-->

ಆನ್ ಲೈನ್ ನಲ್ಲಿ‌ ವಾಚ್ ಆರ್ಡರ್ ಮಾಡಿರುವ ಗ್ರಾಹಕನಿಗೆ ಬಂದಿದ್ದು ಕಾಂಡೊಮ್: ಮರುಕ್ಷಣವೇ ಡೆಲಿವರಿ ಏಜೆಂಟ್ ಗಳಿಗೆ ಕಾದಿತ್ತು ಶಾಕ್

ಆನ್ ಲೈನ್ ನಲ್ಲಿ‌ ವಾಚ್ ಆರ್ಡರ್ ಮಾಡಿರುವ ಗ್ರಾಹಕನಿಗೆ ಬಂದಿದ್ದು ಕಾಂಡೊಮ್: ಮರುಕ್ಷಣವೇ ಡೆಲಿವರಿ ಏಜೆಂಟ್ ಗಳಿಗೆ ಕಾದಿತ್ತು ಶಾಕ್

ಕೊಚ್ಚಿ: ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ನಲ್ಲಿ ಬುಕ್​ ಮಾಡಿರುವ ಪ್ರಾಡಕ್ಟ್​ ಗಳಿಗೆ ಬದಲಾಗಿ ಬೇರೆ ವಸ್ತುಗಳು​ ಕೈ ಸೇರುವ ಸಾಕಷ್ಟು ಉದಾಹರಣೆಗಳ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಅಂಥಹದ್ದೇ ಮತ್ತೊಂದು ಪ್ರಕರಣವೊಂದು ಕೇರಳದಲ್ಲಿ ಬೆಳಕಿಗೆ ಬಂದಿದೆ. 

ಇಲ್ಲಿ ಆನ್​ಲೈನ್​ಲ್ಲಿ ವಾಚ್ ಬುಕ್​ ಮಾಡಿದ ಗ್ರಾಹಕನಿಗೆ ವಾಚ್ ಬದಲಾಗಿ ಕಾಂಡೊಮ್‌ ಡೆಲಿವರಿಯಾಗಿ ಶಾಕ್ ಕಾದಿತ್ತು. ಈ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಥಟ್ಟಂಪಾಡಿ ನಿವಾಸಿ ಅನಿಲ್​ ಕುಮಾರ್​ ಎಂಬುವರು ಪ್ರಮುಖ ಇ-ಕಾಮರ್ಸ್​ ಸಂಸ್ಥೆಯಲ್ಲಿ 2,200 ರೂ. ಬೆಲೆಯ ವಾಚ್ ಅನ್ನು​ ಬುಕ್​ ಮಾಡಿದ್ದರು. ಶನಿವಾರ ಮಧ್ಯಾಹ್ನ ಇಬ್ಬರು ಡೆಲಿವರಿ ಏಜೆಂಟ್​ಗಳು ಅನಿಲ್​ ಕುಮಾರ್​ ಮನೆಗೆ ಬಂದು ವಾಚ್​ ಡೆಲಿವರಿ ಮಾಡಿದ್ದಾರೆ. 

ಆದರೆ, ಪ್ಯಾಕೆಟ್ ತೂಕ ಜಾಸ್ತಿ ಇರುವುದನ್ನು ಕಂಡು ಅನುಮಾನಗೊಂಡ ಅನಿಲ್​, ತಕ್ಷಣ ಅದನ್ನು ತೆರೆದಿದ್ದಾರೆ. ಆದರೆ ಅದರಲ್ಲಿ ವಾಚ್​ ಬದಲಾಗಿ ಕಾಂಡೋಮ್​ ಹಾಗೂ ಜೊತೆಗಿನ್ನೊಂದಿಷ್ಟು ವಸ್ತುಗಳು ಕಂಡು ಬಂದಿದೆ. ಇದರಿಂದ ಅನಿಲ್​ ಶಾಕ್​ ಗೆ ಒಳಗಾಗಿದ್ದಾರೆ. ಇದಾದ ತಕ್ಷಣ ಡೆಲಿವರಿ ಏಜೆಂಟ್​​ಗಳನ್ನು ತಮ್ಮ ಮನೆಯ ಆವರಣದಲ್ಲಿಯೇ ತಡೆದ ಅನಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಇದು ಕಂಪೆನಿ ಮಾಡಿರುವ ಎಡವಟ್ಟೇ ಅಥವಾ ಸಂಚು ರೂಪಿಸಿ ಮಾಡಿರುವ ವಂಚನೆಯೇ? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ಇಬ್ಬರು ಡಿಲಿವರಿ ಏಜೆಂಟ್​ ಗಳು ಪೊಲೀಸ್​ ವಶದಲ್ಲಿದ್ದಾರೆ.

Ads on article

Advertise in articles 1

advertising articles 2

Advertise under the article