ಲಂಚ ಸ್ವೀಕರಿಸಿದ ಅಧಿಕಾರಿಗಳಿಗೆ ಜೈಲೂಟ- ಮನೆಗೆ ಎಸಿಬಿ ದಾಳಿ, ಮಹತ್ವದ ದಾಖಲೆ ವಶ
ಭೂ ಪರಿವರ್ತನೆಯ ಕಾರ್ಯಕ್ಕಾಗಿ ಲಕ್ಷಾಂತರ ರೂಪಾಯಿ ಲಂಚ ಸ್ವೀಕರಿಸಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ, ಸಹಾಯಕ ನಿರ್ದೇಶಕ ಗುರುಪ್ರಸಾದ್ ಸಹಿತ ಮೂರು ಅಧಿಕಾರಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಾಣಿಜ್ಯ ಭೂಮಿಯ ಭೂ ಪರಿವರ್ತನೆಗಾಗಿ ಆರೋಪಿಗಳು ಉಡುಪಿಯ ರೇಷ್ಮಾ ನಾಯಕ್ ಅವರಿಂದ ಅವರಿಂದ ಮೂರು ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾರೆ.
ಈ ಲಂಚದ ಹಣ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದು ಪ್ರಮುಖ ಆರೋಪಿ ಗುರುಪ್ರಸಾದ್ ನಿಂದ ಎರಡುವರೆ ಲಕ್ಷ ರೂಪಾಯಿ ಯನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪ್ರಾಧಿಕಾರದ ನಗರ ಯೋಜನಾ ಸದಸ್ಯ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್, ಸಹಾಯಕ ಯೋಜನ ಸದಸ್ಯ ನೈನ ಸಯ್ಯಿದ್ ಹಾಗೂ ಹೊರಗುತ್ತಿಗೆ ನೌಕರರ ಶಿವಪ್ರಸಾದ ಅವರನ್ನು ಬಂಧಿಸಿದ್ದರು.
ಇದೇ ವೇಳೆ ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಭ್ರಷ್ಟಾಚಾರ ನಿಗ್ರಹ ದಳ ಎಸಿಬಿ ಅಧಿಕಾರಿಗಳು ಆರೋಪಿ ಗುರುಪ್ರಸಾದ್ ನ ಮಂಗಳೂರಿನಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಶೋಧ ಕಾರ್ಯ ನಡೆಸಿದ ವೇಳೆ ಈ ಮನೆಯಲ್ಲಿ ಅಪಾರ ಪ್ರಮಾಣದ ಆಸ್ತಿ, ನಗದು ಹಣ ಹಾಗೂ ಮಹತ್ವದ ದಾಖಲೆಗಳು ವಶಪಡಿಸಲಾಗಿದೆ ಎಂದು ಹೇಳಲಾಗಿದೆ ತನಿಖೆ ಮುಂದುವರೆದಿದೆ
ಇದನ್ನೂ ಓದಿ
 
 
 
 
 
 
 
 
 
 
 
 
 
 
 
 
