
ಹಾವು ಕಚ್ಚಿ ಮೃತಪಟ್ಟ ಸಹೋದರನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ತಮ್ಮನೂ ಹಾವು ಕಚ್ಚಿ ಮೃತ್ಯು!
8/05/2022 08:28:00 AM
ಬಲರಾಮಪುರ: ಹಾವಿನ ಕಡಿತದಿಂದ ಮೃತಪಟ್ಟ ಸಹೋದರನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ತಮ್ಮನೂ ಹಾವು ಕಡಿತಕ್ಕೊಳಗಾಗಿ ಸಾವಿಗೀಡಾಗಿರುವ ದುರಂತವೊಂದು ಉತ್ತರ ಪ್ರದೇಶದ ಬಲರಾಮಪುರದಲ್ಲಿ ನಡೆದಿದೆ.
ಹಾವು ಕಡಿತಕ್ಕೊಳಗಾಗಿ ಅಣ್ಣ ಅರವಿಂದ್ ಮಿಶ್ರಾ (38) ಮೃತಪಟ್ಟಿದ್ದಾನೆ. ಆತನ ಸಂಸ್ಕಾರಕ್ಕೆಂದು ತಮ್ಮ ಗೋವಿಂದ ಮಿಶ್ರಾ (22) ಬುಧವಾರ ಭವಾನಿಪುರಕ್ಕೆ ಆಗಮಿಸಿದ್ದ. ಮೃತದೇಹದ ದಫನ ಮಾಡುವ ವಿಧಿವಿಧಾನಗಳನ್ನು ಪೂರೈಸಿ ರಾತ್ರಿ ಮನೆಯಲ್ಲಿ ಮಲಗಿದ್ದ ಗೋವಿಂದ ಮಿಶ್ರ ಹಾವು ಕಚ್ಚಿ ಮೃತಪಟ್ಟಿದ್ದಾನೆ. ಅಂದು ಗೋವಿಂದ ಮಿಶ್ರನೊಂದಿಗೆ ಆತನ ಸಂಬಂಧಿ ಚಂದ್ರಶೇಖರ್ ಪಾಂಡೆ (22) ಮಲಗಿದ್ದ. ಆತನಿಗೂ ಹಾವು ಕಚ್ಚಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ರಾಧಾ ರಮಣ್ ಸಿಂಹ್ ಮಂಗಳವಾರ ತಿಳಿಸಿದ್ದಾರೆ.
ಗೋವಿಂದ ಮಿಶ್ರಾ ಹಾಗೂ ಚಂದ್ರಶೇಖರ್ ಪಾಂಡೆ ಇಬ್ಬರೂ ಅರವಿಂದ ಮಿಶ್ರಾ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಲುಧಿಯಾನದಿಂದ ಗ್ರಾಮಕ್ಕೆ ಬಂದಿದ್ದರು. ಹಿರಿಯ ವೈದ್ಯಕೀಯ ಮತ್ತು ಆಡಳಿತ ಅಧಿಕಾರಿಗಳು ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.