-->
ಕೆರೂರು ಗುಂಪು ಘರ್ಷಣೆ: ಗಾಯಾಳುವಿಗೆ ಬಸವಣ್ಣನ ವಚನದ ಮೂಲಕ 'ದಯೆಯ' ಪಾಠ ಮಾಡಿದ ಎಡಿಜಿಪಿ‌

ಕೆರೂರು ಗುಂಪು ಘರ್ಷಣೆ: ಗಾಯಾಳುವಿಗೆ ಬಸವಣ್ಣನ ವಚನದ ಮೂಲಕ 'ದಯೆಯ' ಪಾಠ ಮಾಡಿದ ಎಡಿಜಿಪಿ‌

ಬಾಗಲಕೋಟೆ: ಇಲ್ಲಿನ ಬಾದಾಮಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದಿರುವ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ಅವರು ಜುಲೈ 20ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಕೆರೂಡಿ ಖಾಸಗಿ ಆಸ್ಪತ್ರೆಗೆ ತೆರಳಿ ಘರ್ಷಣೆಯಲ್ಲಿ ಗಾಯಗೊಂಡವರ ಆರೋಗ್ಯವನ್ನು ವಿಚಾರಣೆ ಮಾಡಿದರು. ವೇಳೆ ಅವರು ಗಾಯಾಳುಗಳಿಗೆ ಬಸವಣ್ಣನವರ ವಚನದ ಮೂಲಕ ದಯೆ ಧರ್ಮದ ಮಾಡಿದರು . 

ಗಾಯಾಳು ಅರುಣ ಕಟ್ಟಿಮನಿಯೊಂದಿಗೆ ಮಾತನಾಡುತ್ತಾ, 'ಬಸವಣ್ಣನವರು ಐಕ್ಯವಾದ ಕ್ಷೇತ್ರ ಇಲ್ಲೇ ಇದೆ. ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದರೆ, ಈಗ ಧರ್ಮದ ಹೆಸರಲ್ಲಿ ಗಲಾಟೆಗಳಾಗುತ್ತಿವೆ. ನಾವು  ಬಸವಣ್ಣನವರನ್ನು ಮರೆತುಬಿಟ್ಟಿರುವುದರಿಂದಲೇ ಹೀಗೆಲ್ಲಾ ಆಗುತ್ತಿದೆ. ಬಸವಣ್ಣನವರ ವಚನ ಪಾಲಿಸುವ ಮೂಲಕ ಶಾಂತಿಯಿಂದ ಇರಬೇಕೆಂದು ಕಿವಿಮಾತು ಹೇಳಿದರು. 

ಗಾಯಾಳು ಅರುಣ ಕಟ್ಟಿಮನಿಯನ್ನು ಉದ್ದೇಶಿಸಿ , ನಿನ್ನ ವಯಸ್ಸೆಷ್ಟು?, ಮದುವೆ ಆಗಿದೆಯಾ?, ಯಾಕೆ ಮದುವೆಯಾಗಿಲ್ಲ ?, ಮದುವೆ ಮಾಡಿಕೊಳ್ಳಿ. ಇಲ್ಲ ಪೊಲೀಸ್‌ನವರು ನಾವೇ ಮಾಡಿಸಬೇಕಾ?. ಮದುವೆ ಆದರೆ ನಿಮಗೆ ಪ್ರಪಂಚ ಅರ್ಥ ಆಗುತ್ತದೆ.‌‌ ಹೆಂಡತಿ - ಮಕ್ಕಳು ಬಂದ್ರೆ ಎಲ್ಲವೂ ಗೊತ್ತಾಗುತ್ತದೆ. ಈಗ ಹಿಂದೆ - ಮುಂದೆ ಯಾರು ಇಲ್ಲದೇ ಇರೋದಕ್ಕೆ ಹೀಗೆಲ್ಲಾ ಆಗುತ್ತಿದೆ. ಮದುವೆಯಾದರೆ, ಹೆಂಡತಿ ಮಕ್ಕಳನ್ನು ಯಾರು ನೋಡಿಕೊಳ್ತಾರೆ ಎಂದು ನೆನಪಾಗುತ್ತದೆ. ಆಗ ಇಂತವೆಲ್ಲ ಕಡಿಮೆಯಾಗುತ್ತದೆ. ಆದ್ದರಿಂದ ಬೇಗ ಮದುವೆ ಮಾಡಿಕೊಳ್ಳಿ ಎಂದು ಚಾಕು ಇರಿತಕ್ಕೆ ಒಳಗಾದ ಅರುಣ ಹಾಗೂ ಸ್ನೇಹಿತನಿಗೆ ಹಾಸ್ಯ ಮಾಡುತ್ತಲೇ ಅಲೋಕ್ ಕುಮಾರ್ ಅವರು ಸಲಹೆ ನೀಡಿದರು.

ಘಟನೆ ವೇಳೆ ಸ್ಥಳದಲ್ಲಿ ನಾನಿದ್ದರೆ ಸರಿಯಾಗಿ ಬಾರಿಸಿ ಬಿಡ್ತಿದ್ದೆ. ನಾನು ಸುಮಾರು ಸಾರಿ ಬಂದ ವೇಳೆ ಬಾಗಲಕೋಟೆ ಶಾಂತವಾಗಿಯೇ ಇತ್ತು. ಹುನಗುಂದ ಕೋ ಆಪ್ ರೇಟಿವ್ ಗಲಾಟೆ ವೇಳೆ ಒಮ್ಮೆ ಇಲ್ಲಿಗೆ ಬಂದಿದ್ದೆ. ಕೂಡಲಸಂಗಮವನ್ನು ಇಲ್ಲಿ ಇಡ್ಕೊಂಡು ಬಸವಣ್ಣನವರ ತತ್ವಾದರ್ಶ ಮರೆತು ಎಲ್ಲರೂ ಗಲಾಟೆ, ಗದ್ದಲ ಮಾಡ್ತಿದ್ದಾರೆ. ಮಂಗಳೂರಿಗೆ ಕೂಡಲಸಂಗಮ ದೂರ ಆಗುತ್ತೆ. ಆದ್ರೆ, ಬಾಗಲಕೋಟೆಗೆ ಕೂಡಲಸಂಗಮ ಹತ್ತಿರ ಇದೆ. ಹತ್ತಿರ ಇಟ್ಕಂಡೇ ಇಲ್ಲಿಯವರು ಎಲ್ಲ ಮರೆತಿದ್ದಾರೆ ಎಂದು ಆಸ್ಪತ್ರೆಯಲ್ಲಿ ವೈದ್ಯರ ಜೊತೆ ಚರ್ಚೆ ವೇಳೆ ಅಲೋಕ್ ಕುಮಾರ್ ಬಸವಣ್ಣನವರನ್ನ ಸ್ಮರಿಸಿದರು. 

Ads on article

Advertise in articles 1

advertising articles 2

Advertise under the article