-->

ಮಂಗಳೂರು: ವರ್ಷಕ್ಕೆರಡು ಬಾರಿ ಫಲ ನೀಡುವ 'ಮಂಗಳ ಅರ್ಲಿ' ವಿನೂತನ ಹಲಸು ತಳಿ ಅಭಿವೃದ್ಧಿ!

ಮಂಗಳೂರು: ವರ್ಷಕ್ಕೆರಡು ಬಾರಿ ಫಲ ನೀಡುವ 'ಮಂಗಳ ಅರ್ಲಿ' ವಿನೂತನ ಹಲಸು ತಳಿ ಅಭಿವೃದ್ಧಿ!

ಮಂಗಳೂರು: ಕರಾವಳಿಯೆಂದರೆ ಹಲಸು, ಮಾವು ಬೆಳೆಗೆ ಪ್ರಸಿದ್ಧ. ಸಾಮಾನ್ಯವಾಗಿ ಮಾರ್ಚ್ ಬಳಿಕ ಹಲಸು, ಮಾವು ಇಲ್ಲಿನವರಿಗೆ ಯಥೇಚ್ಛವಾಗಿ ದೊರೆಯುತ್ತದೆ. ಮಾವು - ಹಲಸು ಎರಡನ್ನೂ ಹಣ್ಣಿನಂತೆ ತಿನ್ನುವುದು ಮಾತ್ರವಲ್ಲ, ಎಳೆಯ ಗಾತ್ರದ ಹಲಸು ಗುಜ್ಜೆಯಿಂದ ಹಿಡಿದು ಬಲಿತ ಹಲಸಿನ ಕಾಯಿಯವರೆಗೆ ವಿವಿಧ ಪದಾರ್ಥ, ಖಾದ್ಯ, ತಿಂಡಿ - ತಿನಿಸುಗಳನ್ನು ತಯಾರು ಮಾಡುತ್ತಾರೆ‌. ಅದೇ ರೀತಿ ಮಿಡಿ ಮಾವಿನಿಂದ ತೊಡಗಿ ಬಲಿತ ಕಾಯಿಯವರೆಗೆ ಬಹಳ ವೈವಿಧ್ಯಮಯ ಖಾದ್ಯಗಳನ್ನು ತಯಾರು ಮಾಡುತ್ತಾರೆ. ಆದರೆ ಇದೆಲ್ಲವೂ ಮಾರ್ಚ್ ನಿಂದ ಸಾಧಾರಣ ಆಗಸ್ಟ್ ವರೆಗೆ ಮಾತ್ರ ಸಾಧ್ಯ. ಆ ಬಳಿಕ ಕರಾವಳಿಯಲ್ಲಿ ಬೇಕೆಂದರೂ ಮಾವು, ಹಲಸು ದೊರೆಯೋಲ್ಲ.

ಆದರೆ ಇದೀಗ ಕರಾವಳಿಯ ಉತ್ಸಾಹಿ ಬಿ‌.ಸರ್ವೇಶ್ ರಾವ್ ಅವರು ವರ್ಷಕ್ಕೆರಡು ಬಾರಿ ಫಸಲು ನೀಡುವ ಹಲಸು ತಳಿಯೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ವಿನೂತನ ಹಲಸು ತಳಿಯನ್ನು ಪ್ರಾಯೋಗಿಕವಾಗಿ ಸತತ ಮೂರು ವರ್ಷಗಳ ಕಾಲ ತಮ್ಮ ಚಿಗುರು ನರ್ಸರಿಯಲ್ಲಿ ಪೋಷಣೆ ಮಾಡಿ ಬೆಳೆಸಿದ್ದಾರೆ. ಅಲ್ಲಿ ಫಲ ನೀಡಿದ ಬಳಿಕ ಇದೀಗ ಎಲ್ಲರಿಗೂ ಪರಿಚಯಿಸುತ್ತಿದ್ದಾರೆ. ಈ ಹೊಸ ತಳಿಗೆ ಬಿ‌.ಸರ್ವೇಶ್ ರಾವ್ 'ಮಂಗಳ ಅರ್ಲಿ' ಎಂದು ಹೆಸರಿಟ್ಟಿದ್ದಾರೆ. ಈ ತಳಿಯಲ್ಲಿ ಮೂರು ವರ್ಷದಲ್ಲಿಯೇ ಫಸಲು ದೊರೆಯಲಾರಂಭಿಸುತ್ತದೆ. ಅಂದರೆ ಈ ಮಂಗಳ ಅರ್ಲಿ ತಳಿಯಲ್ಲಿ ಡಿಸೆಂಬರ್ ಗೊಮ್ಮೆ ಹಲಸಿನಕಾಯಿ ದೊರೆತರೆ, ಮತ್ತೊಮ್ಮೆ ಎಪ್ರಿಲ್ ಗೊಮ್ಮೆ ಫಲ ಕೊಡುತ್ತದೆ ಎಂದು ಹೇಳುತ್ತಾರೆ ಬಿ.ಸರ್ವೇಶ್ ರಾವ್


ಮಂಗಳ ಅರ್ಲಿ‌ ಹಲಸು ಉತ್ತಮ ಗುಣಮಟ್ಟದ ಸ್ವಾದಿಷ್ಟ ಪರಿಮಳ ಹೊಂದಿದ್ದು, ರುಚಿಯೂ ಚೆನ್ನಾಗಿದೆ. ಸೊಳೆಯೂ ದಪ್ಪಗಿದ್ದು, ಎಳೆಗುಜ್ಜೆ ಪದಾರ್ಥಕ್ಕೂ, ಉಪ್ಪು ಸೊಳೆಗೂ, ಬಲಿತ ಕಾಯಿಯ ಖಾದ್ಯಕ್ಕೆ ಹಣ್ಣಾದ ಬಳಿಕ ತಿನ್ನಲೂ ಉತ್ತಮವಾಗಿದೆ‌. ಬೇರೆ ತಳಿಯ ಹಲಸಿನ ಬೀಜದಿಂದ ಗಿಡವನ್ನು ಬೆಳೆಸಲಾಗುತ್ತದೆ. ಎರಡು ತಿಂಗಳ ಬಳಿಕ ಆ ಗಿಡಕ್ಕೆ ಉತ್ತಮ ತಳಿಯ ಕಣ್ಣು ಕಸಿ ಮಾಡಿ ಈ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ಸಣ್ಣ ಗಾತ್ರದ ಮರವಾಗುವ ಈ ಮಂಗಳ ಅರ್ಲಿ ತಳಿಯ ಹಲಸಿನ ಮರವನ್ನು ಸ್ವಲ್ಪ ಸ್ಥಳಾವಕಾಶವಿರುವ ಮನೆಯವರೂ ಬೆಳೆಸಬಹುದು ಎನ್ನುತ್ತಾರೆ ಬಿ.ಸರ್ವೇಶ ರಾವ್


Ads on article

Advertise in articles 1

advertising articles 2

Advertise under the article