ಮಂಗಳೂರು: ಆಕಸ್ಮಿಕ ಅಗ್ನಿ ದುರಂತದಲ್ಲಿ ಮೀನಿನ ಬಲೆ ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ. ನಾಶ-ನಷ್ಟ

ಮಂಗಳೂರು:‌ ಆಕಸ್ಮಿಕವಾಗಿ ನಡೆದ ಅಗ್ನಿ ದುರಂತವೊಂದರಲ್ಲಿ ಲಕ್ಷಾಂತರ ರೂ. ಮೀನುಗಾರಿಕಾ ಬಲೆಯ ರಾಶಿಯೇ ಧಗಧಗನೇ ಹೊತ್ತಿ ಉರಿದ ದುರ್ಘಟನೆಯೊಂದು ಶನಿವಾರ ತಡರಾತ್ರಿ 12.30 ಸುಮಾರಿಗೆ ನಗರದ ಧಕ್ಕೆ ಪ್ರದೇಶದಲ್ಲಿ ಸಂಭವಿಸಿದೆ.

ಮೀನುಗಾರಿಕೆಗೆಂದು ಧಕ್ಕೆ ಪ್ರದೇಶದಲ್ಲಿ ರಾಶಿ ಹಾಕಿದ್ದ ಮೀನು ಬಲೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣ ಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಬಲೆಯನ್ನು ಆವರಿಸಿದೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದ ತಂಡ ಬೆಂಕಿ ನಂದಿಸಲು ಹರಸಾಹಪಟ್ಟಿದೆ. ಆದರೆ ಬೆಂಕಿಯ ಕೆನ್ನಾಲಿಗೆ ಆವರಿಸಿದ ಪರಿಣಾಮ, ಬಲೆ ಸಂಪೂರ್ಣ ಸುಟ್ಟು ಕರಕಲಾಗಿದೆ.

ಆದರೆ ಸ್ಥಳದಲ್ಲಿದ್ದ ಸಣ್ಣ ದೋಣಿಯೊಂದನ್ನು ಸ್ಥಳಾಂತರ ಮಾಡಿರುವ ಪರಿಣಾಮ ಹೆಚ್ಚಿನ ದುರಂತ ತಪ್ಪಿದಂತಾಗಿದೆ. ಈ ಬೆಂಕಿ ಅವಘಡದಲ್ಲಿ ಲಕ್ಷಾಂತರ ರೂ. ಮೀನುಗಾರಿಕಾ ಬಲೆ ನಾಶವಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu