-->
1000938341
ಬೆಂಗಳೂರು:ದೀರ್ಘ ಕಾಲದ ರಜೆ ಹಾಕಿ ವಜಾಗೊಂಡ ನೌಕರನ ಪುತ್ರಿಯ ಕೋರಿಕೆಗೆ ಮರುಗಿ ಉದ್ಯೋಗ ನೀಡಿದ ಮೇಲಾಧಿಕಾರಿ

ಬೆಂಗಳೂರು:ದೀರ್ಘ ಕಾಲದ ರಜೆ ಹಾಕಿ ವಜಾಗೊಂಡ ನೌಕರನ ಪುತ್ರಿಯ ಕೋರಿಕೆಗೆ ಮರುಗಿ ಉದ್ಯೋಗ ನೀಡಿದ ಮೇಲಾಧಿಕಾರಿ

ಬೆಂಗಳೂರು: ದೀರ್ಘಕಾಲದ ರಜೆ ತೆಗೆದುಕೊಂಡು ಕೆಲಸದಿಂದ ವಜಾಗೊಂಡ ನೌಕರನ ಪುತ್ರಿಯ ಕೋರಿಕೆಗೆ ಮರುಗಿದ ಮೇಲಾಧಿಕಾರಿ ಮರಳಿ ಆತನನ್ನು ನೌಕರಿಗೆ ತೆಗೆದುಕೊಂಡ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಮರಳಿ ಅಂತಹ ತಪ್ಪು ನಡೆಸದಂತೆ ಎಚ್ಚರಿಕೆ ನೀಡಿ ಮತ್ತೆ ನೌಕರಿ ನೀಡಿದ್ದಾರೆ.

ಕೆಎಸ್ಆರ್ ಟಿಸಿಯಲ್ಲಿ ಚಾಲಕ ಹಾಗೂ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಲೋಕೇಶ್ ಸುದೀರ್ಘವಾದ ರಜೆ ಮಾಡಿದ್ದಾರು. ಪರಿಣಾಮ ಆತ ಕೆಲಸ ಕಳೆದುಕೊಂಡಿದ್ದರು. ಪರಿಣಾಮ ಆತ  ಜೀವನ ನಡೆಸುವುದಕ್ಕೆ ಕಷ್ಟಪಡುತ್ತಿದ್ದರು. ಆದರೆ ಆತ ಮೇಲಾಧಿಕಾರಿ ಬಳಿಗೆ ತನ್ನ ಪುತ್ರಿಯೊಂದಿಗೆ ಆಗಮಿಸಿದ್ದನು. ಪುತ್ರಿಯ ಬೇಡಿಕೆಗೆ ಇಲ್ಲ ಎನ್ನಲಾಗದ ಅಧಿಕಾರಿ ಆಕೆಯ ತಂದೆಗೆ ಮರಳಿ ಕೆಲಸ ಕೊಡಿಸಿದ್ದಾರೆ.

ಹೌದು... ಏಳೆಂಟು ವರ್ಷದ ಬಾಲೆ ಭೂಮಿಕಾ ವೈದ್ಯಕೀಯ ಲೋಪದಿಂದ ಎಡಗೈಯನ್ನು ಭಾಗಶಃ ಕಳೆದುಕೊಂಡಿದ್ದಳು. ಆದರೆ ಈಕೆ ತನ್ನ ಜೀವನೋತ್ಸಾಹ ಮಾತ್ರ ಕಳೆದುಕೊಂಡಿಲ್ಲ. ಆದ್ದರಿಂದ ಆಕೆ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರ ಬಳಿ ತಂದೆಯೊಂದಿಗೆ ಬಂದಿದ್ದಾಳೆ. ಆಗ ಆಕೆಯನ್ನು ಮಾತನಾಡಿಸಿದ ಅನ್ಬು ಕುಮಾಅರ್ ಗೆ 'ನನ್ನ ತಂದೆಗೆ ಕೆಲ್ಸ ಕೊಡಿಸಿ ಸರ್' ಎಂದು ಮುಗ್ಧತೆಯಿಂದ ಕೇಳಿದ್ದಾಳೆ. ಈ ಬೇಡಿಕೆಗೆ ಮರುಗಿ ಇಲ್ಲವೆನ್ನಲಾದ ಅನ್ಬು ಕುಮಾರ್ ಅವರು ಲೋಕೇಶ್ ಗೆ ಮರಳಿ ಕೆಲಸ ಕೊಡಿಸಿದ್ದಾರೆ. ಅಲ್ಲದೆ ಮತ್ತೊಮ್ಮೆ ಇದೇ ರೀತಿ ಗೈರು ಹಾಜರಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article