ಶಿವಮೊಗ್ಗ: ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಶಿಶು ಮೃತ್ಯು; ವಾರ ಕಳೆದರೆ ಬರ್ತ್ ಡೇ ಆಚರಿಸಬೇಕಿದ್ದ ಮನೆಯಲ್ಲೀಗ ಸ್ಮಶಾನ ಮೌನ Death

ಶಿವಮೊಗ್ಗ: ಹನ್ನೊಂದು ತಿಂಗಳ ಶಿಶುವೊಂದು ನೀರಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆಯೊಂದು ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ರವಿವಾರ‌ ನಡೆದಿದೆ.

ಚಿಕ್ಕಜೋಗಿಹಳ್ಳಿಯ ಛಾಯಾಗ್ರಾಹಕ ದೇವರಾಜ್ ಹಾಗೂ ಅನುಷಾ ದಂಪತಿಯ ದ್ವಿತೀಯ ಪುತ್ರ ಅಕ್ಷಯ್ ಮನೆ ಮುಂದಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟ ಮಗು. 

ಮುಂದಿನ ವಾರ ಅಕ್ಷಯ್ ಒಂದನೇ ವರ್ಷಕ್ಕೆ ಕಾಲಿಡುತ್ತಿದ್ದು ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ ಇದೀಗ ಮಗುವನ್ನು ಕಳೆದುಕೊಂಡ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ. ಮಹಾಲಯ ಅಮವಾಸ್ಯೆಯಾದ ಭಾನುವಾರ ತಂದೆ ಮನೆ ಮುಂದಿದ್ದ ತೊಟ್ಟಿ ( ಸಂಪ್ )ಯ ಮುಚ್ಚಳ ತೆಗೆದು ಬೈಕ್ ತೊಳೆಯುತ್ತಿದ್ದರು. ಮನೆಯೊಳಗಿಂದ ಅಂಬೆಗಾಲಿಡುತ್ತ ಬಂದ ಮಗು ನೀರಿನ ತೊಟ್ಟಿಗೆ ಬಿದ್ದಿದೆ. ತಂದೆ ದೇವರಾಜ್ ಬೈಕ್ ತೊಳೆದು ಪೂಜೆ ಪುನಸ್ಕಾರದಲ್ಲಿ ಬ್ಯುಸಿ ಆಗಿದ್ದಾರೆ.

ಆ ಬಳಿಕ ಹೊತ್ತಿನ ನಂತರ ಮಗುವಿನ ಅಜ್ಜ ವಾಹನ ತೊಳೆಯಲು ತೊಟ್ಟಿಯಲ್ಲಿ ಬಗ್ಗಿದಾಗ ಮಗುವನ್ನು ಕಂಡು ದಿಗ್ಧಾಂತರಾಗಿದ್ದಾರೆ. ತಕ್ಷಣ ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ. ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯಾಧಿಕಾರಿಗಳ ತಂಡ ಮಗುವಿನ ಮೃತದೇಹವನ್ನು ಪಾಲಕರಿಗೆ ಹಸ್ತಾಂತರಿಸಿದ್ದಾರೆ‌.
BREAKING NEWS
Loading latest news...
Join our WhatsApp Channel Powered By : Online Pudu