-->
ಅವಳಿ ಸೋದರಿಯರನ್ನು ವಿವಾಹವಾದ ಬೆನ್ನಲೇ ಯುವಕನಿಗೆ ಎದುರಾಯ್ತು ಪೊಲೀಸ್ ಕಂಟಕ...!

ಅವಳಿ ಸೋದರಿಯರನ್ನು ವಿವಾಹವಾದ ಬೆನ್ನಲೇ ಯುವಕನಿಗೆ ಎದುರಾಯ್ತು ಪೊಲೀಸ್ ಕಂಟಕ...!

ಮುಂಬೈ: ಇತ್ತೀಚೆಗೆ ಮುಂಬೈನಲ್ಲಿ ಐಟಿ ಇಂಜಿನಿಯರ್ ಗಳಾದ ಅವಳಿ ಸಹೋದರಿಯರು ಓರ್ವನನ್ನೇ ವಿವಾಹವಾಗಿರುವ ಸುದ್ದಿ ಭಾರೀ ಸದ್ದು ಮಾಡಿತ್ತು. ಇವರ ವಿವಾಹದ ವೀಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿತ್ತು. ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಶಾಸ್ತ್ರೋಕ್ತವಾಗಿ ವಿವಾಹವಾಗಿರುವ ನವದಂಪತಿಗಳಿಗೆ ಶಾಕ್ ಒಂದು ಕಾದಿದೆ.

ಅವಳಿ ಸಹೋದರಿಯರಿಗೆ ವರ ಅತುಲ್‌ ಹಾರ ಹಾಕುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮೊದಲ ಸಂಗಾತಿಯು ಬದುಕಿರುವಾಗಲೇ ಹಾಗೂ ವಿಚ್ಛೇದನವಾಗದೆ ಮರುಮದುವೆಯಾಗುವುದು ಕಾನೂನುಬಾಹಿರ ಎಂಬ ಆಧಾರದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

ಕೆಲ ವರದಿಗಳ ಪ್ರಕಾರ ಅತುಲ್ ಈಗಾಗಲೇ ಹಲವು ಮದುವೆಗಳಾಗಿದ್ದಾನೆಂದು ಆರೋಪಿಸಲಾಗಿದೆ. ಪ್ರಸ್ತುತ ನಡೆದ ವಿವಾಹದ ವಿಚಾರ ತಿಳಿದು ಮೊದಲ ಪತ್ನಿ ಅತುಲ್ ವಿರುದ್ಧ ದೂರು ದಾಖಲಿಸಿರುವುದಾಗಿ ವರದಿಯಾಗಿದೆ. ಅಲ್ಲದೆ, ಮಹಾರಾಷ್ಟ್ರದ ಮಹಿಳಾ ಆಯೋಗವು ಅತುಲ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಆದರೆ, ಅವಳಿ ಸಹೋದರಿಯರು ಸ್ವಿಚ್ಛೆಯಿಂದಲೇ ಅತುಲ್‌ನನ್ನು ಮದುವೆಯಾಗಿದ್ದರೆ, ಕಾನೂನಿನಲ್ಲಿ ಖಂಡಿತವಾಗಿಯೂ ಅತುಲ್‌ಗೆ ವಿನಾಯಿತಿ ನೀಡಬೇಕೆಂದು ಕೆಲವರು ಆಗ್ರಹಿಸಿದ್ದಾರೆ.

ಪಿಂಕಿ ಎಂ.ಪಡಗಾಂವರ್ ಮತ್ತು ರಿಂಕಿ ಎಂ.ಪಡಗಾಂವ‌ ಅತುಲ್ ನನ್ನು ವಿವಾಹವಾದ ಅವಳಿ ಸೋದರಿಯರು. ಇವರು ಮುಂಬೈನಲ್ಲಿ ಟೆಕ್ಕಿಗಳಾಗಿದ್ದಾರೆ. ಚಿಕ್ಕಂದಿನಿಂದಲೂ ಒಟ್ಟಿಗೆ ವಾಸಿಸುತ್ತಿದ್ದ ಕಾರಣ, ಒಬ್ಬರನ್ನೊಬ್ಬರು ಬಿಟ್ಟು ದೂರ ಇರಲಾಗದೇ ಇಬ್ಬರು ಸಹೋದರಿಯರು ಅತುಲ್ ನನ್ನು ಮದುವೆಯಾಗಲು ನಿರ್ಧರಿಸಿದರು ಎಂದು ವರದಿಯಾಗಿದೆ.

ಅತುಲ್ ಕೂಡ ಮೊದಲಿನಿಂದಲೂ ಅವಳಿ ಸಹೋದರಿಯರ ಕುಟುಂಬಕ್ಕೆ ಪರಿಚಿತನಾಗಿದ್ದ. ಕೆಲ ದಿನಗಳ ಹಿಂದೆ ತಂದೆ ನಿಧನರಾದ ಹಿನ್ನೆಲೆಯಲ್ಲಿ ಸಹೋದರಿಯರು ತಾಯಿಯೊಂದಿಗೆ ವಾಸವಾಗಿದ್ದರು. ಯಾವಾಗ ತಾಯಿಗೂ ಅನಾರೋಗ್ಯ ಕಾಡಲು ಆರಂಭಿಸಿತೋ ಆಗ ಅತುಲ್ ಕಾರಿನಲ್ಲಿ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿಕೊಂಡು ಬರುತ್ತಿದ್ದರು. ಈ ವೇಳೆ ಅತುಲ್ ಅವಳಿ ಸಹೋದರಿಯರ ಜೊತೆ ತುಂಬಾ ಸಲುಗೆ ಬೆಳೆಸಿಕೊಂಡಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article