-->
2022ರ ಅಮರನಾಥ ಯಾತ್ರೆ: ಯಾತ್ರಿಗಳೇ ಎಚ್ಚರ..! ನಿಮ್ಮ ಸುರಕ್ಷೆಗೆ ಇದನ್ನು ಕಡ್ಡಾಯವಾಗಿ ಪಾಲಿಸಿ...

2022ರ ಅಮರನಾಥ ಯಾತ್ರೆ: ಯಾತ್ರಿಗಳೇ ಎಚ್ಚರ..! ನಿಮ್ಮ ಸುರಕ್ಷೆಗೆ ಇದನ್ನು ಕಡ್ಡಾಯವಾಗಿ ಪಾಲಿಸಿ...

2022ರ ಅಮರನಾಥ ಯಾತ್ರೆ: ಯಾತ್ರಿಗಳೇ ಎಚ್ಚರ..! ನಿಮ್ಮ ಸುರಕ್ಷೆಗೆ ಇದನ್ನು ಕಡ್ಡಾಯವಾಗಿ ಪಾಲಿಸಿ...
ಈ ಬಾರಿ ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಮೇಘ ಸ್ಪೋಟ ಸಂಭವಿಸಿದ್ದು, ಪರಿಣಾಮವಾಗಿ 10 ಕ್ಕೂ ಹೆಚ್ಚು ಭಕ್ತಾಧಿಗಳು ಸಾವನ್ನಪ್ಪಿದ್ದಾರೆ. ಅಮರನಾಥ ಯಾತ್ರೆ ಮಾಡುವಾಗ ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಗೊತ್ತಾ..?


ವ್ಯಾಪಕ ಮಳೆಯಾಗುವ ಸಮಯದಲ್ಲಿ ಅಮರನಾಥ ಯಾತ್ರೆ ಹಾಗೂ 'ಕೇದಾರ ನಾಥ', ಬದರೀ ನಾಥ, ಗಂಗೋತ್ರಿ-ಯಮುನೋತ್ರಿ ಸಹಿತ ದುರ್ಗಮ ಪ್ರದೇಶಗಳಿಗೆ ತೆರಳುವಾಗ ಸಂಕಷ್ಟ, ಅಡ್ಡಿ ಆತಂಕಗಳು ಎದುರಾಗುತ್ತವೆ. ಅದಕ್ಕಾಗಿ, ನೀವು ಈ ಧಾರ್ಮಿಕ ಸ್ಥಳಗಳಿಗೆ ಯಾತ್ರೆ ಕೈಗೊಳ್ಳುವಾಗ ಈ ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೆ ಪಾಲಿಸಿ....


1. ಇವರೊಂದಿಗೆ ಯಾತ್ರೆ ಮಾಡಬಾರದು:


ಅಮರನಾಥ ಯಾತ್ರೆಗೆ ನೀವು ಹೊರಟಿದ್ದರೆ, ನಿಮ್ಮೊಂದಿಗೆ ಮಕ್ಕಳು ಮತ್ತು ವೃದ್ಧರನ್ನು ಕರೆದುಕೊಂಡು ಹೋಗಬೇಡಿ. 14 ವರ್ಷದ ಮೇಲಿನವರು, ಮತ್ತು 65 ವರ್ಷದ ಕೆಳಗಿನವರು ಮಾತ್ರ ಯಾತ್ರಾ ತಂಡದಲ್ಲಿ ಇರಲಿ. ಗರ್ಭಿಣಿಯರನ್ನು ಕರೆದುಕೊಂಡು ಹೋಗಬೇಡಿ. ಕುಟುಂಬ ಜೊತೆ ಪ್ರಯಾಣಿಸುತ್ತಿದ್ದರೆ, ಪ್ರಯಾಣದ ಎಲ್ಲಾ ನಿಯಮಗಳು, ಮಾರ್ಗಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ. ಪರ್ವತಗಳಲ್ಲಿ ಪ್ರಯಾಣಿಸಲು, ಮಹಿಳೆಯರು ಸೀರೆಗಳ ಬದಲಿಗೆ ಸಲ್ವಾರ್ ಸೂಟ್ ಅಥವಾ ಯಾವುದೇ ಆರಾಮದಾಯಕ ಬಟ್ಟೆಗಳನ್ನು ಧರಿಸಬೇಕಾಗುತ್ತದೆ.


