ಬಸ್ ಖಾಲಿ ಇತ್ತೆಂದು ಅಲ್ಲೂ ವ್ಯಾಯಾಮ ಮಾಡಿದ ಶಿಲ್ಪಾ ಶೆಟ್ಟಿ: ವೀಡಿಯೋ ಹಂಚಿಕೊಂಡ ನಟಿ

ಮುಂಬೈ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿಯವರು ತಮ್ಮ ಆರೋಗ್ಯ ಹಾಗೂ ಆಹಾರದ ವಿಚಾರದಲ್ಲಿ ಕಾಳಜಿ ವಹಿಸುತ್ತಿರುವ ವಿಚಾರ ಬಹುತೇಕರಿಗೆ ಗೊತ್ತಿರುವಂಥದ್ದೇ. ನಟಿ ಶಿಲ್ಪಾ ಶೆಟ್ಟಿಯವರು ಆಗಾಗ ತಮ್ಮ ಫಿಟ್​ನೆಸ್​ ಹಾಗೂ ಫುಡ್ ಹ್ಯಾಬಿಟ್​ಗಳ ಕುರಿತು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೂ ಇರುತ್ತಾರೆ.


ಅದಲ್ಲದೆ ಫಿಟ್​ನೆಸ್​ ಕುರಿತು ಪುಸ್ತಕವನ್ನೂ ಬರೆದಿರುವ ನಟಿ ಶಿಲ್ಪಾ ಶೆಟ್ಟಿ, ಅವಕಾಶ ದೊರಕಾಗಲೆಲ್ಲಾ ಉತ್ತಮ ಆಹಾರ ಸೇವನೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಮಾಹಿತಿಗಳನ್ನು ತಮ್ಮ ಅಭಿಮಾನಿಗಳಿಗೆ ತಿಳಿಸುವ ಪ್ರಯತ್ನ ಮಾಡುತ್ತಿತ್ತಾರೆ. ಅಂಥಹದ್ದೇ ಒಂದು ಪ್ರಯತ್ನವೊಂದನ್ನು ಇತ್ತೀಚೆಗೆ ಅವರು ಮಾಡಿದ್ದಾರೆ. 


ತಾವು ಚಲಿಸುತ್ತಿದ್ದ ಬಸ್​ ಖಾಲಿಯಿತ್ತೆಂದು ಶಿಲ್ಪಾ ಶೆಟ್ಟಿಯವರು ಅಲ್ಲಿಯೂ ವ್ಯಾಯಾಮ ಮಾಡಿದ್ದಾರೆ. ಅದರ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಬರೆದಿರುವ ಅವರು ‘ಇಂದು ಮನೆಗೆ ಮರಳುವ ವೇಳೆಯಲ್ಲಿ ಬಸ್​ ಖಾಲಿ ಇತ್ತು, ಹಾಗಾಗಿ ಒಂದಷ್ಟು ಪುಷ್​ ಅಪ್ಸ್​, ಪುಲ್​ ಅಪ್ಸ್ ಮಾಡಿದೆ, ಮಿಷನ್ಸ್ ಅಕಂಪ್ಲಿಷ್ಡ್..’ ಎಂದು ಅವರು ಬರೆದುಕೊಂಡಿದ್ದಾರೆ.