ಬೆಂಗಳೂರು: ಸರಕಾರದ ಟೆಂಡರ್‌ ಮಾಡಿ ಕೊಡುವುದಾಗಿ ನಂಬಿಸಿ ಉದ್ಯಮಿಯ ಪುತ್ರನಿಂದ 25 ಲಕ್ಷ ರೂ. ಸುಲಿಗೆ; ನಾಲ್ವರು ಅಂದರ್

ಬೆಂಗಳೂರು: ಸರಕಾರದ ಟೆಂಡರ್‌ ಮಾಡಿ ಕೊಡುವುದಾಗಿ ನಂಬಿಸಿ ಉದ್ಯಮಿಯ ಪುತ್ರನಿಂದ 25 ಲಕ್ಷ ರೂ. ಸುಲಿಗೆ ಮಾಡಿರುವ ಆರೋಪದಲ್ಲಿ ಬ್ಯಾಟರಾಯನಪುರ ಠಾಣಾ ಪೊಲೀಸರು ನಾಲ್ವರು ಖದೀಮರನ್ನು ಬಂಧಿಸಿದ್ದಾರೆ.

ಉದ್ಯಮಿ ರವಿ ಎಂಬವವರ ಪುತ್ರ ಸೂರಜ್‌ಗೆ ಪಿಸ್ತೂಲ್ ತೋರಿಸಿ ಬೆದರಿಸಿ ಹಲ್ಲೆ ಮಾಡಿ ಸುಲಿಗೆ ಮಾಡಿದ್ದಾರೆಂಬ ಆರೋಪದಲ್ಲಿ ಪುಷ್ಪಾ , ಅಯ್ಯಪ್ಪ ಅರ್ಜುನ್ , ರಾಕೇಶ್ ಹಾಗೂ ಸಂತೋಷ್ ನಾಲ್ವರನ್ನು ಬಂಧಿಸಿದ್ದಾರೆ. 

ಸರಕಾರದ ಟೆಂಡರ್ ಕೊಡಿಸುವುದಾಗಿ ಸೂರಜ್ ಅವರನ್ನು ಕರೆಸಿಕೊಂಡಿರುವ ಪುಷ್ಪಾ ಉಳಿದ ಮೂವರೊಂದಿಗೆ ಸೇರಿಕೊಂಡು ಟ್ರ್ಯಾಪ್ ಮಾಡಿದ್ದಾಳೆ. ಆನಂತರ ಸೂರಜ್‌ಗೆ ಬೆದರಿಕೆಯೊಡ್ಡಿ ಅಪಹರಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.