-->

ಎರಡೇ ತಿಂಗಳಲ್ಲಿ ದೇಶಾದ್ಯಂತ 5ಜಿ ನೆಟ್‌ವರ್ಕ್‌: ಯಾವ ಕಂಪೆನಿ..? ಬೆಲೆ ಯಾವುದು...?

ಎರಡೇ ತಿಂಗಳಲ್ಲಿ ದೇಶಾದ್ಯಂತ 5ಜಿ ನೆಟ್‌ವರ್ಕ್‌: ಯಾವ ಕಂಪೆನಿ..? ಬೆಲೆ ಯಾವುದು...?

ಎರಡೇ ತಿಂಗಳಲ್ಲಿ ದೇಶಾದ್ಯಂತ 5ಜಿ ನೆಟ್‌ವರ್ಕ್‌: ಯಾವ ಕಂಪೆನಿ..? ಬೆಲೆ ಯಾವುದು...?





ದೇಶಾದ್ಯಂತ ಇನ್ನು ಎರಡೇ ತಿಂಗಳಲ್ಲಿ 5ಜಿ ನೆಟ್‌ವರ್ಕ್‌ ಜನರಿಗೆ ಲಭ್ಯವಾಗಲಿದೆ. ಭಾರೀ ಕುತೂಹಲ ಕೆರಳಿಸಿದ್ದ 5-ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, 'ರಿಲಯನ್ಸ್' ಜಿಯೋ ದೊಡ್ಡ ಪಾಲಿನ ತರಂಗಾಂತರಗಳನ್ನು ಖರೀದಿಸಿದೆ.


'ರಿಲಯನ್ಸ್' ಜಿಯೋ ಒಟ್ಟು 88078 ಕೋಟಿ ರೂ. ಮೌಲ್ಯದ 5ಜಿ ಸ್ಪೆಕ್ಟ್ರಂ ಖರೀದಿಸಿದೆ. 700 ಮೆಗಾ ಹರ್ಟ್ಸ್, 800 ಮೆಗಾ ಹರ್ಟ್ಸ್, 1,800 ಮೆಗಾ ಹರ್ಟ್ಸ್, 3,300 ಮೆಗಾಹರ್ಟ್ಸ್‌ ಮತ್ತು 26 ಗಿಗಾ ಹರ್ಟ್ಸ್‌ ಬ್ಯಾಂಡ್‌ಗಳನ್ನು 'ರಿಲಯನ್ಸ್' ಜಿಯೋ ಖರೀದಿ ಮಾಡಿದೆ.


''ಭಾರತ ತಂತ್ರಜ್ಞಾನ ಶಕ್ತಿ ಅಳವಡಿಸಿಕೊಂಡು ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ. ಇದರಲ್ಲಿ ನಮಗೆ ಪೂರ್ಣ ವಿಶ್ವಾಸವಿದೆ. ರಿಲಯನ್ಸ್ ಜಿಯೋ 4G ಮೂಲಕ ಹೊರ ಹೊಮ್ಮಿಸಿದ ವೇಗ, ತೀವ್ರತೆ ಮತ್ತು ಸಾಮಾಜಿಕ ಬದಲಾವಣೆ ಅತ್ಯಂತ ಮಹತ್ವದ್ದು. ಇದೇ ಮಹತ್ವಾಕಾಂಕ್ಷೆ ಮತ್ತು ಸಂಕಲ್ಪದಿಂದ 5ಜಿ ಯುಗವನ್ನು ಮುನ್ನಡೆಸಲು 'ರಿಲಯನ್ಸ್' ಜಿಯೋ ಸಿದ್ಧವಾಗಿದೆ'' ಎಂದು 'ರಿಲಯನ್ಸ್' ಜಿಯೋ infocom ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದ್ದಾರೆ.



4Gಗೂ 5Gಗೂ ಏನು ವ್ಯತ್ಯಾಸ... ಉದ್ಯಮ ವಲಯದ ನಿರೀಕ್ಷೆ ಏನು...?


5Gಯೊಂದಿಗೆ ನಾವು ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸುತ್ತೇವೆ. ವಿಶ್ವ ದರ್ಜೆಯ 5G ನೆಟ್‌ವರ್ಕ್‌ ಅನ್ನು ಕೈಗೆಟಕುವ ದರದಲ್ಲಿ ಒದಗಿಸಲು ಸಿದ್ಧರಿದ್ದೇವೆ ಎಂದು ಜಿಯೋ ಮುಖ್ಯಸ್ಥ ಆಕಾಶ್ ಅಂಬಾನಿ ಹೇಳಿದ್ದಾರೆ.


ಅಕ್ಟೋಬರ್‌ನಲ್ಲಿ ಟೆಲಿಕಾಂ ಕಂಪನಿಗಳು 5ಜಿ ಸೇವೆ ಆರಂಭಿಸಲಿವೆ ಎಂದಿರುವ ವಾಣಿಜ್ಯ ಸಚಿವ ಅಶ್ವಿನಿ ವೈಷ್ಣವ್, 2-3 ವರ್ಷಗಳಲ್ಲಿ ದೇಶದೆಲ್ಲೆಡೆ 5ಜಿ ಸೇವೆ ನಿಗಲಿದೆ. 5G ತರಂಗಾಂತರಂಗಕ್ಕೆ ಟೆಲಿಕಾಂ ಕಂಪನಿಗಳು ರೂ. 3 ಲಕ್ಷ ಕೋಟಿ ಬಂಡವಾಳ ವಿನಿಯೋಗಿಸಲಿದೆ ಎಂದು ಹೇಳಿದ್ದಾರೆ. 

Ads on article

Advertise in articles 1

advertising articles 2

Advertise under the article