-->

ಕೇರಳ: ದೇಶದ ಅತ್ಯಂತ ಕಿರಿಯ ಮೇಯರ್ - ಕಿರಿಯ ಶಾಸಕರೀಗ ದಂಪತಿಗಳು

ಕೇರಳ: ದೇಶದ ಅತ್ಯಂತ ಕಿರಿಯ ಮೇಯರ್ - ಕಿರಿಯ ಶಾಸಕರೀಗ ದಂಪತಿಗಳು

ಮಂಗಳೂರು: ದೇಶದ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೇಯರ್ ಹಾಗೂ ಕಿರಿಯ ಶಾಸಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಹೌದು... ಕೇರಳ ರಾಜ್ಯದ ತಿರುವನಂತಪುರಂ ಮನಪಾ ಮೇಯರ್ ಆರ್ಯಾ ರಾಜೇಂದ್ರನ್(22) ಹಾಗೂ  ಕೇರಳ ರಾಜ್ಯದ ಬಲುಸ್ಸರಿ ಕ್ಷೇತ್ರದ ಶಾಸಕ ಸಚಿನ್ ದೇವ್(28) ಸತಿ - ಪತಿಗಳಾಗಿದ್ದಾರೆ. ಕೆಲ ತಿಂಗಳ ಹಿಂದೆ ಈ ಜೋಡಿಯ ನಿಶ್ಚಿತಾರ್ಥದ ವೇಳೆಯ ಈ ಸುದ್ದಿ ಭಾರೀ ಸದ್ದು ಮಾಡಿತ್ತು. ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಕೇರಳದ ಎಕೆಜಿ ಸೆಂಟರ್ ನಲ್ಲಿ ಇವರ ವಿವಾಹ ನೆರವೇರಿದೆ. ಕೇರಳದ ಸಿಎಂ ಪಿಣರಾಯಿ ವಿಜಯನ್, ಸಿಪಿಎಂ ಘಟಕದ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಸೇರಿದಂತೆ ಹಲವಾರು ಮಂದಿ ಗಣ್ಯರು ಸಾಕ್ಷಿಯಾಗಿದ್ದಾರೆ.


ಆರ್ಯಾ ರಾಜೇಂದ್ರನ್ ಹಾಗೂ ಸಚಿನ್ ದೇವ್ ಇಬ್ಬರೂ ಸಿಪಿಎಂನ ಬಾಲಸಂಘಂನ ಸದಸ್ಯರಾಗಿದ್ದರು. ಅಲ್ಲದೆ ಎಸ್ಎಫ್ಐನಲ್ಲೂ ಸಕ್ರಿಯರಾಗಿದ್ದರು‌. ಎಫ್ ಬಿಯಲ್ಲಿ ಮದುವೆಗೆ ಆಮಂತ್ರಣ ನೀಡಿರುವ ಆರ್ಯಾ ರಾಜೇಂದ್ರನ್ ಅವರು ಮದುವೆಗೆ ಉಡುಗೊರೆ ತರದಿರುವಂತೆ ಮನವಿ ಮಾಡಿದ್ದಾರೆ. ಉಡುಗೊರೆ ಕೊಡುವವರು ವೃದ್ಧಾಶ್ರಮಗಳಿಗೆ ಅಥವಾ ಸಿಎಂ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡಿ ಎಂದು ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article