-->
ACB arrest 3 officers- ಎಸಿಬಿ ಕಾರ್ಯಾಚರಣೆ: ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳ ಬಂಧನ

ACB arrest 3 officers- ಎಸಿಬಿ ಕಾರ್ಯಾಚರಣೆ: ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳ ಬಂಧನ

ಎಸಿಬಿ ಕಾರ್ಯಾಚರಣೆ: ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಗಳ ಬಂಧನಸಾಂದರ್ಭಿಕ ಚಿತ್ರ


ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೂವರು ಭ್ರಷ್ಟ ಅಧಿಕಾರಿಗಳನ್ನು ಬಂಧಿಸಲಾಗಿದೆ.


ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರೋಪದಲ್ಲಿ ಮೂವರು ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ


ಪ್ರಕರಣದ ವಿವರ

ವಾಣಿಜ್ಯ ಭೂಮಿಯ ಭೂ ಪರಿವರ್ತನೆಗಾಗಿ ಉಡುಪಿಯ ರೇಷ್ಮಾ ನಾಯಕ್ ಎಂಬವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.


ಈ ಕಾರ್ಯಕ್ಕೆ ಪ್ರಾಧಿಕಾರದ ನಗರ ಯೋಜನಾ ಸದಸ್ಯ ಸಹಾಯಕ ನಿರ್ದೇಶಕರಾದ ಗುರುಪ್ರಸಾದ್, ಸಹಾಯಕ ಯೋಜನ ಸದಸ್ಯ ನೈನ ಸಯ್ಯಿದ್ ಹಾಗೂ ಹೊರಗುತ್ತಿಗೆ ನೌಕರರ ಪ್ರಸಾದ ಸೇರಿ 3 ಲಕ್ಷ ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಬಳಿಕ ಎರಡುವರೆ ಲಕ್ಷಕ್ಕೆ ಒಪ್ಪಿದ್ದರು.


ಈ ಬಗ್ಗೆ ರೇಷ್ಮ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಹಿತಿ ನೀಡಿದ್ದು, ಅದರಂತೆ ಈ ಕಾರ್ಯಾಚರಣೆ ನಡೆಸಲಾಗಿದೆ.


ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಇನ್ಸ್ಪೆಕ್ಟರ್ ಮಂಜುನಾಥ ಕವರಿ ಇನ್ಸ್ಪೆಕ್ಟರ್ ಸತೀಶ ರಫೀಕ್ ಎಂ ಸಿಬ್ಬಂದಿ ಯತಿನ್ ಪ್ರಸನ್ನ ದೇವಾಡಿಗ ಅಬ್ದುಲ್ ಜಲಾಲ್ ರವೀಂದ್ರ ಗಾಣಿಗ ರಾಘವೇಂದ್ರ ಹೊಸಕೋಟೆ ಸೂರಜ್ ಕಾಪು ರಮೇಶ್ ಭಂಡಾರಿ ಪ್ರತಿಮಾ ಮತ್ತು ಶೀತಲ್ ಭಾಗವಹಿಸಿದ್ದರು

Ads on article

Advertise in articles 1

advertising articles 2

Advertise under the article