ಮಂಗಳೂರು: ವೈಷ್ಣೋದೇವಿ ದರ್ಶನಕ್ಕೆ ಹೆಲಿಕಾಪ್ಟರ್ ಒದಗಿಸುವುದಾಗಿ ವಂಚನೆ

ಮಂಗಳೂರು: ಬೆಂಗಳೂರು ಮೂಲದ ಟೆಕ್ಕಿಗೆ ಜಮ್ಮು ಕಾಶ್ಮೀರದ ವೈಷ್ಣೋದೇವಿ ಮಂದಿರಕ್ಕೆ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುವ ನೆಪದಲ್ಲಿ ಮಂಗಳೂರಿನ ಆನ್ ಲೈನ್ ಮೂಲಕ ವಂಚನೆ ಮಾಡಿರುವ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಈ ಟೆಕ್ಕಿ ಜಮ್ಮು ಕಾಶ್ಮೀರದ ವೈಷ್ಣೋದೇವಿಗೆ ತೆರಳಲು ನೇರವಾದ ವಿಮಾನ ಸೌಲಭ್ಯ ಇದೆಯೇ ಎಂದು ಗೂಗಲ್ ಸರ್ಚ್ ಮಾಡಿದ್ದಾರೆ. ಆಗ ಅಲ್ಲಿಗೆ ನೇರ ವಿಮಾನ ಯಾನ ಇಲ್ಲದಿರುವುದು ತಿಳಿದು ಬಂದಿದೆ‌. ಆಗ ಅವರು ಖಾಸಗಿ ಹೆಲಿಕಾಪ್ಟರ್ ಲಭ್ಯವಿದೆಯೇ ಎಂದು ಸರ್ಚ್ ಮಾಡಿದ್ದಾರೆ. ಆಗ ನಿತಿನ್ ಎಂಬಾತ ಫೋನ್ ಕರೆಗೆ ಸಿಕ್ಕಿದ್ದು, ಆತ ವೈಷ್ಣೋದೇವಿ ಪ್ರತಿನಿಧಿ ಎಂದು ಹೇಳಿಕೊಂಡಿದ್ದಾನೆ. 

ಆತ ಹೆಲಿಕಾಪ್ಟರ್ ಬುಕ್ಕಿಂಗ್ ಅಡ್ವಾನ್ಸ್ ಎಂದು 38,060 ರೂ. ಕಳುಹಿಸಲು ಹೇಳಿದ್ದಾನೆ. ಅದರಂತೆ ಆತ ಕಳುಹಿಸಿರುವ ಕ್ಯೂಆರ್ ಕೋಡ್ ಗೆ ಹಣ ಕಳುಹಿಸಲು ತಿಳಿಸಿದ್ದಾನೆ‌. ಆದರೆ ಆ ಬಳಿಕ ಆತನ ಫೋನ್ ಸ್ವಿಚ್ ಆಫ್ ಆಗಿದೆ‌. ದೇವಸ್ಥಾನಕ್ಕೆ ಕರೆ ಮಾಡಿದಾಗ ಆ ಹೆಸರಿನ ಸಿಬ್ಬಂದಿ ತಮ್ಮಲ್ಲಿ ಯಾರೂ ಇಲ್ಲವೆಂದು ಹೇಳಿದ್ದಾರೆ. ಈ ವೇಳೆ ಅವರಿಗೆ ತಾವು ಮೋಸ ಹೋಗಿರುವುದು ತಿಳಿದು ಬಂದಿದೆ‌. ಈ ಬಗ್ಗೆ ಅವರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu