-->
ಭಾರತದ ಮಾಜಿ ಆರಂಭಿಕ 66 ವರ್ಷದ ಬ್ಯಾಟ್ಸ್ ಮ್ಯಾನ್ ಗೆ 28 ವರ್ಷಕ್ಕಿಂತ ಸಣ್ಣವಳೊಂದಿಗೆ ಎರಡನೇ ವಿವಾಹ!

ಭಾರತದ ಮಾಜಿ ಆರಂಭಿಕ 66 ವರ್ಷದ ಬ್ಯಾಟ್ಸ್ ಮ್ಯಾನ್ ಗೆ 28 ವರ್ಷಕ್ಕಿಂತ ಸಣ್ಣವಳೊಂದಿಗೆ ಎರಡನೇ ವಿವಾಹ!

ಕೋಲ್ಕತ್ತಾ​: ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಅರುಣ್​ ಲಾಲ್​ ತಮ್ಮ 66ನೇ ವಯಸ್ಸಿನಲ್ಲಿ 2ನೇ ಮದುವೆಯಾಗಲಿದ್ದಾರೆ. ಅರುಣ್​ ಲಾಲ್ ಅವರು ತಮಗಿಂತ 28 ವರ್ಷ ಸಣ್ಣವರಾದ ಬುಲ್​ಬುಲ್​ ಸಾಹಾ ಎಂಬಾಕೆಯನ್ನು ​ಮದುವೆಯಾಗಲಿದ್ದಾರಂತೆ.

ಮೇ 2ರಂದು ಕೋಲ್ಕತ್ತಾದ ಹೋಟೆಲ್‌ ಒಂದರಲ್ಲಿ ಈ ಮದುವೆ ನಡೆಯಲಿದೆ ಎಂ‌ಬ ಮಾಹಿತಿಯಿದೆ. ಬುಲ್ ಬುಲ್ ಸಹಾ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಇವಬ್ಬರೂ ಬಹಳ ದಿನಗಳಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದಾರೆ. ಅರುಣ್ ಲಾಲ್ ಸದ್ಯ ಬಂಗಾಳದ ರಣಜಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅರುಣ್​ ಲಾಲ್​ ತಮ್ಮ ಮೊದಲ ಪತ್ನಿ ರೀನಾ ಎಂಬವರಿಗೆ ಪರಸ್ಪರ ಒಪ್ಪಿಗೆಯ ಬಳಿಕ ವಿಚ್ಛೇದನ ನೀಡಿದ್ದಾರೆ. ಮೊದಲ ಪತ್ನಿಯಿಂದ ಒಪ್ಪಿಗೆ ಪಡೆದುಕೊಂಡ ಬಳಿಕ ಅರುಣ್ ಲಾಲ್ ಅವರು ಬುಲ್​ ಬುಲ್​ ಸಾಹಾ ಅವರೊಂದಿಗೆ ಎರಡನೇ ವಿವಾಹವಾಗಲು ತಯಾರಾಗಿದ್ದಾರೆ ಎನ್ನಲಾಗಿದೆ.

ವರದಿಯ ಪ್ರಕಾರ ಅರುಣ್ ಲಾಲ್ ಅವರು ಒಂದು ತಿಂಗಳ ಹಿಂದೆ 38 ವರ್ಷದ ಬುಲ್ ಬುಲ್ ಸಹಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮೇ 2ರಂದು ಇಬ್ಬರೂ ಮದುವೆಯಾಗಲಿದ್ದಾರೆ. ಆದರೆ ಮೊದಲ ಪತ್ನಿ ರೀನಾ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ವಿಚ್ಚೇದನಗೊಂಡಿದ್ದರೂ ಅರುಣ್ ಲಾಲ್ ರೊಂದಿಗೆ ವಾಸಿಸುತ್ತಿದ್ದಾರೆಂದು ತಿಳಿದು ಬಂದಿದೆ. ಅಲ್ಲದೇ ಬುಲ್​ಬುಲ್ ಅವರೊಂದಿಗೆ ವಿವಾಹದ ಬಳಿಕವೂ ಅನಾರೋಗ್ಯ ಪೀಡಿತೆ ರೀನಾ ಅವರನ್ನು ನೋಡಿಕೊಳ್ಳಲಿದ್ದಾರೆ ಎಂಬ ಮಾಹಿತಿಯಿದೆ. ಅರುಣ್​ ಲಾಲ್​ ಅವರ ವಿವಾಹಕ್ಕೆ ಬೆಂಗಾಲ್ ಕ್ರಿಕೆಟ್ ಮಂಡಳಿಯ ಸದಸ್ಯರು ಮತ್ತು ಬೆಂಗಾಲ್ ತಂಡದ ಕ್ರಿಕೆಟಿಗರು ಕೂಡ ಹಾಜರಾಗಲಿದ್ದಾರೆ.

ಅರುಣ್ ಲಾಲ್​ ಭಾರತ ತಂಡದ ಪರ 16 ಟೆಸ್ಟ್ ಮತ್ತು 13 ODI ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 729 ಮತ್ತು 122 ರನ್ ಗಳಿಸಿದ್ದರು. ಅರುಣ್ ಲಾಲ್ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಯಶಸ್ವಿಯಾಗದಿದ್ದರೂ, ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 156 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಅವರು 30 ಶತಕಗಳ ಸಹಿತ 10,421 ರನ್ ಗಳಿಸಿದ್ದಾರೆ. ನಿವೃತ್ತಿ ಬಳಿಕ ಕ್ರಿಕೆಟ್ ಕಾಮೆಂಟೇಟರ್​ ಆಗಿದ್ದ ಅವರಿಗೆ 6 ವರ್ಷಗಳ ಹಿಂದೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅದಕ್ಕೆ ಕಾಮೆಂಟರಿ ಬಿಟ್ಟಿದ್ದ ಅವರು, ಇದೀಗ ಚೇತರಿಸಿಕೊಂಡು ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100