ಶಿವಸೇನೆ ನಾಯಕ ಸುಧೀರ್ ಸುರಿಯನ್ನು ಗುಂಡಿಕ್ಕಿ ಹತ್ಯೆ


ಅಮೃತಸರ: ಶಿವಸೇನೆಯ ನಾಯಕ ಸುಧೀರ್ ಸುರಿಯವರನ್ನು ನ.4ರಂದು ಪಂಜಾಬ್‌ನ ಅಮೃತಸರದಲ್ಲಿ  ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಅಮೃತಸರದ ಗೋಪಾಲ ಮಂದಿರದ ಬಳಿ ನಡೆದ ಸಂಘರ್ಷದಲ್ಲಿ ಸುಧೀರ್ ಸುರಿಯವರ ಮೇಲೆ ಗುಂಡಿನ ದಾಳಿ ನಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಸುಧೀರ್ ಸುರಿಯನ್ನು ಉಳಿಸಲಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ತಕ್ಷಣ ಧಾವಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ. 

ಈ ಬಗ್ಗೆ ಹೇಳಿಕೆ ನೀಡಿದ ಅಮೃತಸರದ ಕಮಿಷನರ್ ಅರುಣ್ ಪಾಲ್ ಸಿಂಗ್ ಸುಧೀರ್ ಸುರಿಯ ಮೇಲೆ ಗೋಪಾಲ ಮಂದಿರದ ಹೊರಗೆ ಗುಂಡಿನ ದಾಳಿ ನಡೆದಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಕೊನೆಯುಸಿರು ಎಳೆದಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದು ಆಯುಧಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu