-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Alvas News- ಯಂಗ್ ಇಂಡಿಯನ್ಸ್, ಆಳ್ವಾಸ್ ಮಧ್ಯೆ ನೂತನ ಒಡಂಬಡಿಕೆ

Alvas News- ಯಂಗ್ ಇಂಡಿಯನ್ಸ್, ಆಳ್ವಾಸ್ ಮಧ್ಯೆ ನೂತನ ಒಡಂಬಡಿಕೆ

ಯಂಗ್ ಇಂಡಿಯನ್ಸ್, ಆಳ್ವಾಸ್ ಮಧ್ಯೆ ನೂತನ ಒಡಂಬಡಿಕೆ





ಮೂಡುಬಿದಿರೆ: ಕಾನ್ಫೆಡೆರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ)ಯ ಭಾಗವಾಗಿರುವ ಯಂಗ್ ಇಂಡಿಯನ್ಸ್ (ವೈಐ) ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನಡುವೆ ನೂತನ ಒಡಂಬಡಿಕೆಗೆ ಸಹಿ ಹಾಕಲಾಯಿತು.


ಸರ್ಕಾರೇತರ ಸಾಮಾಜಿಕ ಸಂಸ್ಥೆಯಾಗಿರುವ ಸಿಐಐ ಉದ್ಯಮ ಸಲಹಾ ಪ್ರಕ್ರಿಯೆ ಮೂಲಕ ಭಾರತದಲ್ಲಿ ಕೈಗಾರಿಕಾ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುವ ಗುರಿ ಹೊಂದಿದೆ. ಈ ಕರಾರು ಒಪ್ಪಂದ ಮೂಲಕ ವಿದ್ಯಾರ್ಥಿ ಪರಿಕಲ್ಪನೆ ಶಿಕ್ಷಣ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ಮತ್ತು ಅವಕಾಶಗಳನ್ನು ಒದಗಿಸಲು ಯಂಗ್ ಇಂಡಿಯನ್ಸ್ ನೆರವಾಗಲಿದೆ.


ತಮ್ಮ ನಾಯಕತ್ವ ಗುಣಗಳನ್ನು ವೃದ್ಧಿಸುವ ಮತ್ತು ದೇಶಕ್ಕೆ ಮರಳಿ ನೀಡುವ ವಿಶಾಲ ಉದ್ದೇಶದೊಂದಿಗೆ ಕ್ರಾಸ್ ಫಂಕ್ಷನಲ್ ತಂಡಗಳಲ್ಲಿ ಸೇವೆ ಸಲ್ಲಿಸುವ ವೇದಿಕೆಯಾಗಲು ಈ ಒಪ್ಪಂದದಿಂದ ಸಾಧ್ಯವಿದೆ. ಇದರ ಭಾಗವಾಗಿ, ಸ್ವಯಂ-ಅಭಿವೃದ್ಧಿ, ಕೌಶಲ್ಯ ನಿರ್ಮಾಣ, ಸಮುದಾಯ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಆಧಾರದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನದಲ್ಲಿ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ.


ಯಂಗ್ ಇಂಡಿಯನ್ಸ್ ಸಹಯೋಗದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು:


ದೇಶದಾದ್ಯಂತ 57 ಚಾಪ್ಟರ್ ಯಂಗ್ ಇಂಡಿಯನ್ಸ್ ಹೊಂದಿರುವ ಯಂಗ್ ಇಂಡಿಯನ್ಸ್ 4 ಸಾವಿರಕ್ಕೂ ಅಧಿಕ ಸದಸ್ಯರು ಹಾಗೂ ವಿವಿಧ ಕಾಲೇಜುಗಳ 30 ಸಾವಿರದಷ್ಟು ಸದಸ್ಯರನ್ನು ಒಳಗೊಂಡಿದೆ. ಸಂಸ್ಥೆಯ ಮಂಗಳೂರು ಚಾಪ್ಟರ್ ಸಹಯೋಗದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಪಣಂಬೂರು ಬೀಚ್ ನಲ್ಲಿ ಬೀಚ್ ಕ್ಲೀನಿಂಗ್ ಕಾರ್ಯಕ್ರಮ ನಡೆಸಿದ್ದರು.


ಒಡಂಬಡಿಕೆ ಅಂಗವಾಗಿ ಆಳ್ವಾಸ್ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ಟಿಯಾ ಚತುರ್ವೇದಿ ನಿರ್ದೇಶನದ ಹಾಗೂ ಸುವೀನ್ ಪೂಜಾರಿ DOP ಮಾಡಿರುವ ತುಳುನಾಡಿನ ಇತಿಹಾಸ ಸಾರುವ ರಾಣಿ ಅಬ್ಬಕ್ಕ ಬಾಯಿ ಸಂಶೋಧನಾತ್ಮಕ ಸಾಕ್ಷ್ಯ ಚಿತ್ರದ ಪ್ರದರ್ಶನವನ್ನು ಮಿಜಾರಿನ ಎಂಬಿಎ ಕಾಲೇಜಿನಲ್ಲಿ ಏರ್ಪಡಿಸಲಾಯಿತು.


CII ಅಧ್ಯಕ್ಷ ಗೌರವ್ ಹೆಗ್ಡೆ, ಯಂಗ್ ಇಂಡಿಯನ್ಸ್ ಮಂಗಳೂರು ಚಾಪ್ಟರ್ ಮುಖ್ಯಸ್ಥ ಆಶಿತ್ ಹೆಗ್ಡೆ, ಉಪಾಧ್ಯಕ್ಷೆ ಸಮೀಕ್ಷಾ ಶೆಟ್ಟಿ, ಯಂಗ್ ಇಂಡಿಯನ್ಸ್ ಟೂರಿಸಮ್ ವರ್ಟಿಕಲ್ ಹೆಡ್ ಶರಣ್ ಶೆಟ್ಟಿ, ಯಂಗ್ ಇಂಡಿಯನ್ಸ್ ಯುವ ವರ್ಟಿಕಲ್ ಹೆಡ್ ಮಧುಕರ್ ಕುಡ್ವ, ಆಳ್ವಾಸ್ ಸಂಸ್ಥೆಯ ಆಡಳಿತ ಟ್ರಸ್ಟಿ ಡಾ. ವಿವೇಕ್ ಆಳ್ವ, ಆಳ್ವಾಸ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್‌ನ ಪ್ರಿನ್ಸಿಪಾಲ್ ಡಾ. ಪೀಟರ್ ಫೆರ್ನಾಂಡಿಸ್ ಭಾಗವಹಿಸಿದ್ದರು. 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article