ತೆಂಗಿನಮರ ಕಡಿಯುತ್ತಿದ್ದ ವೇಳೆ ಮೈಮೇಲೆ ಮರ ಬಿದ್ದು ಯುವಕ ಮೃತ್ಯು!

ಬಂಟ್ವಾಳ: ತೆಂಗಿನಮರ ಕಡಿಯುತ್ತಿದ್ದ ವೇಳೆ ಮರ ಯುವಕನೋರ್ವನ ಮೇಲೆಯೇ ಆತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಂಭೂರು ಗ್ರಾಮದ ನಾಯಿಲದಲ್ಲಿ ನಡೆದಿದೆ.

ನಾಯಿಲ ಬೆಟ್ಟುಗದ್ದೆ ನಿವಾಸಿ ಪುತ್ರ ಯತಿರಾಜ್(37) ಮೃತ ಯುವಕ.

ಯತಿರಾಜ್ ಮರ ಕಡಿಯುವ ಗುತ್ತಿಗೆ ವಹಿಸಿಕೊಳ್ಳುತ್ತಿದ್ದರು. ನಿನ್ನೆ ಅವರು ಸ್ಥಳೀಯರೋರ್ವರ ತೋಟದಲ್ಲಿ ತೆಂಗಿನಮರ ಕಡಿಯಲೆಂದು ಗುತ್ತಿಗೆ ವಹಿಸಿಕೊಂಡಿದ್ದರು. ಮರ ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುಲಾಯಿತ್ತಾದರೂ ಆದಾಗಲೇ ಅವರು ಮೃತಪಟ್ಟಿದ್ದರು. ಯತಿರಾಜ್ ಅವರಿಗೆ ವಿವಾಹವಾಗಿ ಕೇವಲ ನಾಲ್ಕು ತಿಂಗಳಷ್ಟೇ ಆಗಿತ್ತು.
BREAKING NEWS
Loading latest news...
Join our WhatsApp Channel Powered By : Online Pudu