಯೋ ರೆಕಾರ್ಡ್ ಮಾಡುತ್ತಿದ್ದ ಯುವಕ ಅಂದರ್

ಬೆಂಗಳೂರು: ಪಿಜಿಯಲ್ಲಿದ್ದ ಯುವತಿಯರು ಸ್ನಾನ ಮಾಡುತ್ತಿರುವ ದೃಶ್ಯವನ್ನು ವೀಡಿಯೋ ರೆಕಾರ್ಡ್ ಮಾಡುತ್ತಿದ್ದ ಇಂಜಿನಿಯರಿಂಗ್ ಓದಿದ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಒಂದೇ ಕಾಂಪ್ಲೆಕ್ಸ್‌ನಲ್ಲಿ ಹುಡುಗ - ಹುಡುಗಿಯರ ಪಿಜಿ ಕಾರ್ಯ ನಿರ್ವಹಿಸುತ್ತಿತ್ತು. ಆರೋಪಿ 4 ವರ್ಷದಿಂದ ಅದೇ ಕಾಂಪ್ಲೆಕ್ಸ್ ನಲ್ಲಿರುವ ಹುಡುಗರ ಪಿಜಿಯಲ್ಲಿದ್ದ. ಈತ ಅಲ್ಲಿಯೇ ಇದ್ದ ಯುವತಿಯರ ಪಿಜಿಯಲ್ಲಿನ ಬಾತ್ ರೂಂನಲ್ಲಿ ಗುಪ್ತವಾಗಿ ಮೊಬೈಲ್ ಇಟ್ಟು ಯುವತಿಯರು ಸ್ನಾನ ಮಾಡುತ್ತಿರುವ ವೀಡಿಯೋ ಮಾಡುತ್ತಿದ್ದ. ಬಳಿಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಆರೋಪಿ ಟಾಪ್ ಫ್ಲೋರ್ ಮೇಲೆ ಹತ್ತಿ ಬ್ಲಾಕ್‌ಗಳ ಮೇಲೆ ರಿಸ್ಕ್ ತೆಗೆದುಕೊಂಡು ಈ ಕೆಲಸ ಮಾಡುತ್ತಿದ್ದ. ಬಳಿಕ ವೀಡಿಯೋ ಇಟ್ಟುಕೊಂಡು ಸೆಕ್ಯೂಯಲ್ ಫೇವರ್‌ಗೆ ಬಳಸಿಕೊಳ್ತಿದ್ದ.

ಮೊದಲು ಒಬ್ಬ ಹುಡುಗಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬಳಿಕ ಆಕೆಯ ಮೊಬೈಲ್‌ನಿಂದ ಈತನಿಗೆ ಮೆಸೇಜ್ ಮಾಡಿಸಿ ಕರೆಸಿಕೊಂಡಿದ್ದಾರೆ. ಬಳಿಕ ಇವನೇ ಅನ್ನೋದು ಕನ್‌ಫರ್ಮ್ ಆಗಿದ್ದೇ ತಡ ಎಲ್ಲ ವಿಷಯ ಬಾಯಿ ಬಿಡಿಸಿದ್ದಾರೆ. ಆತನ ಮೊಬೈಲ್, ಲ್ಯಾಪ್ ಟ್ಯಾಪ್ ವಶಕ್ಕೆ ಪಡೆದಾಗ ಅವುಗಳಲ್ಲಿ ಸಾಕಷ್ಟು ಹುಡುಗಿಯರ ವೀಡಿಯೋ ಪತ್ತೆಯಾಗಿವೆ.