ಫ್ಲ್ಯಾಟ್ ಮಾರಾಟ ಮಾಡುವುದಾಗಿ ಹಣ ಪಡೆದು ವಂಚನೆ: ದೂರು ದಾಖಲು

ಮಂಗಳೂರು: ಫ್ಲ್ಯಾಟ್ ಮಾರಾಟ ಮಾಡುವ ವಿಚಾರದಲ್ಲಿ ಹಣ ಪಡೆದು ವ್ಯಕ್ತಿಯೋರ್ವರು ವಂಚನೆಗೈದಿರುವ ಆರೋಪದ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರುಮಾರ್ಗ ಸಮೀಪದ ಕುಲಶೇಖರದಲ್ಲಿರುವ ರೆಡ್ ರಾಕ್ ಹೈಟ್ಸ್ ಅಪಾರ್ಟ್‌ಮೆಂಟ್‌ನಲ್ಲಿರುವ ಪ್ಲಾಟ್‌ವೊಂದನ್ನು ಪ್ರಶಾಂತ್ ರಸ್ಕಿನಾ ಮತ್ತು ಜಾಯ್ಸ್ ರೀನಾ ರಸ್ಕಿನಾ ಎಂಬವರು ಜಿ.ಮುರಳೀಧರ್ ಪೈ ಎಂಬವರಿಗೆ ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಮಂಗಳೂರು ತಾಲೂಕು ಉಪ ನೋಂದಾವಣಾಧಿಕಾರಿಯ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟ ಕರಾರಿನಂತೆ ಫ್ಲ್ಯಾಟ್ ಮಾರಾಟ ಮಾಡುವಾಗಿ ಆರೋಪಿಗಳಾದ ಪ್ರಶಾಂತ್ ರಸ್ಕಿನಾ ಮತ್ತು ಜಾಯ್ಸ್ ರೀನಾ ರಸ್ಕಿನಾ ಒಪ್ಪಿಕೊಂಡಿದ್ದರು. ಅದರಂತೆ 4.50 ಲಕ್ಷ ರೂ.ನ ಚೆಕ್‌ ಅನ್ನು ಮುರಳೀಧರ ಪೈಯವರು ಅವರಿಗೆ ನೀಡಿದ್ದರು. ಆದರೆ ಆ ಬಳಿಕ ಫ್ಲಾಟನ್ನು ಸೇಲ್ ಡೀಡ್ ನೋಂದಣಿ ಮಾಡಿಕೊಡುವಂತೆ ಕೇಳಿಕೊಂಡರೂ ಆರೋಪಿಗಳು ನಾನಾ ನೆಪವೊಡ್ಡಿ ನಿರಾಕರಿಸಿದ್ದರು ಎನ್ನಲಾಗಿದೆ. ಅಲ್ಲದೆ ಅದೇ ಫ್ಲ್ಯಾಟ್ ಅನ್ನು ಶಶಿಕಲಾ ದೇವಾಡಿಗ ಎಂಬವರಿಗೆ ಮಾರಾಟ ಮಾಡುವ ಮೂಲಕ ಈ ಆರೋಪಿಗಳು ನಂಬಿಕೆ ದ್ರೋಹ ಮಾಡಿರುವುದಾಗಿ ಮುರಳೀಧರ್ ಪೈ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ .
BREAKING NEWS
Loading latest news...
Join our WhatsApp Channel Powered By : Online Pudu