-->

MLC Bhandary appeals CM on Shiradi restriction- ಶಿರಾಡಿ ಘಾಟ್ ಬಂದ್ ಮರುಪರಿಶೀಲಿಸಿ: ಶಾಸಕ ಮಂಜುನಾಥ್ ಭಂಡಾರಿ

MLC Bhandary appeals CM on Shiradi restriction- ಶಿರಾಡಿ ಘಾಟ್ ಬಂದ್ ಮರುಪರಿಶೀಲಿಸಿ: ಶಾಸಕ ಮಂಜುನಾಥ್ ಭಂಡಾರಿ

ಶಿರಾಡಿ ಘಾಟ್ ಬಂದ್ ಮರುಪರಿಶೀಲಿಸಿ: ಶಾಸಕ ಮಂಜುನಾಥ್ ಭಂಡಾರಿ






ಶಿರಾಡಿ ಘಾಟ್ ರಸ್ತೆಯನ್ನು 6 ತಿಂಗಳ ಕಾಲ ಮುಚ್ಚುವ ಪ್ರಸ್ತಾವವನ್ನು ಮರುಪರಿಶೀಲಿಸುವಂತೆ ವಿಧಾನ ಪರಿಷತ್ ನ ನೂತನ ಸದಸ್ಯ ಮಂಜುನಾಥ ಭಂಡಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.




ರಾಷ್ಟ್ರೀಯ ಹೆದ್ದಾರಿ 75ರಲ್ಲಿ ದೋಣಿಗಲ್‌ನಿಂದ ಮಾರನಹಳ್ಳಿವರೆಗಿನ 10 ಕಿ.ಮೀ ಉದ್ದದ ಚತುಷ್ಪಥ ರಸ್ತೆ ಕಾಮಗಾರಿಗೆ ಶಿರಾಡಿ ಘಾಟ್‌ ರಸ್ತೆಯನ್ನು 6 ತಿಂಗಳ ಕಾಲ ಮುಚ್ಚುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.



ಈ ಬಗ್ಗೆ ಮಾತನಾಡಿದ ಮಂಜುನಾಥ ಭಂಡಾರಿ ಅವರು, ಶಿರಾಡಿ ಘಾಟ್ ರಸ್ತೆಯು ಕರಾವಳಿ ಕರ್ನಾಟಕದ ಜೀವನಾಡಿಯಾಗಿದ್ದು, ಈ ಪ್ರದೇಶದ ವ್ಯಾಪಾರ ಸಂಸ್ಥೆಗಳು ಮತ್ತು ಪ್ರಮುಖ ಕೈಗಾರಿಕೆಗಳಾದ MRPL, MCF ಹಾಗೂ ನವ ಮಂಗಳೂರು ಬಂದರು ತಮ್ಮ ಕಾರ್ಯನಿರ್ವಹಣೆಗಾಗಿ ಶಿರಾಡಿ ಘಾಟ್ ರಸ್ತೆಯನ್ನು ಅವಲಂಬಿಸಿವೆ ಎಂದು ಹೇಳಿದರು.

ಶಿರಾಡಿ ಘಾಟ್ ರಸ್ತೆಯನ್ನು 6 ತಿಂಗಳ ಕಾಲ ಮುಚ್ಚುವುದರಿಂದ ಸಮಾಜದ ಎಲ್ಲಾ ವರ್ಗದ ಜನರು ಸಂಕಷ್ಟಕ್ಕೊಳಗಾಗಲಿದ್ದಾರೆ. ಕರಾವಳಿ ಭಾಗದ ವ್ಯಾಪಾರ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಪ್ರಮುಖವಾಗಿ ಅಡಚಣೆಯಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.




ಕಳೆದ 2 ಬಾರಿ ಶಿರಾಡಿ ಘಾಟ್ ನ್ನು 6 ತಿಂಗಳು ಬಂದ್ ಮಾಡಿದಾಗ ಇಲ್ಲಿ ತೀವ್ರ ತೊಂದರೆಯಾಗಿತ್ತು. ಇದರಿಂದ ಅಲ್ಪ ಅವಧಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳಿಗೆ ಅವರು ಮನವಿ ಮಾಡಿದ್ದಾರೆ.



ಇದನ್ನು ಸಾಧಿಸಲು ಆಧುನಿಕ ಯಂತ್ರೋಪಕರಣಗಳು, ತಂತ್ರಜ್ಞಾನಗಳು ಮತ್ತು ಸಾಮಗ್ರಿಗಳನ್ನು ಬಳಸಿಕೊಂಡು ರಸ್ತೆ ನಿರ್ಮಿಸಲು, ಏಕಕಾಲದಲ್ಲಿ ಅನೇಕ ಹಂತಗಳಲ್ಲಿ ಕೆಲಸವನ್ನು ಪ್ರಾರಂಭಿಸಲು ಮತ್ತು ಸಾಮಗ್ರಿಗಳು ಮತ್ತು ಕಾರ್ಮಿಕರಿಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲು ತಜ್ಞರ ಸಹಾಯದಿಂದ ಕಾರ್ಯತಂತ್ರಗಳನ್ನು ಕ್ರಮಬದ್ಧವಾಗಿ ಯೋಜಿಸಲು ಸಲಹೆ ನೀಡಿದರು.



ಹಾಸನ ಜಿಲ್ಲೆಯಲ್ಲಿ 2006ರಲ್ಲಿ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ 100 ಕಿ.ಮೀ ರಸ್ತೆ ಕಾಮಗಾರಿ ಕೇವಲ 90 ದಿನದಲ್ಲಿ ನಡೆದಿದೆ ಎಂದು ಉದಾಹರಣೆ ನೀಡಿದರು. ಕ್ಷಿಪ್ರ ಗತಿಯ ರಸ್ತೆ ನಿರ್ಮಾಣದಲ್ಲಿ ನಮ್ಮ ದೇಶ ವಿಶ್ವದಾಖಲೆ ಬರೆದಿದೆ ಎಂಬ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿಕೆಯ ಮಾಧ್ಯಮ ವರದಿಯನ್ನೂ ಭಂಡಾರಿ ಅವರು ಉಲ್ಲೇಖಿಸಿದರು.



ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಿರಾಡಿ ಘಾಟ್ ಅನ್ನು 6 ತಿಂಗಳ ಕಾಲ ಮುಚ್ಚುವ ಪ್ರಸ್ತಾವವನ್ನು ಮುಖ್ಯಮಂತ್ರಿಗಳು ಮರುಪರಿಶೀಲಿಸುತ್ತಾರೆ ಎಂಬ ಭರವಸೆ ನನಗಿದೆ ಎಂದರು.

Ads on article

Advertise in articles 1

advertising articles 2

Advertise under the article