-->
ಸುಳ್ಯ: ರಸ್ತೆ ಅಪಘಾತಕ್ಕೆ ಅಣ್ಣ - ತಂಗಿ ಬಲಿ...!

ಸುಳ್ಯ: ರಸ್ತೆ ಅಪಘಾತಕ್ಕೆ ಅಣ್ಣ - ತಂಗಿ ಬಲಿ...!

ಸುಳ್ಯ: ರಸ್ತೆ ಅಪಘಾತದಲ್ಲಿ ಸ್ಕೂಟಿಯಲ್ಲಿದ್ದ ಸಹೋದರ - ಸಹೋದರಿ ಮೃತಪಟ್ಟ ದಾರುಣ ಘಟನೆಯೊಂದು ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ಸುಳ್ಯ ತಾಲೂಕಿನ ಎಲಿಮಲೆ ಸಮೀಪ ಸಂಭವಿಸಿದೆ.‌ ಎಲಿಮಲೆ ಹಾಗೂ ಜಬಳೆ ಮಧ್ಯೆ ಇಂದು ಮಧ್ಯಾಹ್ನ ದುರ್ಘಟನೆ ಸಂಭವಿಸಿದೆ. 

ಕಡಪಾಲ ಬಾಜಿನಡ್ಕ ದೇವಿದಾಸ್ ಎಂಬವರ ಪುತ್ರ ನಿಶಾಂತ್ ತನ್ನ ಸಹೋದರಿಯನ್ನು ಕೂರಿಸಿಕೊಂಡು ಸ್ಕೂಟಿಯನ್ನು ಚಲಾಯಿಸುತ್ತಿದ್ದರು. ಈ ವೇಳೆ ಇವರ ಸ್ಕೂಟಿ ಹಾಗೂ ಮಾರುತಿ ಕಾರು ಪರಸ್ಪರ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟಿ ಸವಾರ ನಿಶಾಂತ್ ಹಾಗೂ ಆತನ ಸಹೋದರಿ ಮೋಕ್ಷಾರನ್ನು ಸ್ಥಳೀಯರು ತಕ್ಷಣವೇ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ನಿಶಾಂತ್ ಸಾವನ್ನಪ್ಪಿದ್ದರೆ, ಮೋಕ್ಷಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಆಕೆಯೂ ಸಾವನ್ನಪ್ಪಿದಳೆಂದು ತಿಳಿದು ಬಂದಿದೆ.

ಮೃತ ನಿಶಾಂತ್ ಸುಳ್ಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಮೋಕ್ಷಾ ದೇವಚಳ್ಳ ಸ.ಮಾ.ಹಿ.ಪ್ರಾ. ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article