2. ಈ ನಿಯಮಗಳನ್ನು ಪಾಲಿಸಿ:


ಈ ಬಾರಿ ಪ್ರಯಾಣದ ಸಮಯದಲ್ಲಿ ಉತ್ತಮ ಶಿಬಿರಗಳನ್ನು ಏರ್ಪಡಿಸಲಾಗುವುದು. ಯಾತ್ರೆಯ ಸಂದರ್ಭದಲ್ಲಿ ಲಾಂಗರ್ ವ್ಯವಸ್ಥೆಗೆ ಮಂಡಳಿಯು ಅನುಮೋದನೆ ನೀಡಿದೆ. ಶಿಬಿರಗಳಲ್ಲಿದ್ದಾಗ ಜಾಗರೂಕರಾಗಿರಿ ಮತ್ತು ಹವಾಮಾನಕ್ಕೆ ಅನುಗುಣವಾಗಿ ರಾತ್ರಿಯಲ್ಲಿ ಸುರಕ್ಷತಾ ಸಾಧನಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಪ್ರಯಾಣದ ಕ್ಯಾಂಪ್ ಅನ್ನು ಸಮಯಕ್ಕೆ ಸರಿಯಾಗಿ ತಲುಪಬೇಕು. ನೀವು ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೆ, ನಿಮ್ಮ ಗುಂಪಿನಿಂದ ದೂರವಿರಬೇಡಿ, ಎಲ್ಲರೊಂದಿಗೆ ಪ್ರಯಾಣಿಸಿ.


3. ನಿಮ್ಮ ಜೊತೆಗೆ ಇದು ಅಗತ್ಯವಾಗಿ ಇರಲಿ...:


ಪ್ರವಾಸಕ್ಕೆ ಹೋಗುವ ಮೊದಲು, ಶೀತವನ್ನು ತಪ್ಪಿಸಲು ಸರಿಯಾದ ಬಟ್ಟೆಗಳನ್ನು ತೆಗೆದುಕೊಳ್ಳಿ. ಶೀತವನ್ನು ಸಹಿಸದವರಿಗೆ ಸಮಸ್ಯೆಗಳು ಸಾಮಾನ್ಯ. ಹೆಚ್ಚುವರಿಯಾಗಿ, ರೈನ್ ಕೋಟ್, ಇತರ ವಸ್ತುಗಳು ಇರಲಿ.


4. ಅದರ ಜೊತೆಗೆ ಇವುಗಳೂ ಬೇಕು...:


ಕಂಬಳಿ, ಛತ್ರಿ, ರೈನ್‌ ಕೋಟ್‌, ಜಲನಿರೋಧಕ ಬೂಟುಗಳು, ಸ್ಟಿಕ್‌ಗಳು, ಟಾರ್ಚ್‌ಗಳು, ಮಲಗಲು ಪರಿಕರಗಳು ಸೇರಿದಂತೆ ಇತ್ಯಾದಿ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಿ. ಫುಡ್ ಐಟಮ್‌ಗಳಲ್ಲಿ ಡ್ರೈ ಫ್ರೂಟ್ಸ್‌, ಟೋಸ್ಟ್, ಬಿಸ್ಕೆಟ್ ಹಾಗೂ ನೀರನ ಬಾಟಲ್ ಮರೆಯದಿರಿ...


5. ಇವರ ಸೇವೆಗಳನ್ನು ಮಾತ್ರ ತೆಗೆದುಕೊಳ್ಳಿ:


ನಿಮ್ಮ ಸಾಮಾನುಗಳನ್ನು ತುಂಬಿದ ಕುದುರೆಗಳು ಮತ್ತು ಪೋರ್ಟರ್‌ಗಳೊಂದಿಗೆ ಇರಿ. ನೋಂದಾಯಿತ ಕಾರ್ಮಿಕರು, ಹೇಸರಗತ್ತೆ ಮತ್ತು ಪಲ್ಲಕ್ಕಿಗಳ ಸೇವೆಗಳನ್ನು ಮಾತ್ರ ತೆಗೆದುಕೊಳ್ಳಿ ಮತ್ತು ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ.


6. ಕರ್ಪೂರದ ಪೊಟ್ಟಣ ನಿಮ್ಮ ಬಳಿ ಇರಲಿ...


