ಮಂಗಳೂರು: ಸಹೋದರಿಯರೀರ್ವರು ಮಲಗಿದ್ದಲ್ಲಿಂದಲೇ ನಾಪತ್ತೆ!

ಮಂಗಳೂರು: ನಗರದ ಬಜ್ಪೆಯ ಕೊಂಚಾರ್ ಎಂಬಲ್ಲಿನ‌ ಬಾಡಿಗೆ ನಿವಾಸಿ ಸಹೋದರಿಯರಿಬ್ಬರು ಕಾಣೆಯಾಗಿರುವ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಬೀನಾ(22) ಹಾಗೂ ಬುಶ್ರಾ (21) ನಾಪತ್ತೆಯಾದ ಸಹೋದರಿಯರು. 

ನಗರದ ಬಜ್ಪೆಯ ಕೊಂಚಾರ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮೂವರು ಸಹೋದರಿಯರಲ್ಲಿ ಮುಬೀನಾ ಹಾಗೂ ಬುಶ್ರಾ ಏಕಾಏಕಿ ನಾಪತ್ತೆಯಾಗಿದ್ದಾರೆ‌. ಫೆ.7ರಂದು ರಾತ್ರಿ ಸುಮಾರು 12.30 ಗಂಟೆ ಸುಮಾರಿಗೆ ಊಟ ಮಾಡಿ ಮಲಗಿದ್ದರು. ಆದರೆ ತಡರಾತ್ರಿ 2 ಗಂಟೆಗೆ ಅವರ ತಂದೆ ಎದ್ದು ನೋಡಿದಾಗ ಕಿರಿಯ ಮಗಳು ಬುಶ್ರಾ ಮನೆಯಲ್ಲಿ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದಾಗ ಮುಬೀನಾ ಕೂಡಾ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಇಬ್ಬರೂ ಎಲ್ಲೂ ಪತ್ತೆಯಾಗಿಲ್ಲ ಎಂದು ಬಜ್ಪೆ ಠಾಣೆಯಲ್ಲಿ ಹೆತ್ತವರು  ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu