-->
1000938341
ಒಂದೇ ಮನೆ ಎರಡು ರಾಜ್ಯಗಳಿಗೆ ಹಂಚಿಕೆ: ಅರ್ಧ ಮಹಾರಾಷ್ಟ್ರಕ್ಕೆ ಇನ್ನರ್ಧ ತೆಲಂಗಾಣಕ್ಕೆ

ಒಂದೇ ಮನೆ ಎರಡು ರಾಜ್ಯಗಳಿಗೆ ಹಂಚಿಕೆ: ಅರ್ಧ ಮಹಾರಾಷ್ಟ್ರಕ್ಕೆ ಇನ್ನರ್ಧ ತೆಲಂಗಾಣಕ್ಕೆ


ಮುಂಬೈ: ಗಡಿ ಪ್ರದೇಶದಲ್ಲಿರುವ ಮನೆಯೊಂದು ಅರ್ಧ ಒಂದು ರಾಜ್ಯಕ್ಕೆ ಇನ್ನರ್ಧ ಮತ್ತೊಂದು ರಾಜ್ಯಕ್ಕೆ ಪಾಲಾಗಿರುವ ಅಪರೂಪದ ಪ್ರಸಂಗವೊಂದು ಚಂದ್ರಾಪುರ ಜಿಲ್ಲೆಯ ಮಹಾರಾಜಗುಡ ಗ್ರಾಮದ ಗಡಿ ಪ್ರದೇಶದಲ್ಲಿ ನಡೆದಿದೆ. ಮನೆಯ 4 ಕೊಠಡಿಗಳು ಮಹಾರಾಷ್ಟ್ರದಲ್ಲಿದ್ದರೆ 4 ಕೊಠಡಿಗಳು ತೆಲಂಗಾಣ ರಾಜ್ಯಕೆ ಸೇರಿದೆ. 

13 ಜನರು ಇರುವ ಉತ್ತಮ್ ಪವಾರ್ ಎಂಬವರ ಕುಟುಂಬ ಮಹಾರಾಷ್ಟ್ರ ಮತ್ತು ತೆಲಂಗಾಣ ಗಡಿ ಪ್ರದೇಶ ಚಂದ್ರಾಪುರ ಜಿಲ್ಲೆಯ ಮಹಾರಾಜಗುಡ ಗ್ರಾಮದಲ್ಲಿ ನೆಲೆಸಿದೆ. ಅವರ ಮನೆ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದ ಗಡಿ ಭಾಗದಲ್ಲಿರುವ ಕಾರಣ ಒಂದೇ ಮನೆ ಎರಡೂ ರಾಜ್ಯಗಳಿಗೆ ಹಂಚಿಕೆಯಾಗಿದೆ. ಈ ಮನೆಯ 4 ಕೊಠಡಿಗಳು ಮತ್ತು ಅಡುಗೆ ಮನೆ ತೆಲಂಗಾಣಕ್ಕೆ ಸೇರಿದರೆ, ಇನ್ನುಳಿದ ಬೆಡ್‍ರೂಂ ಮತ್ತು ಹಾಲ್ ಸೇರಿದಂತೆ 4 ಕೊಠಡಿಗಳು ಮಹಾರಾಷ್ಟ್ರಕ್ಕೆ ಸೇರಿದೆ. ಅಲ್ಲದೆ ಈ ಮನೆಯ ತೆರಿಗೆಯನ್ನು ಕೂಡ ಎರಡು ರಾಜ್ಯಗಳಿಗೆ ಪ್ರತ್ಯೇಕವಾಗಿ ಪಾವತಿಸುತ್ತಿದ್ದಾರೆ. ಮನೆಯಲ್ಲಿರುವ ವಾಹನಗಳು ಕೂಡ ಎರಡೂ ರಾಜ್ಯಗಳ ನೋಂದಣಿಯನ್ನು ಪಡೆದುಕೊಂಡಿದೆ. ಜೊತೆಗೆ ಎರಡು ರಾಜ್ಯಗಳಿಂದ ಸಿಗುವ ಸೌಲಭ್ಯಗಳನ್ನು ಮನೆಯವರು ಪಡೆಯುತ್ತಿದ್ದಾರೆ.


ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮನೆ ಮಾಲೀಕ ಉತ್ತಮ್ ಪವರ್, ನಮ್ಮ ಮನೆ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಹಂಚಿಕೊಂಡಿದೆ. ಇದರಿಂದ ನಮಗೇನು ಸಮಸ್ಯೆಯಿಲ್ಲ. ನಾವು ಎರಡೂ ರಾಜ್ಯಗಳ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ. 1969ರಲ್ಲಿ ಗಡಿ ಸಮೀಕ್ಷೆ ನಡೆಸಿದಾಗ ಮನೆಯ ಅರ್ಧ ಭಾಗ ಮಹಾರಾಷ್ಟ್ರ ಮತ್ತು ಅರ್ಧಭಾಗ ತೆಲಂಗಾಣಕ್ಕೆ ಸೇರಿದೆ ಎಂಬ ಮಾಹಿತಿ ದೊರಕಿತ್ತು. ಇದೀಗ ಎರಡೂ ರಾಜ್ಯಗಳ ಸ್ಥಳೀಯ ಪಂಚಾಯತ್‍ಗಳಲ್ಲೂ ತೆರಿಗೆ ಪಾವತಿಸುತ್ತಿದ್ದೇವೆ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article