ಏರು ಶಿಖರದ ಯಾತ್ರಾ ದಾರಿಯಲ್ಲಿ ಯಾತ್ರಿಗಳಿಗೆ ಆಕ್ಸಿಜನ್ ಸಮಸ್ಯೆ ಎದುರಾಗಬಹುದು. ಅದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ಕ್ಯಾಲ್ಶಿಯಂ ಹಾಗೂ ಐರನ್ ಕಂಟೆಂಟ್ ಕೊರತೆಯಿರುವ ಜನರಲ್ಲಿ ಆಕ್ಸಿಜನ್ ಲೆವೆಲ್ ತಕ್ಷಣ ಕಡಿಮೆಯಾಗುತ್ತದೆ. ಅದಕ್ಕೆ ಕರ್ಪೂರ ಸಹಕಾರಿ.. 'ಕರ್ಪೂರ'ವನ್ನು ಮೂಗಿನ ಬಳಿ ತರುವುದರಿಂದ ಅಥವಾ ಹಚ್ಚುವುದರಿಂದ ಅದರ ಸುವಾಸನೆಯಿಂದ ಉಸಿರಾಟ ಸಲೀಸಾಗಿ ಆಮ್ಲಜನಕದ ಕೊರತೆ ನೀಗುತ್ತದೆ.


7. ಖಾಲಿ ಹೊಟ್ಟೆಯ ಪ್ರಯಾಣ ಬೇಡ:


ಬರಿ ಹೊಟ್ಟೆಯಲ್ಲಿ ಪ್ರಯಾಣಿಸಬೇಡಿ. ಯಾತ್ರೆಯ ಆರಮಭದಲ್ಲಿ ಬೆಳಗ್ಗಿನ ಉಪಹಾರ ತಪ್ಪದೆ ತಿನ್ನಿ. ಇನ್ನು ನಿಯಮಿತ ಅಂತರದಲ್ಲಿ ಮಾತ್ರ ಆಹಾರ ಸೇವಿಸಿ.. ದಾರಿಯಲ್ಲಿ ಯಾವುದಾದರೊಂದು ಶಿಬಿರದಲ್ಲಿ ನೀವು ತಿನ್ನಬಹುದೆಂದು ಯೋಚಿಸುವ ಬದಲು ತಿನ್ನಲು ಸಿಕ್ಕಾಗ ತಿಂದುಬಿಡಬೇಕು.


8. ಈ ಮಾರ್ಗಗಳ ಮೂಲಕ ಸಾಗಬೇಕು:


ಈ ಧಾರ್ಮಿಕ ಯಾತ್ರೆಗೆ ಎರಡು ದಾರಿಗಳಿವೆ... ಒಂದು ಪಹಲ್ಗಾಂ... ಇನ್ನೊಂದು ಸೋನ್ಮಾರ್ಗ್‌ ಬಾಲ್ಟಾಲ್‌.... ಅಂದರೆ, ದೇಶದಾದ್ಯಂತ ಯಾವುದೇ ಪ್ರದೇಶಕ್ಕಿಂತ ಮೊದಲು ಪಹಲ್ಗಾಂ ಅಥವಾ ಬಾಲ್ಟಾಲ್ ತಲುಪಬೇಕು. ಇದಾದ ನಂತರ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಮಾರ್ಗದಲ್ಲಿ ಮಾತ್ರ ಪ್ರಯಾಣಿಸಿ. ಅಪಾಯದ ಸ್ಥಳದಲ್ಲಿ ಹೆಚ್ಚು ಹೊತ್ತು ನಿಲ್ಲಬೇಡಿ...


9. ಈ ಕೆಲಸವನ್ನು ಮಾಡಿ:


ಎಲ್ಲ ಯಾತ್ರಿಗಳ ಆಧಾರ್ ಕಾರ್ಡ್ ನಕಲು ಪ್ರತಿ, ಮೊಬೈಲ್ ಸಂಖ್ಯೆಗಳನ್ನು ತಪ್ಪದೆ ಇಟ್ಟುಕೊಳ್ಳಿ. ಅನುಮಾನ ಬಂದ ವ್ಯಕ್ತಿಗಳ ಬಗ್ಗೆ ತಕ್ಷಣ ಪೊಲೀಸರಿಗೆ ಯಾ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿ...


ಆಡಳಿತವು ಈಗಾಗಲೇ ಯಾತ್ರಾರ್ಥಿಗಳ ಸಂರಕ್ಷಣೆಗೆ ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅದರ ಜೊತೆಗೆ ಯಾತ್ರಿಗಳೂ ತಮ್ಮ ಸ್ವರಕ್ಷಣೆಗೆ ವಿಶೇಷ ಮುನ್ಸೂಚನೆಗಳನ್ನು ಅಗತ್ಯವಾಗಿ ಪಾಲಿಸಬೇಕು.


