ಬೆಂಗಳೂರು: ಪ್ರೇಮ ವೈಫಲ್ಯಕ್ಕೆ ಯುವಕ ಬಲಿ; ಸಾಯುಕ್ಕೂ ಮುನ್ನ ಪ್ರೇಯಸಿಗೆ ಆಡಿಯೋ ಮೆಸೇಜ್ ನಲ್ಲಿ ಹೇಳಿದ್ದೇನು ಗೊತ್ತೇ?

ಬೆಂಗಳೂರು: ಪ್ರೇಮ ವೈಫಲ್ಯದಿಂದ ನೊಂದ ಯುವಕನೋರ್ವನು ನೇಣಿಗೆ ಶರಣಾಗಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಣಿಕಂಠ ಆತ್ಮಹತ್ಯೆ ಮಾಡಿರುವ ಯುವಕ.

ಆತ್ಮಹತ್ಯೆ ಮಾಡುವುದಕ್ಕೂ ಮುನ್ನ ಈ ಯುವಕ ಆಡಿಯೋ ಮಾಡಿ ತನ್ನ ಪ್ರೇಯಸಿಗೆ ಕಳುಹಿಸಿದ್ದಾನೆ. ಅದರಲ್ಲಿ 'ಸಾಯೋಣ ಅಂತ ಅನಿಸ್ತಿದೆ, ಆದರೆ ಸಾಯೋಕೂ ಮನಸಿಲ್ಲ' ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾಯುವ ಮೊದಲು ಆಡಿಯೋ ಮೆಸೇಜ್ ಕಳಿಸಿರುವ ಮಣಿಕಂಠ, ತಾವು ಕಳೆದಿರುವ ಕ್ಷಣಗಳನ್ನೆಲ್ಲ ನೆನಪು ಮಾಡಿಕೊಂಡಿದ್ದಾನೆ. ಜಾತಿಯ ಕಾರಣಕ್ಕೆ ಪ್ರೇಮ ಮುರಿದು ಬಿದ್ದಿದೆ ಎಂಬುದು ಆಡಿಯೋದಿಂದ ತಿಳಿದು ಬಂದಿದೆ.  ಮೃತ ಯುವಕ ಕಳೆದ ಆರು ತಿಂಗಳಿನಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇತ್ತೀಚೆಗಷ್ಟೇ ಆಕೆ ಆತನನ್ನು ತೊರೆದು ಹೋಗಿದ್ದಾಳೆ. ಆದರೆ ಆತನಿಗೆ ಅವಳನ್ನು ಮರೆಯಲಿಕ್ಕೆ ಆಗುವುದಿಲ್ಲ, ನೆನಪಾಗುತ್ತಿದ್ದಿಯ ಎಂದು ಹೇಳಿ ಆಡಿಯೋ ಮೆಸೇಜ್ ಕಳಿಸಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು , ಮಡಿವಾಳ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.