-->

ಚಂಡೀಗಢ: ಗಣೇಶ ವಿಗ್ರಹ ವಿಸರ್ಜಿಸಲು ಹೋದ 7 ಮಂದಿ ನೀರುಪಾಲು

ಚಂಡೀಗಢ: ಗಣೇಶ ವಿಗ್ರಹ ವಿಸರ್ಜಿಸಲು ಹೋದ 7 ಮಂದಿ ನೀರುಪಾಲು

ಚಂಡೀಗಢ: ಗಣೇಶ ವಿಗ್ರಹ ವಿಸರ್ಜನೆಯ ಸಂದರ್ಭ ಏಳು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆಯೊಂದು ಹರ್ಯಾಣದಲ್ಲಿ ನಡೆದಿದೆ.

ಹರಿಯಾಣದ ಸೋನಿಪತ್‌ನಲ್ಲಿ ಮೂವರು ಹಾಗೂ ಮಹೇಂದ್ರಗಢದಲ್ಲಿ ನಾಲ್ವರು ಮುಳುಗಿ ಮೃತಪಟ್ಟಿದ್ದಾರೆ . ಆಗಸ್ಟ್ 31ರಿಂದ ಆರಂಭವಾಗಿರು 10 ದಿನಗಳ ಗಣೇಶಹಬ್ಬವು ಶುಕ್ರವಾರ ಗಣೇಶಮೂರ್ತಿ ವಿಸರ್ಜನೆ ಮಾಡುವುದರೊಂದಿಗೆ ಮುಕ್ತಾಯಗೊಂಡಿದೆ.  ಸೋನಿಪತ್‌ನ ಮಿಮರುರ ಘಾಟ್‌ನಲ್ಲಿ ಗಣೇಶಮೂರ್ತಿ ಮುಳುಗಿಸಲು ತೆರಳಿದ್ದ ವ್ಯಕ್ತಿ ಆತನ ಪುತ್ರ ಹಾಗೂ ಅಳಿಯ ನೀರುಪಾಲಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು , ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ . 

ಮಹೇಂದ್ರಗಢದ ಝಗದೋಳಿ ಗ್ರಾಮದಲ್ಲಿ 10 ದಿನಗಳಿಂದ ಪೂಜಿಸಿರುವ ಗಣೇಶಮೂರ್ತಿಯನ್ನು ನೀರಿಗೆ ಹಾಕಲು ಕಾಲುವೆಯೊಂದಕ್ಕೆ ಒಂಬತ್ತು ಮಂದಿ ತೆರಳಿದ್ದರು . ನೀರಿನ ರಭಸಕ್ಕೆ ಇವರು ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇವರಲ್ಲಿ ಐವರನ್ನು ರಕ್ಷಣೆ ಮಾಡಲಾಗಿದೆ. ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಸಿಎಂ ಮನೋಹರಲಾಲ್ ಖಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article