-->

ಈತ ದೇಶದ ಮೊತ್ತಮೊದಲ ಡಿಜಿಟಲ್ ಭಿಕ್ಷುಕ: ಈತನಲ್ಲಿದೆ ಕ್ಯೂ ಆರ್ ಕೋಡ್, ಆ ಮೂಲಕವೇ ಹಣ ಪಡೆಯುವ ಹೈಟೆಕ್ ಭಿಕ್ಷುಕ

ಈತ ದೇಶದ ಮೊತ್ತಮೊದಲ ಡಿಜಿಟಲ್ ಭಿಕ್ಷುಕ: ಈತನಲ್ಲಿದೆ ಕ್ಯೂ ಆರ್ ಕೋಡ್, ಆ ಮೂಲಕವೇ ಹಣ ಪಡೆಯುವ ಹೈಟೆಕ್ ಭಿಕ್ಷುಕ

ಬೆಟ್ಟಿಯಾ: ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಕ್ರಾಂತಿಯಿಂದ ಎಲ್ಲೆಡೆ ಕ್ಯಾಶ್ ಲೆಸ್ ವ್ಯವಹಾರವೇ ನಡೆಯುತ್ತಿದೆ. ಈ ಕಾರಣದಿಂದ ಬಹಳಷ್ಟು ಮಂದಿ ಪರ್ಸ್ ನಲ್ಲಿ ಹಣ ಇಟ್ಟುಕೊಳ್ಳುವುದೇ ಕಡಿಮೆ ಮಾಡಿದ್ದಾರೆ. ಇತ್ತೀಚಿನ‌ ದಿನಗಳಲ್ಲಿ ಹೆಚ್ಚಿನವರು ಏನೇ ವ್ಯವಹಾರಗಳು ಮಾಡಬೇಕಿದ್ದರೂ ಗೂಗಲ್ ಪೇ, ಫೋನ್ ಪೇ, ಕ್ಯೂ ಆರ್ ಕೋಡ್ ಮೂಲಕವೇ ಹಣ ಪಾವತಿಸುತ್ತಾರೆ.

ಈ ಡಿಜಿಟಲ್ ವ್ಯವಹಾರವು ವಿದ್ಯಾವಂತರಿಗೆ ಮಾತ್ರ ತಿಳಿದಿತ್ತು. ಆದರೆ ಇತ್ತೀಚೆಗೆ ಈ ಡಿಜಿಟಲ್ ವ್ಯವಹಾರ ಹೆಚ್ಚು ಹೆಚ್ಚು ಪ್ರಚಲಿತಗೊಳ್ಳುತ್ತಿರುವುದರಿಂದ ಅಲ್ಪ, ಸ್ವಲ್ಪ ಜ್ಞಾನವಿದ್ದವರೂ ಕೂಡ ಡಿಜಿಟಲ್ ವ್ಯವಹಾರ ಮಾಡುತ್ತಾರೆ. ಇಂಥವರ ಮಧ್ಯೆ ಹೈಟೆಕ್ ಭಿಕ್ಷುಕನೋರ್ವನು ಇಡೀ ದೇಶದ ಗಮನ ಸೆಳೆದಿದ್ದಾನೆ.

ಅಂದ ಹಾಗೆ ಹೈಟೆಕ್ ಭಿಕ್ಷುಕನ ಹೆಸರು ರಾಜು. ಬಿಹಾರದ ಬೆಟ್ಟಿಯಾ ರೈಲ್ವೇ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಾನೆ. ಭಿಕ್ಷೆ ಬೇಡುವುದರಲ್ಲಿ ಇವನಿಗೆ 30 ವರ್ಷದ ಅನುಭವವಿದೆ. ಇತ್ತೀಚಿಗೆ ಯಾರನ್ನು ಕೇಳಿದರೂ ಚಿಲ್ಲರೆ ಇಲ್ಲ ಎಂದೇ ಹೇಳುತ್ತಿದ್ದರು. ಅದಕ್ಕಾಗಿ ಈ ಡಿಜಿಟಲ್ ವ್ಯವಹಾರದ ಉಪಾಯ ಮಾಡಿದ್ದಾನೆ. ಬೆಟ್ಟಿಯಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಅಕೌಂಟ್ ಓಪನ್ ಮಾಡಲು ಈತ ಹೋಗಿದ್ದಾನೆ. ಆದರೆ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ತರಲು ಬ್ಯಾಂಕ್ ಸಿಬ್ಬಂದಿ ಹೇಳಿದರು.

ಆಧಾರ್ ಇತ್ತಾದರೂ ಪ್ಯಾನ್ ಕಾರ್ಡ್ ಇರಲಿಲ್ಲ. ಆ ಬಳಿಕ ಆರು ತಿಂಗಳಾದ ಮೇಲೆ ಪ್ಯಾನ್ ಕಾರ್ಡ್ ಮಾಡಿಸಿಕೊಂಡು ಮತ್ತೆ ಬ್ಯಾಂಕ್ ಗೆ ಬಂದು ಖಾತೆ ತೆರೆದಿದ್ದಾನೆ. ಅಷ್ಟೆ ಅಲ್ಲದೆ ಇ-ವ್ಯಾಲೆಟ್ ಅರ್ಥಾತ್ ಕ್ಯೂ ಆರ್ ಕೋಡ್ ಅನ್ನು ಕೂಡ ಅದೇ ಬ್ಯಾಂಕ್ ನಿಂದಲೇ ಪಡೆದಿದ್ದಾನೆ. ಈತನ ಬಳಿ ಟ್ಯಾಬ್ ಕೂಡ ಇದೆ. ಈಗ ಭಿಕ್ಷೆ ಕೇಳಿದಾಗ ಚಿಲ್ಲರೆ ಇಲ್ಲ ಎಂದು ಯಾರೂ ಈತನನ್ನು ಸಾಗ ಹಾಕಲು ಸಾಧ್ಯವಿಲ್ಲ. ಚಿಲ್ಲರೆ ಇಲ್ಲವೆಂದರೆ ಕ್ಯೂ ಆರ್ ಕೋಡ್ ನಲ್ಲಿ ಸ್ಕ್ಯಾನ್ ಮಾಡಿ ಹಣವನ್ನು ಟ್ರಾನ್ಸ್ ಫರ್ ಮಾಡುವಂತೆ ಈತ ವಿನಂತಿಸುತ್ತಾನೆ. ಈ ಮೂಲಕ ರಾಜು ಈಗ ದೇಶದ ಮೊದಲ ಡಿಜಿಟಲ್ ಅಥವಾ ಹೈಟೆಕ್ ಭಿಕ್ಷುಕನಾಗಿದ್ದಾನೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article