ಪ್ರತಿ ವರ್ಷ ಸಾವಿರಾರು ಯಾತ್ರಿಕರು ಅಮರನಾಥ ಯಾತ್ರೆಯನ್ನು ಮಾಡುತ್ತಾರೆ. ಅಮರನಾಥ ಯಾತ್ರೆಯು ಕಷ್ಟಕರವಾದ ಚಾರಣಗಳಲ್ಲಿ ಒಂದಾಗಿದೆ. ಈ ಮಹತ್ವದ ಧಾರ್ಮಿಕ ಪ್ರಯಾಣ ಯಶಸ್ವಿಯಾಗಲು ಇದನ್ನು ಮಾತ್ರ ಮರೆಯದಿರಿ...

ಯಾತ್ರೆಗೆ ಮುನ್ನ ಯಾ ಯಾತ್ರೆಯ ತರುವಾಯ... ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ತಪ್ಪದೆ ಪಾಲಿಸಿ...

ಅಮರನಾಥ ಯಾತ್ರೆಯ ವೇಳೆ ನಾವು ಏನು ಮಾಡಬೇಕು..? ಮತ್ತು ಏನು ಮಾಡಬಾರದು ಗೊತ್ತೇ..? ಆ ನಿಯಮಗಳ ಪಟ್ಟಿ ಇಲ್ಲಿವೆ...


ಅಮರನಾಥ ಯಾತ್ರೆ ಮಾಡುವಾಗ ಇವುಗಳನ್ನು ಅನುಸರಿಸಿ:


ವೂಲ್‌ ಬಟ್ಟೆಗಳು, ರೇನ್ ಕೋಟ್, , ಗಾಳಿ ಷೀಟರ್, ಸ್ಟಿಕ್‌ಗಳು, 'ಟಾರ್ಚ್' ಮತ್ತು 'ಕಂಬಳಿ' ಮತ್ತು ಇತರ ವಸ್ತುಗಳು ಅಗತ್ಯವಾಗಿ ಇರಲಿ..


ಬಿಸ್ಕೆಟ್, ಕ್ಯಾಂಡಿ, ಹಾಲಿನ ಪುಡಿ, ಸಕ್ಕರೆ, ಡ್ರೈಫ್ರೂಟ್ಸ್‌ ಹಾಗೂ ಇತರ ತಿನ್ನಬಹುದಾದ ವಸ್ತುಗಳು ಮಾತ್ರ ನಿಮ್ಮ ಜೊತೆಗಿರಲಿ... ವಾಟರ್ ಬಾಟಲ್, ಪ್ಲಾಸ್ಟಿಕ್ ಪ್ಲೇಟ್, ಸ್ಪೂನ್‌ಗಳು ಬೇಕಾಗಬಹುದು...


ಸುಖಕರ, ಸಲೀಸು ಆಗಬಲ್ಲ ಬಟ್ಟೆಗಳನ್ನು ಧರಿಸಿ.


ನಿಮ್ಮ ಜೊತೆಗೆ ಸದಾ ಇರುವವರನ್ನೇ ಯಾತ್ರೆಗೆ ಕರೆದೊಯ್ಯಿರಿ... ಗುಂಪಿನಲ್ಲಿ ಒಟ್ಟಿಗೆ ಪ್ರಯಾಣ ಬೆಳೆಸುತ್ತಿದ್ದರೆ ಉತ್ತಮ... ಈ ತಂಡ ಹಾಗೂ ನಿಮ್ಮ ಜೊತೆಗೆ ಇರುವವರು ಕೊನೆಯವರೆಗೆ ಯಾತ್ರೆಯಲ್ಲಿ ಇರಬೇಕೆಂಬುದನ್ನು ಮರೆಯದಿರಿ...


ಯಾತ್ರಾ ಅಧಿಕಾರಿಯು ಕಾಲಕಾಲಕ್ಕೆ ನೀಡಿದ ಸೂಚನೆಗಳನ್ನು ಯಾವಾಗಲೂ ಅನುಸರಿಸಿ. ಪೊಲೀಸ್, ಭದ್ರತಾ ಸಿಬ್ಬಂದಿ, ಆರೋಗ್ಯ ಸಹಾಯಕರು ಹಾಗೂ ಇತರ ಇಲಾಖೆಗಳು ನಿಮ್ಮ ಯಾತ್ರೆಯ ಯಶಸ್ಸಿಗೆ ಸದಾ ಹಗಲು ರಾತ್ರಿ ದುಡಿಯುತ್ತಿದೆ ಎಂಬುದನ್ನು ಮರೆಯದಿರಿ...


ವಸತಿ, ಊಟೋಪಚಾರ ಮತ್ತು ಇತರ ಅವಶ್ಯಕತೆಗಳಿಗೆ ಪಾವತಿಸಲು ಸಾಕಷ್ಟು ಹಣವನ್ನು ಕೊಂಡೊಯ್ಯಿರಿ.


ನಿರ್ದಿಷ್ಟ ಔಷಧಿಗಳೊಂದಿಗೆ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಒಯ್ಯಿರಿ.


ಯಾತ್ರೆ ವೇಳೆ ಈ ತಪ್ಪು ಮಾಡದಿರಿ:


1. ನೋಂದಣಿ ಕಾರ್ಡ್ ತೆಗೆದುಕೊಳ್ಳಲು ಮರೆಯಬೇಡಿ. ಏಕೆಂದರೆ ನೋಂದಣಿ ಕಾರ್ಡ್‌ಗಳಿಲ್ಲದ ಯಾತ್ರಿಕರನ್ನು ಯಾತ್ರೆಗೆ ಅನುಮತಿಸಲಾಗುವುದಿಲ್ಲ.


2. ಈ ಧಾರ್ಮಿಕ ಯಾತ್ರೆ ದುರ್ಗಮವಾಗಿದ್ದು, ಪುಟಾಣಿ ಮಕ್ಕಳು, ಅಶಕ್ತರು, ವೃದ್ಧರನ್ನು ಕರೆದುಕೊಂಡು ಹೋಗಬೇಡಿ.


3. ಪವಿತ್ರ ಗುಹೆಗೆ ಹೋಗುವ ಮಾರ್ಗದಲ್ಲಿ ಚಪ್ಪಲಿಗಳನ್ನು ಬಳಸಬೇಡಿ.


4. ಕಡಿದಾದ ಇಳಿಜಾರುಗಳ ಮೇಲೆ ಅತಿಯಾದ ಒತ್ತಡವನ್ನು ಮಾಡಬೇಡಿ.


5. ಎಚ್ಚರಿಕೆ ಸೂಚನೆಗಳಿರುವ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯಬೇಡಿ.


6. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಅಥವಾ ಯಾತ್ರೆ ವೇಳೆ, ಕಷ್ಟಕರವಾದ ವಿಸ್ತರಣೆಗಳಲ್ಲಿ ಇತರ ಯಾತ್ರಿಗಳನ್ನು ಓವರ್ ಟೇಕ್ ಮಾಡಬೇಡಿ


7. ಮಾರ್ಗದಲ್ಲಿ ಶಾರ್ಟ್‌ಕಟ್‌ಗಳನ್ನು ಬಳಸಲು ಪ್ರಯತ್ನಿಸಬೇಡಿ.


8. ವಾಸ್ತವ್ಯ ವೇಳೆ, ವಿಶ್ರಾಂತಿ ಸ್ಥಳ, ವಸತಿಗೃಹ ಯಾ ಇನ್ಯಾವುದೇ ತಂಗುಸ್ಥಳಗಳಿಗೆ ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ನೀಡಬೇಡಿ...


9. ಯೂಸ್ ಆಂಡ್ ಥ್ರೋ 'ಪ್ಲಾಸ್ಟಿಕ್‌' ಕಪ್‌ಗಳು ಅಥವಾ ಇತರ ವಸ್ತುಗಳನ್ನು ಕಸವಾಗಿ ಎಲ್ಲೆಂದರಲ್ಲಿ ಮಾರ್ಗ ಮಧ್ಯದಲ್ಲಿ ಎಸೆಯಬಾರದು.


10. ಪ್ರಯಾಣದ ಸಮಯದಲ್ಲಿ ಡ್ರಗ್ಸ್, ಮದ್ಯಪಾನವನ್ನು ತೆಗೆದುಕೊಳ್ಳಬೇಡಿ.


11. ಯಾತ್ರೆ- ಪವಿತ್ರ ಲಿಂಗವನ್ನು ಕೈಯಿಂದ ಸ್ಪರ್ಶ ಮಾಡಬೇಡಿ ಅಥವಾ ಹಾನಿ ಮಾಡಬೇಡಿ...


ಅಮರನಾಥ ಯಾತ್ರೆ ಒಂದು ಕಠಿಣ ಯಾತ್ರೆ. ಅದಕ್ಕಾಗಿಯೇ ಅನೇಕ ಧಾರ್ಮಿಕರು ಈ ಯಾತ್ರೆಗೆ ಹಿಂದೇಟು ಹಾಕುತ್ತಾರೆ. ಆದರೆ, ಈ ಮೇಲೆ ತಿಳಿಸಿದ ನಿಯಮ ಪಾಲಿಸಿ... ನಿಮ್ಮ ಯಾತ್ರೆ ಸಲೀಸಾಗಬಹುದು... 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article