-->
ಚಿಕ್ಕಮ್ಮನ ಖಾಸಗಿ ಚಿತ್ರ ಸೆರೆಹಿಡಿದು 25 ಲಕ್ಷಕ್ಕೆ ಬೇಡಿಕೆಯಿಟ್ಟ ಖತರ್ನಾಕ್ ಯುವತಿ - ಆಕೆಯ ಪ್ರಿಯಕರ ಅರೆಸ್ಟ್

ಚಿಕ್ಕಮ್ಮನ ಖಾಸಗಿ ಚಿತ್ರ ಸೆರೆಹಿಡಿದು 25 ಲಕ್ಷಕ್ಕೆ ಬೇಡಿಕೆಯಿಟ್ಟ ಖತರ್ನಾಕ್ ಯುವತಿ - ಆಕೆಯ ಪ್ರಿಯಕರ ಅರೆಸ್ಟ್

ಬೆಂಗಳೂರು: ಪರಪುರುಷನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ದೃಶ್ಯವನ್ನು ಸೆರೆ ಹಿಡಿದು ಖಾಸಾ ಚಿಕ್ಕಮ್ಮನಿಕೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಖತರ್ನಾಕ್ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಬಾಗಲೂರು ಠಾಣೆ ಪೊಲೀಸರು ಕಂಬಿ ಹಿಂದೆ ಕಳುಹಿಸಿದ್ದಾರೆ.

ನಗರದ ಬಾಗಲೂರು ನಿವಾಸಿ ಉಷಾ(24) ಹಾಗೂ ಆಕೆಯ ಪ್ರಿಯಕರ ಸುರೇಶ್‌ ಬಾಬು(31) ಬಂಧಿತ ಆರೋಪಿಗಳು. 

ಆರೋಪಿಗಳಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೆ ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ಉಷಾ ತನ್ನ ಚಿಕ್ಕಮ್ಮ ಪರಪುರುಷನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ ವಿಚಾರವನ್ನು ತಿಳಿದಿದ್ದಳು. ಆದ್ದರಿಂದ ಇಬ್ಬರೂ ಪ್ಲ್ಯಾನ್ ಮಾಡಿ ಚಿಕ್ಕಮ್ಮನ ಈ ವಿಚಾರದ ಬಗ್ಗೆ ಬೆದರಿಕೆಯೊಡ್ಡಿ ಲಕ್ಷಗಟ್ಟಲೆ ಹಣ ಹೊಡೆಯುವ ತಂತ್ರ ಮಾಡಿದ್ದರು.

ಇತ್ತೀಚೆಗೆ ಸಂತ್ರಸ್ತ ಮಹಿಳೆ ಹಾಗೂ ಆಕೆಯ ಪ್ರಿಯಕರ ಹೋಟೆಲ್‌ಗೆ ಹೋಗಲು ಕೊಠಡಿ ಕಾಯ್ದಿರಿಸಿದ್ದರು. ಈ ವಿಚಾರ ತಿಳಿದುಕೊಂಡ ಆರೋಪಿಗಳು ಮೊದಲೇ ಆ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾ ಇರಿಸಿದ್ದಾರೆ. ಸಂತ್ರಸ್ತೆ ಹಾಗೂ ಆಕೆಯ ಪ್ರಿಯಕರ ಲೈಂಗಿಕ ಸಂಪರ್ಕ ಬೆಳೆಸಿದ್ದ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದುಕೊಂಡು ಬ್ಲ್ಯಾಕ್‌ ಮೇಲ್‌ ಮಾಡಲು ಆರಂಭಿಸಿದ್ದಾರೆ.

ಸಂತ್ರಸ್ತೆಯ ಮೊಬೈಲ್‌ಗೆ ವೀಡಿಯೋ ಕಳುಹಿಸಿರುವ ಆರೋಪಿ, 25 ಲಕ್ಷ ರೂ. ಕೊಡಬೇಕು ಇಲ್ಲವಾದರೆ ಈ ವೀಡಿಯೋವನ್ನು ಸಂಬಂಧಿಕರು, ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ಆಕೆ, ಒಪ್ಪದಿದ್ದಾಗ, ಹಿಂಬಾಲಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ಹೀಗಾಗಿ ಸಂತ್ರಸ್ತೆ ದೂರು ನೀಡಿದ್ದಾರೆ. 

ಆದರೆ ತನಿಖೆ ವೇಳೆ ಈ ಕೃತ್ಯದಲ್ಲಿ ಉಷಾ ಮಾಸ್ಟರ್ ಪ್ಲ್ಯಾನ್ ಇದೆ ಎಂದು ತಿಳಿದು ಬಂದಿತ್ತು. ಆದ್ದರಿಂದ ಆಕೆಯನ್ನು ಬಂಧಿಸಿದ ವೇಳೆ ಈ ಸತ್ಯಾಂಶ ಬಯಲಾಗಿದೆ. ಬಳಿಕ ಆಕೆಯ ಪ್ರಿಯಕರ ಸುರೇಶ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article