ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಬೀದಿನಾಯಿಗಳ ದಾಳಿಗೆ 4ರ ಮಗು ಬಲಿ


ಭದ್ರಾವತಿ: ಇಲ್ಲಿನ ದೊಣಬಘಟ್ಟ (ದಡಮಘಟ್ಟ) ಗ್ರಾಮದಲ್ಲಿ ಬೀದಿನಾಯಿಗಳ ಹಿಂಡೊಂದು ಮಾಡಿರುವ ದಾಳಿಗೆ 4 ವರ್ಷದ ಮಗು ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಬುಧವಾರ ಸಂಜೆ ನಡೆದಿದೆ.

ಸೈಯದ್ ಮದನಿ ಸಾವನ್ನಪ್ಪಿದ ನಾಲ್ಕು ವರ್ಷದ ಪುಟ್ಟ ಮಗು.

ಸಂಜೆ ಸುಮಾರು 4ರ ಸುಮಾರಿಗೆ‌ ಮಗು ಸೈಯದ್ ಮದನಿ ತಂದೆ ಜಮೀನಿಗೆ ಹೋಗಿದ್ದಾರೆ. ಈ ವೇಳೆ ತಂದೆಯನ್ನು ಮಗು ಹಿಂಬಾಲಿಸಿಕೊಂಡು ಹೋಗಿದೆ. ಆಗ ಸುಮಾರು 7-8 ಬೀದಿ ನಾಯಿಗಳ ಹಿಂಡೊಂದು ಮಗುವಿನ ಮೇಲೆ ದಾಳಿ ಮಾಡಿದೆ. ಅನತಿ ದೂರದಲ್ಲೇ ಮಗುವಿನ ತಂದೆ ಯಂತ್ರದಲ್ಲಿ ಭತ್ತ ಕಟಾವು ಮಾಡಿಸುತ್ತಿದ್ದರು. ಆದರೆ ಯಂತ್ರದ ಶಬ್ದಕ್ಕೆ ಬೀದಿ ನಾಯಿಗಳ ದಾಳಿ ಆಗಿತ್ತಿರುವು ತಿಳಿಯದಾಗಿದೆ.

ನಾಯಿಯ ದಾಳಿಯಿಂದ ಮಗು ತೀವ್ರ ಅಸ್ವಸ್ಥತೆಯಿಂದ ಬಳತ್ತಿರುವುದನ್ನು ಕಂಡು ಬಂದಿದೆ. ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಘಟನೆಯಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.