
ಇಂದು ಶಾಲೆಗಳಿಗೆ ರಜೆ: ಬೆಳ್ಳಂಬೆಳಗ್ಗೆ ರಜೆ ಘೋಷಿಸಿದ ಡಿಸಿ
5/18/2022 08:02:00 PM
ಇಂದು ಶಾಲೆಗಳಿಗೆ ರಜೆ: ಬೆಳ್ಳಂಬೆಳಗ್ಗೆ ರಜೆ ಘೋಷಿಸಿದ ಡಿಸಿ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮೇ.19ರ ಗುರುವಾರ ಒಂದು ದಿನ ರಜೆ ಘೋಷಿಸಲಾಗಿದೆ.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಆದೇಶ ನೀಡಿದ್ದು, ವಾರ್ತಾ ಇಲಾಖೆ ಮೂಲಕ ಈ ವಿಷಯವನ್ನು ಸಾರ್ವಜನಿಕರಿಗೆ ಪ್ರಕಟಿಸಲಾಗಿದೆ.