-->
ಪ್ರಾಂಶುಪಾಲರು, ವಿದ್ಯಾರ್ಥಿಗಳ ಹೆಸರು ಉಲ್ಲೇಖಿಸಿ ಡೆತ್ ನೋಟ್ ಬರೆದು ರೈಲಿನಡಿ ತಲೆಯಿಟ್ಟು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

ಪ್ರಾಂಶುಪಾಲರು, ವಿದ್ಯಾರ್ಥಿಗಳ ಹೆಸರು ಉಲ್ಲೇಖಿಸಿ ಡೆತ್ ನೋಟ್ ಬರೆದು ರೈಲಿನಡಿ ತಲೆಯಿಟ್ಟು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

ಬೆಂಗಳೂರು: ಇಲ್ಲಿನ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯೋರ್ವಳು ಶಾಲೆಯ ಪ್ರಾಂಶುಪಾಲರು ಸೇರಿದಂತೆ ಕೆಲ ವಿದ್ಯಾರ್ಥಿಗಳ ಹೆಸರನ್ನು ಡೆತ್‌ನೋಟ್‌ ಉಲ್ಲೇಖಿಸಿ ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರ ರೈಲ್ವೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಟಿ.ದಾಸರಹಳ್ಳಿಯ ನಿವಾಸಿ ಕೆ.ಎಸ್‌.ರಮ್ಯಾ ಮೂರ್ತಿ (15) ಮೃತಪಟ್ಟ ವಿದ್ಯಾರ್ಥಿನಿ.

ಕೆ.ಎಸ್.ರಮ್ಯಾ ತಂದೆ ಆಂಗ್ಲಮುದ್ರಣ ಮಾಧ್ಯಮದಲ್ಲಿ ಪೇಜ್‌ ಡಿಸೈನರ್‌ ಆಗಿದ್ದು, ತಾಯಿ ಶಿಕ್ಷಕಿಯಾಗಿದ್ದರು. ಈಕೆ ಟಿ.ದಾಸರಹಳ್ಳಿಯಲ್ಲಿನ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ರಮ್ಯಾ ಐದಾರು ತಿಂಗಳ ಹಿಂದೆ ಶಾಲೆಗೆ ಸ್ನ್ಯಾಕ್ಸ್‌ ಕೊಂಡೊಯ್ದಿದ್ದಳು. ಇದನ್ನು ಶಾಲಾ ಆಡಳಿತ ಮಂಡಳಿಯು ಆಕ್ಷೇಪಿಸಿ, ಆಕೆಯ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿದ್ದರು. 

ಇದರಿಂದ ಮುನಿಸಿಕೊಂಡ ರಮ್ಯಾ ತಾಯಿ ಮಾನವ ಹಕ್ಕು ಸಂಸ್ಥೆಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದರು. ಇದೇ ವಿಚಾರಕ್ಕೆ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಕೆಲವರು ಆಕೆಗೆ ಕಿರುಕುಳ ನೀಡುತ್ತಿದ್ದರು. ಪರಿಣಾಮ ಮನನೊಂದ ರಮ್ಯಾ ಗುರುವಾರ ಬೆಳಗ್ಗೆ ವಾಯುವಿಹಾರಕ್ಕೆ ಹೋಗಿದ್ದ ಸಂದರ್ಭ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಆತ್ಮಹತ್ಯೆಗೂ ಮುನ್ನ ರಮ್ಯಾ ಡೆತ್‌ನೋಟ್‌ ಬರೆದಿದ್ದು, ಅದರಲ್ಲಿ ‘I hate you principal’ ಹಾಗೂ ಕೆಲ ವಿದ್ಯಾರ್ಥಿಗಳ ಹೆಸರು ಉಲ್ಲೇಖಿಸಿ, “ಎಲ್ಲರನ್ನೂ ವಿರೋಧಿಸುತ್ತೇನೆ’ ಎಂದು ಬರೆದಿದ್ದಾರೆ. ಈ ಬಗ್ಗೆ ಯಶವಂತಪುರ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
Ads on article

Advertise in articles 1

advertising articles 2

Advertise under the article