-->
ದಕ್ಷಿಣ ಕೊರಿಯಾದ ಯೂಟ್ಯೂಬರ್ ಗೆ ಮುಂಬೈನಲ್ಲಿ ನಡುಬೀದಿಯಲ್ಲಿ ಕಿರುಕುಳ: ವೀಡಿಯೋ ವೈರಲ್

ದಕ್ಷಿಣ ಕೊರಿಯಾದ ಯೂಟ್ಯೂಬರ್ ಗೆ ಮುಂಬೈನಲ್ಲಿ ನಡುಬೀದಿಯಲ್ಲಿ ಕಿರುಕುಳ: ವೀಡಿಯೋ ವೈರಲ್

ಮುಂಬೈ: ಲೈವ್ ಸ್ಟ್ರೀಮ್ ನೀಡುತ್ತಿದ್ದ ದಕ್ಷಿಣ ಕೊರಿಯಾದ ಯೂಟ್ಯೂಬರ್ ಯುವತಿಗೆ ನಡುಬೀದಿಯಲ್ಲಿಯೇ ಕಿರುಕುಳ ನೀಡಿರುವ ಯುವಕರಿಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ದಕ್ಷಿಣ ಕೊರಿಯಾ ಯೂಟ್ಯೂಬರ್​ ಎಷ್ಟೇ ಬೇಡ ಬೇಡವೆಂದು ಕೂಗುತ್ತಿದ್ದರೂ ಆಕೆಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ಮೊನ್ನೆ ರಾತ್ರಿ ಈ ಘಟನೆ ನಡೆದಿದೆ. ಆಕೆಯ ವಿರೋಧದ ನಡುವೆಯೂ ಕೈ ಹಿಡಿದಿರುವುದು ವಿಡಿಯೋದಲ್ಲಿದೆ. ಆತನಿಂದ ಬಿಡಿಸಿಕೊಂಡು ಯೂಟ್ಯೂಬರ್ ದೂರ ಹೋಗುತ್ತಿದ್ದಂತೆ ಆತ ಮತ್ತೊಬ್ಬನೊಂದಿಗೆ ಬೈಕಿನಲ್ಲಿ ಬಂದು ಅವಳಿಗೆ ಲಿಫ್ಟ್ ಕೊಡುತ್ತೇನೆ ಬಾ ಎಂದು ಹೇಳುತ್ತಾನೆ. ಅದಕ್ಕೆ ಆ ಯುವತಿ ನಿರಾಕರಿಸುತ್ತಾಳೆ. ನನ್ನ ಮನೆ ಇಲ್ಲಿಯೇ ಹತ್ತಿರದಲ್ಲಿದೆ, ನಾನೇ ಹೋಗುತ್ತೇನೆ ಎಂದು ಆಕೆ ಇಂಗ್ಲಿಷ್‌ನಲ್ಲಿ ಹೇಳುತ್ತಾಳೆ.


ಇದೀಗ ಈ ವಿಡಿಯೋ ಇದೀಗ ವೈರಲ್ ಆಗಿದೆ. ತಾನು ಲೈವ್ ಸ್ಟ್ರೀಮ್‌ನಲ್ಲಿರುವಾಗ ಒಬ್ಬ ವ್ಯಕ್ತಿ ನನಗೆ ಕಿರುಕುಳ ನೀಡಿದನು. ಅವನು ತನ್ನ ಸ್ನೇಹಿತನೊಂದಿಗೆ ಇದ್ದುದರಿಂದ ನಾನು ಪರಿಸ್ಥಿತಿಯನ್ನು ನಿಯಂತ್ರಿಸಲು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಇಂತಹ ಘಟನೆಗಳಿಂದಾಗಿ ರಾತ್ರಿ ಲೈವ್​ ಸ್ಟ್ರೀಮಿಂಗ್ ನೀಡಲು ಯೋಚಿಸುವಂತಾಗಿದೆ ಎಂದು ಆ ಯುವತಿ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ವಿಡಿಯೋ ಆಧರಿಸಿ ಪೊಲೀಸರು ಸ್ವಯಂ ಪ್ರೇರಿತವಾಗಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article