-->
ಹನುಮಾನ್ ಚಾಲೀಸ ಪಠಣದ ಹಿನ್ನೆಲೆ: ಮಹಾರಾಷ್ಟ್ರದ ಸಂಸದೆ - ಶಾಸಕ ಅರೆಸ್ಟ್

ಹನುಮಾನ್ ಚಾಲೀಸ ಪಠಣದ ಹಿನ್ನೆಲೆ: ಮಹಾರಾಷ್ಟ್ರದ ಸಂಸದೆ - ಶಾಸಕ ಅರೆಸ್ಟ್

ಮುಂಬೈ: ಲೌಡ್​ ಸ್ಪೀಕರ್​ ಹಿನ್ನೆಲೆಯಲ್ಲಿ ಸೃಷ್ಟಿಯಾಗಿರುವ ಹನುಮಾನ್​ ಚಾಲೀಸ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರು ಶಾಸಕ ಹಾಗೂ ಸಂಸದೆಯನ್ನು ಬಂಧಿಸಿದ್ದಾರೆ. 

ಮಹಾರಾಷ್ಟ್ರ ಸಂಸದೆ ನವ್​ನೀತ್ ರಾಣಾ ಹಾಗೂ ಆಕೆಯ ಪತಿ, ಶಾಸಕರೂ ಆಗಿರುವ ರವಿ ರಾಣಾ ಬಂಧಿತರಾಗಿದ್ದಾರೆ. 

ಈ‌ ಶಾಸಕ - ಸಂಸದರನ್ನು ಮುಂಬೈ ಖಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸಂಸದೆ ಹಾಗೂ ಶಾಸಕರನ್ನು ಪೊಲೀಸರು ನಾಳೆ ನ್ಯಾಯಾಲಯಕ್ಕೆ ಒಪ್ಪಿಸಲಿದ್ದಾರೆ. ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನಿವಾಸ ಮಾತೋಶ್ರೀ ಮುಂಭಾಗ ಹನುಮಾನ್ ಚಾಲೀಸ ಪಠಿಸುವುದಾಗಿ ಶಾಸಕ ರವಿ ರಾಣಾ ಹಾಗೂ ಸಂಸದೆ ನವ್​ನೀತ್ ರಾಣಾ ದಂಪತಿ ಬೆದರಿಕೆ ಒಡ್ಡಿದ್ದರು. ಈ ಹಿನ್ನೆಲೆಯಲ್ಲಿ ಶಿವಸೇನೆಯ ಕಾರ್ಯಕರ್ತರು ನಗರದ ಹಲವೆಡೆ ಜಮಾಯಿಸಿದ್ದಲ್ಲದೆ, ಮಾತೋಶ್ರೀ ಮುಂದೆಯೂ ಸೇರಿದ್ದರು. ಅಲ್ಲದೆ ಶಿವಸೇನೆ ಕಾರ್ಯಕರ್ತರ ದೂರಿನ ಮೇರೆಗೆ ಪೊಲೀಸರು ಇವರನ್ನು ಬಂಧಿಸಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100