Mangaluru: ಹಿಂದೂ ಎಂಬಿಬಿಎಸ್ ವಿದ್ಯಾರ್ಥಿನಿ ಫೋಟೊ ಮುಸ್ಲಿಂ ಯುವಕನ ಫೋಟೊದೊಂದಿಗೆ ಎಡಿಟ್, ವೈರಲ್; ದೂರು ದಾಖಲು

ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಹಿಂದೂ ವಿದ್ಯಾರ್ಥಿನಿಯ ಫೋಟೋವನ್ನು ಮುಸ್ಲಿಂ ಯುವಕನ ಫೋಟೊದೊಂದಿಗೆ ಎಡಿಟ್ ಮಾಡಿ ಇಬ್ಬರಿಗೂ ಸಂಬಂಧವಿದೆಯೆಂದು ಅಪಪ್ರಚಾರ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ  ವಿರುದ್ಧ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿದ್ಯಾರ್ಥಿನಿ ಮಂಗಳೂರಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ತೃತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಳು. ಆಕೆಯ  ಫೋಟೋವನ್ನು ಇನ್ ಸ್ಟಾಗ್ರಾಂ ಪೇಜ್ ನಿಂದ ಕಳವುಗೈಯ್ಯಲಾಗಿತ್ತು. ಆ ಫೋಟೋವನ್ನು ಮುಸ್ಲಿಂ ಯುವಕನ ಫೋಟೊದೊಂದಿಗೆ ಎಡಿಟ್ ಮಾಡಿ 'ಮುಲ್ಲಾ ರಹಿಮಾನ್ ಜೊತೆಗೆ ಕುಚಿಕು ಇದೆಯೆಂದು' ವೈರಲ್ ಮಾಡಲಾಗಿತ್ತು. 

ಈ ಎಡಿಟೆಡ್ ಫೋಟೋವನ್ನು ಕೆಲವು ಸಾಮಾಜಿಕ ಜಾಲತಾಣಗಳ ಪೇಜ್ ಗಳಲ್ಲಿ ವೈರಲ್ ಮಾಡಲಾಗಿತ್ತು. ಕೊನೆಗೇ ಈ ಎಡಿಟೆಡ್ ಫೋಟೋ ವಿದ್ಯಾರ್ಥಿನಿಗೂ ದೊರಕಿತ್ತು. ಇದೇ ವೇಳೆ, ಮುಸ್ಲಿಂ ಯುವಕನೊಂದಿಗೆ ಹಿಂದೂ ವಿದ್ಯಾರ್ಥಿನಿಯ ಕುಚಿಕು ಅನ್ನುವ ವಿಚಾರ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ತಿಳಿದು ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಆ ಬಳಿಕ, ಈ ಫೋಟೋಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಅನ್ನುವುದು ಗೊತ್ತಾಗಿತ್ತು. 

ಇದೀಗ ವಿದ್ಯಾರ್ಥಿನಿಯ ಕುಟುಂಬಸ್ಥರು ಘಟನೆಯ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu