ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿ ಬಾಡಿಗೆ ಕೊಠಡಿಯಲ್ಲಿ ಪತ್ತೆ...!


ಕಡಬ: ಹಿಂದೂ ಯುವತಿಯೊಬ್ಬಳು ಅನ್ಯಕೋಮಿನ ಯುವಕರೊಂದಿಗೆ ಬಾಡಿಗೆ ಕೊಠಡಿಯಲ್ಲಿದ್ದ ಘಟನೆ ಕೊಂತೂರು ಪೆರಾಬೆ ಗ್ರಾಮದ ಕೋಚಕಟ್ಟೆಯಲ್ಲಿ ರವಿವಾರ ಸಂಜೆ ನಡೆದಿದೆ. ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ ವೇಳೆ ಯುವತಿಯನ್ನು ಹಿಂಬಾಗಿಲಿನಿಂದ ಕಳುಹಿಸಿ ಯುವಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮಂಜೇಶ್ವರ ಮೂಲದ ಹಿಂದೂ ಯುವತಿ, ಮುಡಿಪು ಮೂಲದ ಅನ್ಯಕೋಮಿನ ಯುವಕನ ಸಂಪರ್ಕದಲ್ಲಿದ್ದಳು. ಪ್ರಸ್ತುತ ಆತ ಉದ್ಯೋಗದ ನಿಮಿತ್ತ ಕೊಂತೂರು ಪೆರಾಬೆ ಕ್ರಾಮದ ಕೋಚಕಟ್ಟೆ ಎಂಬಲ್ಲಿ ಬಾಡಿಗೆ ಕೊಠೆ ವಾಸವಾಗಿದ್ದ. ಅಲ್ಲಿಗೆ ಈ ಹಿಂದೂ ಯುವತಿಯನ್ನು ಬರಮಾಡಿಕೊಂಡಿದ್ದ ಎನ್ನಲಾಗಿದೆ.

ಹಿಂದೂ ಯುವತಿಯು ಅನ್ಯಕೋಮಿನ ಯುವಕನ ರೂಮಿನಲ್ಲಿದ್ದ ವಿಚಾರ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಯುವಕನು ಯುವತಿಯನ್ನು ಹಿಂಬಾಗಿಲಿನ ಮೂಲಕ ಹೊರಗೆ ಕಳುಹಿಸಿ ತಾನೂ ಪರಾರಿಯಾಗಿದ್ದಾನೆ.

ಜಾಗರಣ ವೇದಿಕೆಯ ಕಾರ್ಯಕರ್ತರು ಯುವತಿಯ ಬಗ್ಗೆ ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕಡಬ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.


ಸ್ಥಳೀಯರ ಮಾಹಿತಿ ಪ್ರಕಾರ ಈ ಬಾಡಿಗೆ ಕೊಠಡಿಯಲ್ಲಿ ಇಬ್ಬರು ಅನ್ಯಕೋಮಿನ ಯುವಕರಿದ್ದರು ಎನ್ನಲಾಗಿದೆ. ಯುವತಿಯನ್ನು ಕರೆತಂದ ಯುವಕನ ಹೆಸರು ಸವಾದ್‌ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ ರೂಮಿನಲ್ಲಿದ್ದ ಇಬ್ಬರೂ ಯುವಕರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.