-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ ಬಯಲು: ಸೊಸೆ ಸೇರಿದಂತೆ ಇಬ್ಬರು ಅರೆಸ್ಟ್

ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ ಬಯಲು: ಸೊಸೆ ಸೇರಿದಂತೆ ಇಬ್ಬರು ಅರೆಸ್ಟ್

ರಾಮನಗರ: ಇಲ್ಲಿನ ಬಿಡದಿಯ ಬಾನಂದೂರು ಭೈರವನದೊಡ್ಡಿ ಬಳಿ ಫೆಬ್ರವರಿಯಲ್ಲಿ ನಡೆದಿರುವ ಕಾಂಗ್ರೆಸ್​ ಮುಖಂಡರೋರ್ವರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೃತರ ಸೊಸೆ ಸೇರಿದಂತೆ ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ. 

ಫೆ.25ರಂದು ಕಾಂಗ್ರೆಸ್​ ಮುಖಂಡ ಗಂಟಪ್ಪ (55) ಎಂಬವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಕೊಲೆಯ ಹಿಂದಿನ ರಹಸ್ಯ ತಿಳಿದು ಬಂದಿದೆ. ಗಂಟಪ್ಪರನ್ನು ಅವರ ಸೊಸೆ ಚೈತ್ರಾಳೇ ಕೊಲೆ ಮಾಡಿರುವುದು ತಿಳಿದು ಬಂದಿದೆ.

ಗಂಟಪ್ಪ ತನ್ನ ಪುತ್ರ ನಂದೀಶ್​ ಹಾಗೂ ಚೈತ್ರಾಳ ವಿವಾಹವನ್ನು ಸಮ್ಮತಿಸರಲಿಲ್ಲ. ಆದರೆ ವಿರೋಧದ ಮಧ್ಯೆಯೂ ಮದುವೆಯಾದ ಈ ಇಬ್ಬರನ್ನೂ 2 ವರ್ಷಗಳಿಂದ ಗಂಟಪ್ಪ ಮನೆಗೆ ಸೇರಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಚೈತ್ರಾ, ನವೀನ್​ ಎಂಬಾತನೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಾಳೆ. ಇದಕ್ಕಾಗಿ ತನ್ನ 30 ಗ್ರಾಂ ಚಿನ್ನದ ಸರವನ್ನು ಮುಂಗಡವಾಗಿ ನೀಡಿದ್ದಳು. ಮತ್ತಷ್ಟು ಹಣ ಕೊಡುತ್ತೇನೆಂದು ಭರವಸೆಯನ್ನೂ ನೀಡಿದ್ದಳು. 

ಅದರಂತೆ ಫೆ.25ರಂದು ಗಂಟಪ್ಪನನ್ನು ಕೊಲೆ ಮಾಡಲಾಗಿತ್ತು. ಸುಮಾರು 50 ದಿನಗಳ ಸತತ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ಮತ್ತು ಆಯುಧಗಳನ್ನು ವಶ ಪಡಿಸಿಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article

ಸುರ